More

    ಇಪ್ಪತ್ನಾಲ್ಕು ಮೆಡಿಕಲ್ ವಿದ್ಯಾರ್ಥಿಗಳಿಗೆ ಕರೊನಾ

    ಕಾರವಾರ: ಕೋವಿಡ್ ಲಸಿಕೆ ಪಡೆದ ಇಲ್ಲಿನ ಸರ್ಕಾರಿ ಮೆಡಿಕಲ್ ಕಾಲೇಜ್​ನ 27 ವಿದ್ಯಾರ್ಥಿಗಳಲ್ಲಿ ಮತ್ತೆ ಕರೊನಾ ಸೋಂಕು ಕಾಣಿಸಿಕೊಂಡಿದೆ. ಲಸಿಕೆ ಪಡೆಯದ ಮೂವರು ವಿದ್ಯಾರ್ಥಿನಿಯರಲ್ಲಿ ಮೊದಲು ಸೋಂಕು ಕಾಣಿಸಿಕೊಂಡಿತ್ತು. ನಂತರ ಸುಮಾರು 400 ಕ್ಕೂ ಅಧಿಕ ವಿದ್ಯಾರ್ಥಿಗಳ ಗಂಟಲ ದ್ರವ ಪರೀಕ್ಷೆ ಮಾಡಿದ್ದು, 24 ವಿದ್ಯಾರ್ಥಿಗಳಲ್ಲಿ ಕಾಣಿಸಿಕೊಂಡಿದೆ. ಕೋವಿಡ್ ಕಾಣಿಸಿಕೊಂಡ ಎಲ್ಲರನ್ನೂ ಐಸೋಲೇಶನ್​ನಲ್ಲಿ ಇರಿಸಲಾಗಿದೆ. ಲಸಿಕೆ ಪಡೆದ ಎಲ್ಲರೂ ರೋಗ ಲಕ್ಷಣ ರಹಿತವಾಗಿದ್ದಾರೆ ಎಂದು ಕಾಲೇಜ್​ನ ಡೀನ್ ಡಾ.ಗಜಾನನ ನಾಯಕ ತಿಳಿಸಿದ್ದಾರೆ.

    10 ದಿನ ರಜೆ: ಕೋವಿಡ್ ನೆಗೆಟಿವ್ ವರದಿ ಬಂದ ಎಲ್ಲ ವಿದ್ಯಾರ್ಥಿಗಳಿಗೆ 10 ದಿನ ರಜೆ ನೀಡಿ ಮನೆಗೆ ಕಳಿಸಲಾಗಿದೆ. ಮೊದಲ ಹಾಗೂ ಎರಡನೇ ವರ್ಷದ ಎಂಬಿಬಿಎಸ್ ತರಗತಿಗಳನ್ನು ಸ್ಥಗಿತ ಮಾಡಲಾಗಿದೆ. ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಸದ್ಯದಲ್ಲಿ ಪರೀಕ್ಷೆ ಇರುವುದರಿಂದ ಅವರಿಗೆ ಮಾತ್ರ ಪಾಠ ಮುಂದುವರಿಸಲಾಗಿದೆ ಎಂದು ಡಾ.ನಾಯಕ ತಿಳಿಸಿದ್ದಾರೆ.

    303 ಕ್ಕೆ ಏರಿದ ಸಕ್ರಿಯ ಪ್ರಕರಣ: ಜಿಲ್ಲೆಯ 66 ಜನರಲ್ಲಿ ಮಂಗಳವಾರ ಕೋವಿಡ್ ಸೋಂಕು ಕಾಣಿಸಿಕೊಂಡಿದೆ. ಕಾರವಾರದ 36, ಹಳಿಯಾಳದ 11, ಅಂಕೋಲಾದ 5, ಕುಮಟಾ, ಯಲ್ಲಾಪುರದ ತಲಾ 3, ಹೊನ್ನಾವರ, ಭಟ್ಕಳ, ಸಿದ್ದಾಪುರ, ಮುಂಡಗೋಡಿನ ತಲಾ ಇಬ್ಬರಲ್ಲಿ ಸೋಂಕು ಕಾಣಿಸಿಕೊಂಡಿದೆ. ಜಿಲ್ಲೆಯ ಸದ್ಯದ ಸೋಂಕಿತರ ಸಂಖ್ಯೆ 303 ಕ್ಕೆ ಏರಿಕೆಯಾಗಿದೆ. ಕಾರವಾರದಲ್ಲಿ 123, ಅಂಕೋಲಾ- 23, ಕುಮಟಾ- 22, ಹೊನ್ನಾವರ-10, ಭಟ್ಕಳ-9, ಶಿರಸಿ-15, ಸಿದ್ದಾಪುರ-7,ಯಲ್ಲಾಪುರ- 50, ಮುಂಡಗೋಡ- 10, ಹಳಿಯಾಳ-30, ಜೊಯಿಡಾ-4 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ. ಜಿಲ್ಲೆಯ ಒಟ್ಟಾರೆ ಸೋಂಕಿತರ ಸಂಖ್ಯೆ 15250 ಕ್ಕೆ ಏರಿಕೆಯಾಗಿದೆ.

    ಲಸಿಕೆ ನೀಡುವಂತೆ ವಿದೇಶಿಗರ ಆಗ್ರಹ
    ಗೋಕರ್ಣ:
    ಇಂದಿಗೂ ಇಲ್ಲಿನ ಗ್ರಾಮಾಂತರ ಭಾಗಗಳಲ್ಲಿ ಕರೊನಾ ವ್ಯಾಕ್ಸಿನ್ ನೀಡುವ ಪ್ರಕ್ರಿಯೆ ನಿರೀಕ್ಷಿತ ವೇಗದಲ್ಲಿ ಇಲ್ಲ. ಗೋಕರ್ಣ ಮುಖ್ಯ ಭಾಗಗಳ ನಾಗರಿಕರು ಮಾತ್ರ ಗರಿಷ್ಠ ಮಟ್ಟದಲ್ಲಿ ಲಸಿಕೆ ಪಡೆದಿದ್ದಾರೆ. ಆದರೆ, ರೈತಾಪಿ ಮತ್ತು ಕಾರ್ವಿುಕ ವರ್ಗದವರು ತಮ್ಮ ಕೆಲಸದಿಂದ ಬಿಡುವು ಪಡೆಯಲಾರದೆ ಲಸಿಕೆಯಿಂದ ದೂರವಿದ್ದಾರೆ.

    ಸ್ಥಳೀಯರಲ್ಲಿ ಲಸಿಕೆ ಬಗ್ಗೆ ನಿರೀಕ್ಷಿತ ಆಸಕ್ತಿ ಕಂಡು ಬರಲಿಲ್ಲ. ಆದರೂ ಇಲ್ಲಿನ ವಿವಿಧ ಕಡೆಗಳಲ್ಲಿರುವ ವಿದೇಶಿ ಪ್ರವಾಸಿಗರು ಲಸಿಕೆ ಪಡೆಯಲು ತೀವ್ರ ಉತ್ಸಾಹ ತೋರುತ್ತಿದ್ದಾರೆ. ಕಳೆದ ಒಂದೂವರೆ ವರ್ಷಕ್ಕೂ ಹೆಚ್ಚಿನ ಸಮಯದಿಂದ ತಮ್ಮ ದೇಶಕ್ಕೆ ತೆರಳಲಾರದ 145 ವಿದೇಶಿ ಪ್ರವಾಸಿಗರು ಈ ಭಾಗದಲ್ಲಿ ಇದ್ದಾರೆ ಎಂದು ಅಂದಾಜಿಸಲಾಗಿದೆ. ಇವರು ಇನ್ನೂ ಕೆಲ ಕಾಲ ಇಲ್ಲಿಯೇ ಉಳಿಯುವ ಸಾಧ್ಯತೆಯ ಹಿನ್ನೆಲೆಯಲ್ಲಿ ಲಸಿಕೆಗೆ ಬೇಡಿಕೆ ವ್ಯಕ್ತಪಡಿಸುತ್ತಿದ್ದಾರೆ. ಅನೇಕ ವಿದೇಶಿಯರು ಆರೋಗ್ಯ ಕಾರ್ಯಕರ್ತರಲ್ಲಿ ಮತ್ತು ಪಿಎಚ್​ಸಿಗಳಿಗೆ ಭೇಟಿಯಿತ್ತು ಲಸಿಕೆಗೆ ಆಗ್ರಹಿಸಿದ್ದಾರೆ. ವಿದೇಶಿಯರಿಗೆ ನೀಡುವ ಬಗ್ಗೆ ಸರ್ಕಾರದಿಂದ ಇನ್ನೂ ಯಾವುದೇ ಅಧಿಕೃತ ಆದೇಶ ಬಾರದಿರುವುದರಿಂದ ಆರೋಗ್ಯ ಕೇಂದ್ರಗಳು ಏನು ಮಾಡಬೇಕೆಂದು ತಿಳಿಯದೆ ಸಂದಿಗ್ಧದಲ್ಲಿವೆ.

    ಅನೇಕ ವಿದೇಶಿಯರು ಲಸಿಕೆ ಪಡೆಯಲು ಉತ್ಸುಕರಾಗಿದ್ದಾರೆ. ಲಸಿಕೆ ಪಡೆಯುವಂತೆ ತಾವಿರುವ ಕಡೆಗಳಲ್ಲಿ ಜನರಿಗೆ ಪ್ರಚಾರ ಕೂಡ ಮಾಡುತ್ತಿದ್ದಾರೆ. ಆದರೆ, ವಿದೇಶಿಯರ ಬಗ್ಗೆ ಸರ್ಕಾರದಿಂದ ಸ್ಪಷ್ಟ ಆದೇಶ ಬರುವ ಬಗ್ಗೆ ಕಾಯಲಾಗುತ್ತಿದೆ.
    | ಡಾ.ಜಗದೀಶ ನಾಯ್ಕಆರೋಗ್ಯಾಧಿಕಾರಿ, ಗೋಕರ್ಣ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts