More

    ಆ.15ರಿಂದ ಅಡುಗೆ ಕೇಂದ್ರ ಬಂದ್

    ಆಳಂದ (ಕಲಬುರಗಿ): ಸರ್ಕಾರ 60 ವರ್ಷ ಮೇಲ್ಪಟ್ಟ ಅಡುಗೆ ಸಹಾಯಕಿಯರನ್ನು ಕೈ ಬಿಡಲು ತೀರ್ಮಾನಿಸಿರುವುದನ್ನು ಖಂಡಿಸಿ ಆ.15ರಂದು ಜಿಲ್ಲಾದ್ಯಾಂತ ಅಡುಗೆ ಕೇಂದ್ರಗಳನ್ನು ಬಂದ್ ಮಾಡಿ ಪ್ರತಿಭಟನೆ ನಡೆಸಲು ತೀರ್ಮಾನಿಸಲಾಗಿದೆ ಎಂದು ಅಕ್ಷರ ದಾಸೋಹ ನೌಕರರ ಸಂಘದ ಜಿಲ್ಲಾಧ್ಯಕ್ಷೆ ರೇಖಾ ಸುತಾರ್ ತಿಳಿಸಿದರು.

    ಪಟ್ಟಣದ ಗುರುಭವನದಲ್ಲಿ ಅಕ್ಷರ ದಾಸೋಹ ನೌಕಕರ ಸಂಘ, ಸಿಐಟಿಯು ಸ್ಥಳೀಯ ಘಟಕದಿಂದ ಶನಿವಾರ ಹಮ್ಮಿಕೊಂಡಿದ್ದ ತಾಲೂಕು ಮಟ್ಟದ 5ನೇ ಸಮ್ಮೇಳನ ಉದ್ಘಾಟಿಸಿ ಮಾತನಾಡಿ, ದಿಢೀರ್ನೆ 60 ವರ್ಷ ಮೇಲ್ಪಟ್ಟವರನ್ನು ಕೈ ಬಿಟ್ಟರೆ ಸಾಕಷ್ಟು ತೊಂದರೆ ಆಗುತ್ತದೆ. ಸೇವೆಯಿಂದ ಕೈ ಬಿಡುವುದಾದರೆ ಉಪ ಜೀವನಕ್ಕಾಗಿ ಪಿಂಚಣಿ ರೂಪದಲ್ಲಿ ಸಹಾಯ ಧನ ನೀಡಬೇಕು. ಇಲ್ಲವಾದರೆ ಸೇವೆಯಲ್ಲಿ ಮುಂದುವರಿಸಬೇಕು ಎಂದು ಒತ್ತಾಯಿಸಿದರು.

    ಅಕ್ಷರ ದಾಸೋಹ ಯೋಜನೆ ಸಹಾಯಕ ನಿರ್ದೇಶಕಿ ವಂದನಾ ಮಾತನಾಡಿ, ಸರ್ಕಾರದ ಆದೇಶ ಅಧಿಕಾರಿಗಳು ಪಾಲನೆ ಮಾಡಬೇಕು. ಈಗಾಗಲೇ 60 ವರ್ಷ ಮೇಲ್ಪಟ್ಟ ಅಡುಗೆ ಸಹಾಯಕಿರನ್ನು ಕೈ ಬಿಡಬಾರದು, ಬಿಟ್ಟರೆ ಪಿಂಚಣಿ ಪ್ರಾರಂಭಿಸಿ ಎಂದು ಮನವಿ ಸಲ್ಲಿಸಿದ್ದೀರಿ. ಅದನ್ನು ಹಿರಿಯ ಅಧಿಕಾರಿಗಳ ಗಮನಕ್ಕೆ ತರಲಾಗುವುದು. ಅಲ್ಲದೆ ನಿಮ್ಮೆಲ್ಲ ಸಮಸ್ಯೆಗೆ ಸ್ಪಂದಿಸುತ್ತೇವೆ. ಹೀಗಾಗಿ ಅಡುಗೆ ಕೇಂದ್ರಗಳನ್ನು ಯತಾವತ್ತಾಗಿ ನಡೆಸಿ, ಮಕ್ಕಳಿಗೆ ತೊಂದರೆಯಾಗದಂತೆ ನೋಡಿಕೊಳ್ಳಬೇಕು ಎಂದರು.

    ತಾಲೂಕು ಅಧ್ಯಕ್ಷೆ ರೇಖಾ ರಂಗನ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿಜಯಲಕ್ಷ್ಮೀ ಸೇಡಂ, ಪ್ರಮುಖರಾದ ಶಶಿಕಲಾ ಪಾಟೀಲ್, ಕಲ್ಯಾಣಿ ತುಕ್ಕಾಣಿ, ಲೋಕಪ್ಪ ಜಾಧವ್, ಪಾಂಡುರಂಗ ಮಾವಿನ, ಪ್ರಕಾಶ ಜಾನೆ, ಶಿವಲೀಲಾ ಹೆಬಳಿ ಇತರರಿದ್ದರು.

    ಆ.15ರಿಂದ ಅಡುಗೆ ಕೇಂದ್ರಗಳು ಬಂದ್ ಮಾಡಿ ಬೆಂಗಳೂರ ಚಲೋ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಇದರಲ್ಲಿ ಅಡುಗೆ ಸಿಬ್ಬಂದಿ ಕಡ್ಡಾಯವಾಗಿ ಪಾಲ್ಗೊಂಡು ಪ್ರತಿಭಟನೆ ಯಶ್ವಸಿಗೊಳಿಸಬೇಕು.
    | ರೇಖಾ ಸುತಾರ್, ಜಿಲ್ಲಾಧ್ಯಕ್ಷೆ, ಅಕ್ಷರ ದಾಸೋಹ ನೌಕರರ ಸಂಘ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts