More

    ಇತ್ತೀಚಿನ ಮಕ್ಕಳಿಗೆ ಸೋಬಾನೆ ಪದದ ಪರಿಚಯವಿಲ್ಲ

    ಚನ್ನರಾಯಪಟ್ಟಣ: ಜಾನಪದ ಪ್ರಕಾರಗಳಲ್ಲಿ ಒಂದಾದ ಸೋಬಾನೆ ಪದಗಳ ಬಗ್ಗೆ ಇತ್ತೀಚಿನ ಮಕ್ಕಳಿಗೆ ಪರಿಚಯವೇ ಇಲ್ಲದಿವುದು ವಿಪರ್ಯಾಸ ಎಂದು ನಿನಾಸಂ ರಂಗ ನಿರ್ದೇಶಕ ಶಿವಶಂಕರ್ ವಿಷಾದ ವ್ಯಕ್ತಪಡಿಸಿದರು.

    ಪ್ರತಿಮಾ ಟ್ರಸ್ಟ್ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಇತ್ತೀಚೆಗೆ ಪಟ್ಟಣದ ಹಿಂದುಳಿದ ವರ್ಗಗಳ ವಿದ್ಯಾರ್ಥಿನಿಯರ ವಿದ್ಯಾರ್ಥಿನಿಲಯದಲ್ಲಿ ಒಂದು ತಿಂಗಳ ಸೋಬಾನೆ ಪದಗಳ ಕಲಿಕಾ ತರಬೇತಿ ಶಿಬಿರ ಉದ್ಘಾಟಿಸಿ ಮಾತನಾಡಿದರು.

    ಇಂದಿನ ಮಕ್ಕಳಿಗೆ ಸೋಬಾನೆ ಪದ ಎಂದರೇನು ಎಂದು ಗೊತ್ತಿಲ್ಲದ ಸಂದರ್ಭದಲ್ಲಿ ಪ್ರತಿಮಾ ಟ್ರಸ್ಟ್ ಸೋಬಾನೆ ಪದಗಳನ್ನು ಪರಿಚಯ ಮಾಡಬೇಕು ಎಂಬ ದೃಷ್ಟಿಯಿಂದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಒಂದು ತಿಂಗಳ ತರಬೇತಿ ಶಿಬಿರಗಳನ್ನು ಆಯೋಜನೆ ಮಾಡಿರೋದು ನಿಜಕ್ಕೂ ಸಂತಸ ತಂದಿದೆ ಎಂದರು.

    ಉಮೇಶ್ ತೆಂಕನಹಳ್ಳಿ ಮಾತನಾಡಿ, ಪ್ರತಿಮಾ ಟ್ರಸ್ಟ್ ಜಾನಪದ ಸೊಗಡಿನ ಬಹಳಷ್ಟು ತರಬೇತಿ ಶಿಬಿರ ಆಯೋಜನೆ ಮಾಡುತ್ತಿದ್ದು, ಈ ಬಾರಿಯ ಸೋಬಾನೆ ಪದಗಳ ತರಬೇತಿ ಶಿಬಿರ ಬಹಳ ವಿಶೇಷ. ಬಹಳ ದಿನಗಳಿಂದ ಈ ಸೋಬಾನೆ ಪದಗಳ ತರಬೇತಿ ಶಿಬಿರ ಆಯೋಜನೆ ಮಾಡಬೇಕು ಎಂದು ಅಂದುಕೊಂಡರೂ ಸಾಧ್ಯವಾಗಿರಲಿಲ್ಲ. ಈಗ ಕಾಲ ಕೂಡಿ ಬಂದಿದೆ. ಅದರಲ್ಲೂ ನಮ್ಮ ಹಳ್ಳಿ ಹಿರಿಯರಿಂದ ಸೋಬಾನೆ ಪದಗಳನ್ನು ಕಲಿಯುವುದು ಬಹಳ ವಿಶೇಷ. ಈ ಶಿಬಿರದಲ್ಲಿರುವ ಮಕ್ಕಳು ಇದರ ಸದುಪಯೋಗಪಡಿಸಿಕೊಳ್ಳಬೇಕು ಎಂದರು.

    ಹಿಂದುಳಿದ ವರ್ಗಗಳ ಇಲಾಖೆಯ ವಿಸ್ತರಣಾಧಿಕಾರಿ ಮಂಜುನಾಥ್ ಮಾತನಾಡಿದರು. ಪ್ರತಿಮಾ ಟ್ರಸ್ಟ್ ಸಂಚಾಲಕ ಎ.ಎಲ್.ನಾಗೇಶ್, ಕಾರ್ಯದರ್ಶಿ ಡಿ.ಜಗದದೀಶ್ ಚಂದ್ರ, ವಿದ್ಯಾರ್ಥಿನಿಲಯದ ಪಾಲಕರಾದ ಆಶಾರಾಣಿ, ಪ್ರತಿಮಾ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts