More

    ಇನ್ಮುಂದೆ ತುರ್ತು ಸೇವೆಗೆ 112ಕ್ಕೆ ಕರೆ ಮಾಡಿ

    ಹುಬ್ಬಳ್ಳಿ: ತುರ್ತು ಸಂದರ್ಭದಲ್ಲಿ ಪೊಲೀಸ್, ಅಗ್ನಿಶಾಮಕ, ಆಂಬುಲೆನ್ಸ್​ಗಾಗಿ ಕರೆ ಮಾಡಲು ತುರ್ತು ಸ್ಪಂದನ ವ್ಯವಸ್ಥೆ- 112 ಜಾರಿಗೊಳಿಸಲಾಗಿದ್ದು, 112 ಗಸ್ತು ವಾಹನಗಳಿಗೆ ಹು-ಧಾ ಪೊಲೀಸ್ ಆಯುಕ್ತ ಲಾಬು ರಾಮ ಇಲ್ಲಿನ ಚನ್ನಮ್ಮ ವೃತ್ತದಲ್ಲಿ ಮಂಗಳವಾರ ಚಾಲನೆ ನೀಡಿದರು.

    ನಂತರ ಮಾತನಾಡಿದ ಆಯುಕ್ತ ಲಾಬು ರಾಮ, ಈ ಮೊದಲು ತುರ್ತು ಸಂದರ್ಭದಲ್ಲಿ ಡಯಲ್ 100, 108 ಹಾಗೂ 101 ಬಳಸಲಾಗುತ್ತಿತ್ತು. ಇದೀಗ ಎಲ್ಲವನ್ನೂ ಏಕೀಕರಿಸಿ ಡಯಲ್ 112 ಆರಂಭಿಸಲಾಗಿದೆ. ಹಾಗಾಗಿ, ಇನ್ಮುಂದೆ ಯಾವುದೇ ತುರ್ತು ಸಂದರ್ಭದಲ್ಲಿ ಸಾರ್ವಜನಿಕರು 112 ಸಂಖ್ಯೆಗೆ ಕರೆ ಮಾಡಿದರೆ 15 ಸೆಕೆಂಡುಗಳಲ್ಲಿ ಕರೆ ಸ್ವೀಕರಿಸಿ, 10 ನಿಮಿಷದೊಳಗೆ ಅಗತ್ಯ ಪೊಲೀಸ್ ನೆರವು ನೀಡಲಾಗುವುದು. ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು.

    ಸರ್ಕಾರದ ನಿರ್ದೇಶನದಂತೆ ಅವಳಿ ನಗರದಲ್ಲಿ 15 ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 15 ತುರ್ತು ಸ್ಪಂದನ ಗಸ್ತು ವಾಹನಗಳನ್ನು ನಿಯೋಜಿಸಲಾಗಿದೆ. ಈ ವಾಹನಗಳು 24/7 ಕಾರ್ಯ ನಿರ್ವಹಿಸಲಿವೆ. ಕರೆ ಬಂದ ತಕ್ಷಣ ಸ್ಥಳಕ್ಕೆ ಧಾವಿಸುವ ಪೊಲೀಸ್ ತಂಡ ಅಗತ್ಯ ಸಹಾಯ ಮಾಡಲಿದೆ ಎಂದರು.

    ಅಪರಾಧ ಮತ್ತು ಸಂಚಾರ ವಿಭಾಗದ ಡಿಸಿಪಿ ಆರ್.ಬಿ. ಬಸರಗಿ, ಸಿಎಆರ್ ಡಿಸಿಪಿ ಎಸ್.ವಿ ಯಾದವ, ಎಸಿಪಿಗಳಾದ ವಿನೋದ ಮುಕ್ತೇದಾರ, ಎಂ.ವಿ. ಮಲ್ಲಾಪುರ, ಎಂ.ಎಸ್. ಹೊಸಮನಿ, ವಿವಿಧ ಠಾಣೆಗಳ ಇನ್ಸ್​ಪೆಕ್ಟರ್​ಗಳು, ಸಿಬ್ಬಂದಿ ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts