More

    ಇಷ್ಟೊಂದು ಆಸ್ತಿ ಎಲ್ಲಿಂದ ಬಂತು?

    ಕೆ.ಆರ್.ನಗರ: ಸಮಾಜವಾದ ಹಿನ್ನೆಲೆಯಿಂದ ಬಂದಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಉದ್ಯೋಗ ಏನು? ಇಷ್ಟೊಂದು ಆಸ್ತಿ ಅವರಿಗೆ ಎಲ್ಲಿಂದ ಬಂತು ಎಂಬುದನ್ನು ಸಾಬೀತುಪಡಿಸಿ ನಂತರ ಬೇರೆಯವರ ಬಗ್ಗೆ ಟೀಕೆ ಮಾಡಲಿ ಎಂದು ಶಾಸಕ ಸಾ.ರಾ.ಮಹೇಶ್ ಆಕ್ರೋಶ ವ್ಯಕ್ತಪಡಿಸಿದರು.

    ತಾಲೂಕಿನ ಅಡಗೂರು ಮರಾಗೌಡನಹಳ್ಳಿ ಬಳಿ ಇರುವ ಶ್ರೀ ಬಸವೇಶ್ವರ ದೇವಾಲಯದಲ್ಲಿ ಸೋಮವಾರ ಪೂಜೆ ಸಲ್ಲಿಸಿ ಚುನಾವಣಾ ಪ್ರಚಾರ ಪ್ರಾರಂಭಿಸಿ ಮಾತನಾಡಿದರು. ವೀರಶೈವ ಸಮುದಾಯದ ಮುಖ್ಯಮಂತ್ರಿಗಳು ಭ್ರಷ್ಟರು ಎಂದು ಹೇಳಿರುವುದು ಅಕ್ಷಮ್ಯ ಅಪರಾಧ. ಸಿದ್ದರಾಮಯ್ಯ ಅವರು ರೈತರೂ, ವ್ಯಾಪರಸ್ಥರೂ, ಉದ್ದಿಮೆದಾರರೂ ಅಲ್ಲ. ಆದರೆ, ಇಷ್ಟೊಂದು ಆಸ್ತಿ ಸಂಪಾದನೆ ಮಾಡಲು ಭ್ರಷ್ಟಚಾರದಿಂದ ಅಲ್ಲದೆ ಬೇರೆ ಎಲ್ಲಿಂದ ಬಂತು ಎಂಬುದನ್ನು ಅವರೇ ಬಹಿರಂಗ ಪಡಿಸಲಿ ಎಂದು ಸವಾಲು ಹಾಕಿದರು.

    ನಾನು ರಿಯಲ್‌ಎಸ್ಟೇಟ್ ಉದ್ಯಮಿಯಾಗಿದ್ದು ಆಸ್ತಿ ವಿವರಗಳನ್ನು ಆದಾಯ ತೆರಿಗೆ ಇಲಾಖೆ ಮತ್ತು ಚುನಾವಣಾ ಆಯೋಗಕ್ಕೆ ಸಲ್ಲಿಸಿದ್ದೇನೆ. ಆದರೆ, ರಾಜಕೀಯವನ್ನೇ ಉದ್ಯೋಗ ಮಾಡಿಕೊಂಡಿರುವ ಸಿದ್ದರಾಮಯ್ಯ ಬೇರೆಯವರನ್ನು ಟೀಕೆ ಮಾಡುವಾಗ ಎಚ್ಚರಿಕೆಯಿಂದ ಮಾತನಾಡಬೇಕು. ಮುಂದಾದರೂ ಹಗುರವಾಗಿ ಮಾತನಾಡುವುದನ್ನು ನಿಲ್ಲಿಸಬೇಕು. ಚುನಾವಣಾ ಆಯೋಗ, ತೆರಿಗೆ ಇಲಾಖೆಗೆ ಸಲ್ಲಿಸಿರುವ ಮಾಹಿತಿಯನ್ನು ಒಮ್ಮೆ ಪರಿಶೀಲಿಸಿ ನೋಡಿ ಎಂದರು.
    ಸೇವೆ ಸಲ್ಲಿಸಲು ರಾಜಕೀಯಕ್ಕೆ ಬರಬೇಕು. ನಮ್ಮ ವಿರೋಧಿ ಅಭ್ಯರ್ಥಿ ತಾಲೂಕಿನ ಜನತೆ ಸಂಕಷ್ಟದಲ್ಲಿದ್ದಾಗ ಅವರ ಸಹಾಯಕ್ಕೆ ಬಾರದೆ ಚುನಾವಣೆಯಲ್ಲಿ ನಾನು 2 ಬಾರಿ ಸೋತಿದ್ದೇನೆ. ಎಲ್ಲವನ್ನು ಕಳೆದುಕೊಂಡಿದ್ದೇನೆ. ನನ್ನನ್ನು ಕೈಬಿಡಬೇಡಿ ಎಂದು ಮತ ಕೇಳುತ್ತಿದ್ದಾರೆ. ನಿಮಗೆ ಇಂತಹ ಅಭ್ಯರ್ಥಿ ಬೇಕೋ ಅಥವಾ ವರ್ಷಪೂರ್ಣ ನಿಮ್ಮ ಮನೆಬಾಗಿಲಿಗೆ ಬಂದಿ ನಿಮ್ಮ ಸೇವೆ ಮಾಡುತ್ತಿರುವ ನಾನು ಬೇಕೋ ಎಂಬುದನ್ನು ನೀವೇ ನಿರ್ಧರಿಸಿ ಎಂದು ಹೇಳಿದರು.

    ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಎ.ಎಸ್.ಚನ್ನಬಸಪ್ಪ, ಮಾಜಿ ಸದಸ್ಯರಾದ ಅಚ್ಯುತಾನಂದ, ಎಂ.ಟಿ.ಕುಮಾರ್, ಮೈಮುಲ್ ನಿರ್ದೇಶಕ ಎ.ಟಿ.ಸೋಮಶೇಖರ್, ನವನಗರ ಬ್ಯಾಂಕ್ ಅಧ್ಯಕ್ಷ ಕೆ.ಎನ್.ಬಸಂತ್, ಕೆ.ಆರ್.ನಗರ ತಾಲೂಕು ಜೆಡಿಎಸ್ ಅಧ್ಯಕ್ಷ ಹಂಪಾಪುರ ಕುಮಾರ್, ಉಪಾಧ್ಯಕ್ಷ ಪ್ರಕಾಶ್, ವಕ್ತಾರ ಕೆ.ಎಲ್.ರಮೇಶ್, ಮುಖಂಡರಾದ ಅರ್ಜುನಹಳ್ಳಿ ಗಣೇಶ್, ಮಿರ್ಲೆ ಕೆಂಪೇಗೌಡ, ತುಕಾರಾಂ, ಹನಸೋಗೆ ನಾಗರಾಜ್, ಹಂಗರಬಾಯನಹಳ್ಳಿ ತಮ್ಮಣ್ಣ, ಕುನ್ನೇಗೌಡ, ನಾಗಣ್ಣ, ಮಂಜುನಾಥ್, ನಂದಿನಿ ರಮೇಶ್ ಹಾಜರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts