More

    ನಾಳೆಯಿಂದ ಜೋಗ ಪ್ರವಾಸಿಗರಿಗೆ ಮುಕ್ತ

    ಕಾರ್ಗಲ್: ಕರೊನಾ ಸೋಂಕು ಭೀತಿಯಿಂದ ಬಂದ್ ಆಗಿದ್ದ ವಿಶ್ವವಿಖ್ಯಾತ ಜೋಗ ಜಲಪಾತವನ್ನು 3 ತಿಂಗಳ ತರುವಾಯ ಅಗತ್ಯ ಮುನ್ನೆಚ್ಚರಿಕೆಯೊಂದಿಗೆ ತೆರೆಯಲಾಗುತ್ತಿದ್ದು ಸೋಮವಾರದಿಂದ ಪ್ರವಾಸಿಗರಿಗೆ ಮುಕ್ತವಾಗಲಿದೆ.

    ‘ವಿಜಯವಾಣಿ’ ಜತೆ ಮಾತನಾಡಿದ ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕ ರಾಮಕೃಷ್ಣ, ಸರ್ಕಾರದ ಮಾರ್ಗಸೂಚಿಯಂತೆ ಅಗತ್ಯ ಮುನ್ನೆಚ್ಚರಿಕೆ ಕೈಗೊಂಡು ಜಲಪಾತ ವೀಕ್ಷಣೆಗೆ ಅನುವು ಮಾಡಿಕೊಡಲಾಗುವುದು ಎಂದರು. ಮಾಸ್ಕ್ ಧರಿಸಿದ ಪ್ರವಾಸಿಗರಿಗೆ ಮಾತ್ರ ಒಳ ಪ್ರವೇಶವಿದೆ. ಮುಖ್ಯದ್ವಾರದಲ್ಲಿ ಥರ್ಮಲ್ ಸ್ಕ್ರೀನಿಂಗ್ ಮಾಡಲಾಗುವುದು. ದೇಹದ ಉಷ್ಣಾಂಶ 38 ಡಿಗ್ರಿಗಿಂತ ಕಡಿಮೆ ಇರಬೇಕು ಎಂದರು.

    ಪಪಂ ಮುಖ್ಯಾಧಿಕಾರಿ ಲಕ್ಷ್ಮೀನಾರಾಯಣ್ ನೇತೃತ್ವದಲ್ಲಿ ಸಿಬ್ಬಂದಿ ಜಲಪಾತದ ಉದ್ದಗಲಕ್ಕೂ ಸಾಂಕ್ರಾಮಿಕ ರೋಗ ಹರಡದಂತೆ ಕ್ರಮಿನಾಶಕ ಸಿಂಪಡಿಸಿದರು. ಜಲಪಾತದ ಗುಂಡಿ ಮಾರ್ಗಕ್ಕೆ ನಿಷೇಧವಿದ್ದು ಕೆಳಗೆ ಬಿಡುವ ಬಗ್ಗೆ ಇನ್ನೂ ನಿರ್ಧರಿಸಿಲ್ಲ. ಜೆಎಂಎ ಭದ್ರತಾ ಸಿಬ್ಬಂದಿ ಮೊದಲು ಕೆಳಗೆ ಇಳಿದು ಸುರಕ್ಷತೆಯ ಬಗ್ಗೆ ತಪಾಸಣೆ ನಡೆಸಿ ನಂತರ ಒಂದೆರೆಡು ದಿನಗಳಲ್ಲಿ ಕೆಳಗೆ ಬಿಡಲಾಗುವುದು ಎಂದು ತಿಳಿಸಿದರು.

    ಜೆಎಂಎ ಮೇಲ್ವಿಚಾರಕ ನಿಸ್ಸಾರ್ ಸ್ಥಳದಲ್ಲಿದ್ದು ಸೋಮವಾರ ಗೇಟ್ ತೆರೆಯಲು ಸಿದ್ಧತೆ ಮಾಡಿಕೊಳ್ಳುತ್ತಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts