More

    ಆಹೇರಿ ಹಣ ದೇವಸ್ಥಾನಕ್ಕೆ ನೀಡಿದ

    ಯಾದಗಿರಿ: ಮದುವೆ ಕಾರ್ಯಕ್ರಮದಲ್ಲಿ ಸಂಗ್ರಹವಾದ ಆಹೇರಿ ಹಣವನ್ನು ದೇವಸ್ಥಾನದ ಟ್ರಸ್ಟ್ಗೆ ದೇಣಿಗೆ ನೀಡುವ ಮೂಲಕ ಇಲ್ಲೊಬ್ಬರು ಗಮನ ಸೆಳೆದಿದ್ದಾರೆ.

    ಶಹಾಪುರ ತಾಲೂಕಿನ ಸಿಂಗನಹಳ್ಳಿ ಗ್ರಾಮದ ನಿವಾಸಿ ನಿಂಗನಗೌಡ ಹೊಸಮನಿ ಪ್ರಥಮ ದಜರ್ೆ ಗುತ್ತಿಗೆದಾರರಿದ್ದಾರೆ. ಕಳೆದ ಎರಡು ದಿನದ ಹಿಂದೆ ನಗರದ ಆರಬೋಳ ಕಲ್ಯಾಣ ಮಂಟಪದಲ್ಲಿ ತಮ್ಮ ಇಬ್ಬರು ಪುತ್ರಿಯರ ಮದುವೆ ಏರ್ಪಡಿಸಿದ್ದರು. ಸಾವಿರಾರು ಆತ್ಮೀಯರು ,ಬಂಧು ವರ್ಗ ಈ ಮದುವೆಯಲ್ಲಿ ಪಾಲ್ಗೊಂಡಿದ್ದರು. ಆತ್ಮೀಯರು ವಾಡಿಕೆಯಂತೆ ತಮ್ಮ ಆಹೇರಿ ಬರೆಯಿಸಿದ್ದರು. ಸಾಯಂಕಾಲ ಆ ಮೊತ್ತ 5,03,111 ರೂ. ಸಂಗ್ರಹವಾಗಿತ್ತು.

    ಲಕ್ಷಾಂತರ ವೆಚ್ಚ ಮಾಡಿ ಅದ್ಧೂರಿಯಾಗಿ ಮದುವೆ ಮಾಡಿದ ನಿಂಗನಗೌಡ ಅವರು ಮರುದಿನ ಬೆಳಗ್ಗೆ ಆ ಹಣವನ್ನು ಸಂಪೂರ್ಣವಾಗಿ ಗ್ರಾಮದ ತಮ್ಮ ಆರಾಧ್ಯ ದೈವ ಶ್ರೀರಾಮಲಿಂಗೇಶ್ವರ ದೇವಸ್ಥಾನದ ಟ್ರಸ್ಟ್ಗೆ ದೇಣಿಗೆಯಾಗಿ ಕೊಡುವ ಮಾದರಿ ಎನಿಸಿದ್ದಾರೆ. ಇದಕ್ಕೂ ಮುನ್ನ ಕಳೆದ ವರ್ಷ ತಮ್ಮ ಮೊದಲ ಮಗಳ ಮದುವೆ ಮಾಡಿದ್ದ ಹೊಸಮನಿ ಪರಿವಾರ ಆಂದಿನ ಮದುವೆಯಲ್ಲೂ ಸಂಗ್ರಹವಾಗಿದ್ದ ಲಕ್ಷಾಂತರ ಆಹೇರಿ ಹಣವನ್ನೂ ಇದೇ ಟ್ರಸ್ಟ್ಗೆ ಸಲ್ಲಿಸಿದ್ದರೆಂದು ಗ್ರಾಮದ ಹಲವರು ಸ್ಮರಿಸುತ್ತಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts