More

    ಇಂದಿರಾ ಗಾಂಧಿಯಾದ ಕಂಗನಾ; ‘ಎಮರ್ಜೆನ್ಸಿ’ ಫಸ್ಟ್ ಲುಕ್ ಬಿಡುಗಡೆ

    ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ಪಾತ್ರ ಈ ಹಿಂದೆ ಹಲವು ಚಿತ್ರಗಳಲ್ಲಿ ಬಂದು ಹೋಗಿದೆ. ‘ಆಂಧಿ’ ಚಿತ್ರದಲ್ಲಿ ಸುಚಿತ್ರಾ ಸೇನ್, ‘ಇಂದು ಸರ್ಕಾರ್’ ಚಿತ್ರದಲ್ಲಿ ಸುಪ್ರಿಯಾ ವಿನೋದ್, ‘ಪಿಎಂ ನರೇಂದ್ರ ಮೋದಿ’ ಚಿತ್ರದಲ್ಲಿ ಕಿಶೋರಿ ಶಹಾನೆ, ‘ಥಾಕ್ರೇ’ ಚಿತ್ರದಲ್ಲಿ ಅವಂತಿಕಾ ಅಕೇರ್ಕರ್, ‘ತಲೈವಿ’ ಚಿತ್ರದಲ್ಲಿ ಫ್ಲೋರಾ ಜೇಕಬ್, ‘ಬೆಲ್ ಬಾಟಮ್ ಚಿತ್ರದಲ್ಲಿ ಲಾರಾ ದತ್ತಾ, ಇಂದಿರಾ ಗಾಂಧಿಯವರ ಪಾತ್ರದಲ್ಲಿ ನಟಿಸಿದ್ದರು. ಹಾಗೆಯೇ ಸದ್ಯ ನಿರ್ವಣವಾಗುತ್ತಿರುವ ‘ಸ್ಯಾಮ್ ಬಹದ್ದೂರ್’ ಹಾಗೂ ‘1971’ ಚಿತ್ರದಲ್ಲೂ ಇಂದಿರಾ ಗಾಂಧಿಯವರ ಪಾತ್ರ ಇರಲಿದೆ ಎನ್ನಲಾಗಿದೆ.

    ಈಗ ಈ ಸಾಲಿಗೆ ನಟಿ ಕಂಗನಾ ಕೂಡ ಸೇರಿಕೊಂಡಿದ್ದಾರೆ. 2019ರಲ್ಲಿ ಝಾನ್ಸಿ ರಾಣಿ ಲಕ್ಷ್ಮೀಬಾಯಿ ಪಾತ್ರದಲ್ಲಿ ನಟಿಸಿದ್ದ ಬಾಲಿವುಡ್ ನಟಿ ಕಂಗನಾ ರಣಾವತ್ ಈಗ ಭಾರತದ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಚಿತ್ರಕ್ಕೆ ‘ಎಮರ್ಜೆನ್ಸಿ’ ಎಂದು ಶೀರ್ಷಿಕೆ ಇಡಲಾಗಿದ್ದು, ಖುದ್ದು ಕಂಗನಾ ಕಥೆ ಸಿದ್ದಪಡಿಸಿಕೊಂಡು, ನಿರ್ವಣದ ಜೊತೆಗೆ ಆಕ್ಷನ್-ಕಟ್ ಹೇಳುತ್ತಿದ್ದಾರೆ. ಇತ್ತೀಚೆಗಷ್ಟೇ ಚಿತ್ರದ ಫಸ್ಟ್ ಲುಕ್ ಬಿಡುಗಡೆಯಾಗಿದ್ದು ಎಲ್ಲೆಡೆಯಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

    ‘ವಿಶ್ವದ ಇತಿಹಾಸದಲ್ಲೇ ಅತ್ಯಂತ ಶಕ್ತಿಶಾಲಿ ಹಾಗೂ ವಿವಾದಾತ್ಮಕ ಮಹಿಳೆಯ ಪಾತ್ರದಲ್ಲಿ ನಟಿಸುತ್ತಿದ್ದೇನೆ’ ಎಂದು ಫಸ್ಟ್ ಲುಕ್ ಜೊತೆ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ ಕಂಗನಾ. ಟೀಸರ್​ನಲ್ಲಿ ಇಂದಿರಾ ಗಾಂಧಿಯವರನ್ನು ಪ್ರಧಾನಮಂತ್ರಿ ಕಛೇರಿಯಲ್ಲಿ ಎಲ್ಲರೂ ‘ಸರ್’ ಎಂದು ಕರೆಯುತ್ತಿದ್ದರು ಎಂಬಂತೆ ಚಿತ್ರಿಸಲಾಗಿದೆ. ‘ಎಮರ್ಜೆನ್ಸಿಯಿಂದ ನಾನು ಆಡಳಿತವನ್ನು ನೋಡುವ ದೃಷ್ಟಿಕೋನವೇ ಬದಲಾಗಿಬಿಟ್ಟಿತು. ನೈಜ ವ್ಯಕ್ತಿಗಳ ಪಾತ್ರದಲ್ಲಿ ನಟಿಸುವುದು ನಿಜಕ್ಕೂ ಸವಾಲು. ಅವರ ಲುಕ್, ಹಾವ – ಭಾವ, ಬಾಡಿ ಲಾಂಗ್ವೇಜ್ ಎಲ್ಲದರಲ್ಲೂ ಹೋಲಿಕೆ ಇರಬೇಕು. ಅದೆಲ್ಲದರ ಬಗ್ಗೆ ಸಾಕಷ್ಟು ರೀಸರ್ಚ್ ಮಾಡಿದ ಬಳಿಕವಷ್ಟೇ ನಾನು ಚಿತ್ರೀಕರಣ ಪ್ರಾರಂಭಿಸಿದೆ’ ಎಂದು ಚಿತ್ರದ ಬಗ್ಗೆ ಹೇಳಿಕೊಂಡಿದ್ದಾರೆ ಕಂಗನಾ ರಣಾವತ್. 1975ರಿಂದ 1977ವರೆಗೆ ಭಾರತದಲ್ಲಿ ಹೇರಲಾದ ಎಮರ್ಜೆನ್ಸಿಯ ಸುತ್ತ ಚಿತ್ರದ ಕಥೆ ಸುತ್ತುತ್ತದೆ. ಸಿನಿಮಾ 2023ರಲ್ಲಿ ರಿಲೀಸ್ ಆಗಲಿದೆ. – ಏಜೆನ್ಸೀಸ್

    ಇಷ್ಟಪಟ್ಟು ಪುರುಷನ ಜತೆಗಿದ್ದು, ಸಂಬಂಧ ಕೆಟ್ಟಾಗ ರೇಪ್​ ಆಯ್ತು ಅನ್ನೋ ಹಾಗಿಲ್ಲ: ಸುಪ್ರೀಂ ಕೋರ್ಟ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts