More

    ಆಸರೆ ಪ್ರಭಾವಿಗಳ ಪಾಲಾಗಲು ಬಿಡಲ್ಲ

    ರೋಣ: ನೆರೆ ಪ್ರವಾಹದಿಂದ ಮನೆ ಕಳೆದುಕೊಂಡಿರುವ ಅರ್ಹ ಫಲಾನುಭವಿಗಳನ್ನು ಬೀದಿಗೆ ತಳ್ಳಿ ಬಿಜೆಪಿ ಮುಖಂಡರು ಹಾಗೂ ಪ್ರಭಾವಿಗಳಿಗೆ ಮನೆ ಹಂಚಿಕೆ ಮಾಡುವ ಹುನ್ನಾರ ನಡೆದಿದೆ. ಯಾವುದೇ ಕಾರಣಕ್ಕೂ ಅದಕ್ಕೆ ಅವಕಾಶ ಕೊಡಲ್ಲ ಎಂದು ಮಾಜಿ ಸಚಿವ ಬಿ.ಆರ್. ಯಾವಗಲ್ ಹೇಳಿದರು.

    ಪಟ್ಟಣದಲ್ಲಿ ಸುದ್ದಿಗೋಷ್ಠಿಯಲ್ಲಿ ಭಾನುವಾರ ಮಾತನಾಡಿದ ಅವರು, ಸಚಿವರು ಮಾಡುವ ಹೀನ ಕೆಲಸಕ್ಕೆ ಗಾಡಗೋಳಿ ಗ್ರಾಮದ ನೆರೆ ಸಂತ್ರಸ್ತರು ಕಲ್ಲು ಹೊತ್ತು ಪ್ರತಿಭಟನೆ ನಡೆಸಿದ್ದಾರೆ ವಿನಃ ನಾನು ಮಾಡಿಸಿದ್ದಲ್ಲ ಎಂದರು.

    2007 ಮತ್ತು 2009 ರಲ್ಲಿ ಪ್ರವಾಹ ಬಂದು ಗಾಡಗೋಳಿ ಗ್ರಾಮ ಸಂಪೂರ್ಣ ಜಲಾವೃತ್ತಗೊಂಡಿತ್ತು. 2009ರಲ್ಲಿ ಅಂದಿನ ಸರ್ಕಾರ ಗಾಡಗೋಳಿ ಗ್ರಾಮವನ್ನು ನವ ಗ್ರಾಮಕ್ಕೆ ಸ್ಥಳಾಂತರಗೊಳಿಸಿ ಆಸರೆ ಮನೆಗಳನ್ನು ನಿರ್ವಿುಸಿತ್ತು. ಹಳೆಯ ಗಾಡಗೋಳಿ ಗ್ರಾಮದಲ್ಲಿ ವಾಸಿಸುತ್ತಿದ್ದ ಅರ್ಹ ಫಲಾನುಭವಿಗಳನ್ನು ತಾಪಂ ಇಒ, ತಹಸೀಲ್ದಾರ್ ಸಮ್ಮುಖದಲ್ಲಿ ಗ್ರಾಮ ಸಭೆ ನಡೆಸಿ ಮನೆ ಹಂಚಿಕೆ ಮಾಡಲಾಗಿತ್ತು. ಅವರಿಗೆ ಹಕ್ಕು ಪತ್ರಗಳನ್ನು ಕೊಡುವುದು ಸಚಿವ ಸಿ.ಸಿ. ಪಾಟೀಲರಿಗೆ ಮನಸಿಲ್ಲ. ಹೀಗಾಗಿ ತಮ್ಮ ಅಧಿಕಾರ ಬಳಸಿಕೊಂಡು ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರಾಗಿ ನಾಗರಿಕ ಭಾಷೆಯಲ್ಲಿ ಮಾತನಾಡುವುದನ್ನು ಕಲಿಯಬೇಕು. ಅದನ್ನು ಬಿಟ್ಟು ಬಾಯಿಗೆ ಬಂದಂತೆ ಮಾತನಾಡಿದರೆ ನಾವು ಮುಂದಿನ ದಿನಗಳಲ್ಲಿ ತಕ್ಕ ಉತ್ತರ ಕೊಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

    ನರಗುಂದ ಮತಕ್ಷೇತ್ರಕ್ಕೆ ನನ್ನ ಕೊಡುಗೆ ಏನು ಅವರ ಕೊಡುಗೆ ಏನು ಎಂಬುದು ಬಹಿರಂಗ ಚರ್ಚೆಗೆ ಬರಲಿ. ನನ್ನ ಮೇಲೆ ಮಾಡುವ ಯಾವುದೇ ಆರೋಪಗಳು ಸತ್ಯವಾಗಿದ್ದರೆ ನಾನು ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂದು ಸಿ.ಸಿ. ಪಾಟೀಲರಿಗೆ ಸವಾಲು ಹಾಕಿದರು.

    ಬಿ.ಎಂ. ಕೋಳೇರಿ, ಬಸವರಾಜ ಪಾಟೀಲ, ಪ್ರಕಾಶ ಭಜಂತ್ರಿ. ವಿ.ಬಿ. ಸೋಮಕನಟ್ಟಿ, ಫಕ್ರುಸಾಬ್ ಚಿಕ್ಕಮಣ್ಣೂರ, ರಾಜು ಕಲಾಲ, ಗುರುಪಾದಪ್ಪ ಕುರಹಟ್ಟಿ, ಈರಣ್ಣ ತಳವಾರ. ಶರಣಪ್ಪ ಜಂಗಣ್ಣವರ, ಕಲ್ಲಪ್ಪ ಬೇಲಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts