More

    ಈಜಲು ಹೋದ ಯುವಕ ಸಾವು

    ಭರಮಸಾಗರ: ಇಲ್ಲಿನ ದೊಡ್ಡಕೆರೆ ಏತ ನೀರಾವರಿ ಮೂಲಕ ನೀರು ಧುಮ್ಮಿಕ್ಕುವ ಕಾರಂಜಿ ಬಳಿ ಈಜಲು ಹೋದ ಯುವಕ ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಶುಕ್ರವಾರ ನಡೆದಿದೆ. ದುರ್ಗಾಂಬಿಕಾ ಬಡಾವಣೆಯ ನಿವಾಸಿ ಸಮೀರ್ (28) ಮೃತ ಯುವಕ.

    ದೊಡ್ಡಕೆರೆ ಕಾರಂಜಿಯ ಬಳಿ ಈಜಲು ಹೋದಾಗ ನೀರಿನ ಸೆಳೆವಿಗೆ ಸುಲುಕಿ ಮುಳುಗಿದ ವ್ಯಕ್ತಿಯನ್ನು ನೋಡಿದ ಪ್ರತ್ಯಕ್ಷದರ್ಶಿಗಳು ಬದುಕಿಸುವ ಯತ್ನ ವಿಫಲಗೊಂಡಿತು. ಭರಮಸಾಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಎರಡು ವರ್ಷದಲ್ಲಿ ದೊಡ್ಡಕೆರೆಯಲ್ಲಿ ನಾಲ್ವರು ಮೃತಪಟ್ಟಿದ್ದಾರೆ. ಇಬ್ಬರು ಯುವಕರು ಈಜಲು ಹೋಗಿ ಮೃತಪಟ್ಟಿದ್ದಾರೆ. ಏರಿಯಿಂದ ಕೆರೆಗೆ ಕಾರು ಉರುಳಿ ಒಬ್ಬ ವ್ಯಕ್ತಿ ಮೃತಪಟ್ಟಿದ್ದರು. ಒಬ್ಬ ಯುವತಿ ಆತ್ಮಹತ್ಯೆ ಮಾಡಿಕೊಂಡಿದ್ದಳು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts