More

    ಇಂಟರ್‌ಸಿಟಿ ಎಕ್ಸಪ್ರೆಸ್ ರೈಲಿಗೆ ಭವ್ಯ ಸ್ವಾಗತ

    ಬಾಗಲಕೋಟೆ: ವಿಜಯಪುರ-ಹುಬ್ಬಳ್ಳಿ ಇಂಟರ್‌ಸಿಟಿ ಎಕ್ಸ್‌ಪ್ರೆಸ್ ರೈಲಿಗೆ ಬಾಗಲಕೋಟೆ ರೈಲು ನಿಲ್ದಾಣದಲ್ಲಿ ರಾಜ್ಯ ರೈಲ್ವೆ ಹೋರಾಟ ಸಮಿತಿ ನೇತೃತ್ವದಲ್ಲಿ ಸೋಮವಾರ ಮಧ್ಯಾಹ್ನ ಭವ್ಯವಾಗಿ ಸ್ವಾಗತಿಸಲಾಯಿತು. ಹೋರಾಟ ಸಮಿತಿ ಕಾರ್ಯಕರ್ತರು, ಸಾರ್ವಜನಿಕರು ರೈಲಿಗೆ ವಿಶೇಷ ಪೂಜೆ ಸಲ್ಲಿಸಿ ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು.

    ಹೋರಾಟ ಸಮಿತಿ ಅಧ್ಯಕ್ಷ ಕುತುಬುದ್ದೀನ್ ಖಾಜಿ ಮಾತನಾಡಿ, ಈ ಹೊಸ ರೈಲು ಸಂಚಾರದಿಂದ ಬಾಗಲಕೋಟೆ ಮತ್ತು ವಿಜಯಪುರ ಜಿಲ್ಲೆಯ ವ್ಯಾಪಾರಸ್ಥರು, ನೌಕರಸ್ಥರು, ಕೂಲಿಕಾರರಿಗೆ ಬಹಳಷ್ಟು ಅನುಕೂಲವಾಗಲಿದೆ ಎಂದರು.

    ಅದರಂತೆ ರೈಲ್ವೆ ಸಚಿವ ಸುರೇಶ ಅಂಗಡಿ ಅವರಿಗೆ ವಿಜಯಪುರ, ತಿರುಪತಿ, ಸೊಲ್ಲಾಪುರ, ವಾಸ್ಕೋಡಿಗಾಮಾ ರೈಲಿಗಾಗಿ ಬೇಡಿಕೆ ಇಟ್ಟಿದ್ದು, ಗದಗ, ಬಾಗಲಕೋಟೆ, ವಿಜಯಪುರ ಪ್ರಯಾಣಿಕರಿಗೆ ನವದೆಹಲಿ ಸಂಪರ್ಕ ಕಲ್ಪಿಸಬೇಕೆಂದು ಸಮಿತಿ ಮನವಿ ಸಲ್ಲಿಸಿದೆ. ಸಂಸದರಾದ ಪಿ.ಸಿ. ಗದ್ದಿಗೌಡರ, ರಮೇಶ ಜಿಗಜಿಣಗಿ, ಸಿ.ಎಂ.ಉದಾಸಿ ಅವರು ರೈಲ್ವೆ ಸಚಿವರ ಮೇಲೆ ಒತ್ತಡ ತಂದು ಅವುಗಳನ್ನು ಕಾರ್ಯರೂಪಕ್ಕೆ ತರಬೇಕೆಂದು ಒತ್ತಾಯಿಸಿದರು.

    ಹೋರಾಟ ಸಮಿತಿ ಉಪಾಧ್ಯಕ್ಷ ಶ್ರೀನಿವಾಸ ಬಳ್ಳಾರಿ, ಮುಖಂಡರಾದ ನಾರಾಯಣಸಾ ಪವಾರ, ಶಶಿಕಾಂತ ಬಾಳಿಕಾಯಿ, ಆರ್.ಡಿ. ಬಾಬು, ಅಜೀಜ ಬಾಳಿಕಾಯಿ, ಈರಣ್ಣ ಹುಂಡೇಕಾರ, ಮೈನುದ್ದೀನ ಖಾಜಿ, ದಾಮೋದರ ರಾಠಿ ಉಪಸ್ಥಿತರಿದ್ದರು.



    ಬಾಗಲಕೋಟೆ, ವಿಜಯಪುರ, ಹುಬ್ಬಳ್ಳಿ, ಇಂಟರ್‌ಸಿಟಿ ಎಕ್ಸ್‌ಪ್ರೆಸ್, ರೈಲಿ, ರಾಜ್ಯ ರೈಲ್ವೆ ಹೋರಾಟ ಸಮಿತಿ, ವ್ಯಾಪಾರಸ್ಥರು, ನೌಕರಸ್ಥರು, ಕೂಲಿಕಾರರಿಗೆ ಬಹಳಷ್ಟು ಅನುಕೂಲವಾಗಲಿದೆ, Bagalkot, Vijayapura, Hubli, InterCity Express, Rail, State Railway Struggle Committee, Traders, Employees, Mercenaries,



    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts