More

    ಆರ್.ಟಿ.ಹೆಗಡೆ ಶೀಗೆಹಳ್ಳಿಗೆ ಗಾನ ನಮನ

    ಶಿರಸಿ: ಜಿಲ್ಲೆಯ ಹಿರಿಯ ಸಂಗೀತಗಾರ ಹಾಗೂ ರಾಜ್ಯ ಪ್ರಶಸ್ತಿ ಪುರಸ್ಕೃತರಾಗಿದ್ದ ಆರ್.ಟಿ.ಹೆಗಡೆ ಶೀಗೆಹಳ್ಳಿ ಸ್ಮರಣಾರ್ಥ ತಾಲೂಕಿನ ಶೀಗೆಹಳ್ಳಿಯಲ್ಲಿ ಬುಧವಾರ ಗಾನ ನಮನ ಸಲ್ಲಿಸಲಾಯಿತು.

    ಗುರುಶಿಷ್ಯ ಪರಂಪರೆಯಡಿಯಲ್ಲಿ ಗಾನನಮನ ಕಾರ್ಯಕ್ರಮ ನಡೆದಿದ್ದು ದಿವಂಗತ ಶೀಗೆಹಳ್ಳಿಯವರ ಪಟ್ಟದ ಶಿಷ್ಯರಾದ ಪಂಡಿತ್ ಎಂ.ಪಿ.ಹೆಗಡೆ ಪಡಿಗೆರೆಯವರು ಆರಂಭದಲ್ಲಿ ಶೀಗೆಹಳ್ಳಿಯವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

    ಆರಂಭದಲ್ಲಿ ಆರ್.ಟಿ.ಹೆಗಡೆಯವರ ಪುತ್ರ ಹಾಗೂ ಸಿತಾರ್ ವಾದಕರೂ ಆದ ಭಾರ್ಗವ ಹೆಗಡೆ ಶೀಗೆಹಳ್ಳಿ ಸಿತಾರ ನುಡಿಸಿ ಕಾರ್ಯಕ್ರಮಕ್ಕೆ ನಾಂದಿಯಾದರು. ತಬಲಾದಲ್ಲಿ ಸಂದೇಶ ಹೆಗಡೆ ಸಾಥ್ ನೀಡಿದರು. ನಂತರ ಸಂಗೀತ ಶಿಕ್ಷಕ ಶ್ರೀಧರ ಹೆಗಡೆ ದಾಸನಕೊಪ್ಪ ಗಾನನಮನ ನಡೆಸಿಕೊಟ್ಟರೆ ತಬಲಾದಲ್ಲಿ ಸಂದೇಶ ಹೆಗಡೆ, ಹಾಮೋನಿಯಂನಲ್ಲಿ ಶ್ರೀಪಾದ ಹೆಗಡೆ ಸೋಮನಮನೆ ಸಾಥ್ ನೀಡಿದರು. ತದನಂತರ ನಡೆದ ಗಾನದಲ್ಲಿ ಶ್ರೀಪಾದ ಹೆಗಡೆ ಸೋಮನಮನೆ ಸುಶ್ರಾವ್ಯವಾಗಿ ಹಾಡಿದರೆ, ತಬಲಾದಲ್ಲಿ ರಾಜು ಹೆಬ್ಬಾರ ಹೊನ್ನಾವರ ಹಾಗೂ ಹಾಮೋನಿಯಂನಲ್ಲಿ ಶ್ರೀಧರ ಹೆಗಡೆ ಸಾಥ್ ನೀಡಿದರು. ಗಾನನಮನದ ಕೊನೆಯ ಭಾಗವಾಗಿ ಶೀಗೆಹಳ್ಳಿಯವರ ಶಿಷ್ಯ ಪಂ.ಎಂ.ಪಿ.ಹೆಗಡೆ ಪಡಿಗೆರೆ ಸಂಗೀತ ಕಛೇರಿ ನಡೆಸಿಕೊಟ್ಟರು. ಗುರುಗಳಿಂದ 30 ವರ್ಷಗಳ ಹಿಂದೆ ಪ್ರಖ್ಯಾತಿಗೊಂಡಿದ್ದ ಕೆಲವು ರಾಗಗಳನ್ನು ಪ್ರಸ್ತುತಪ ಡಿಸಿದರು. ನಂತರದಲ್ಲಿ ಕೆಲವೊಂದು ಅರ್ಥಪೂರ್ಣವಾದ ಭಾವತುಂಬಿದ ಹಾಡುಗಳನ್ನು ಹಾಡಿ ಭೈರವಿಯೊಂದಿಗೆ ಕಾರ್ಯಕ್ರಮ ಸಮಾಪ್ತಿಗೊಳಿಸಿದರು. ಸಂವಾದಿನಿಯಲ್ಲಿ ಶ್ರೀಪಾದ ಹೆಗಡೆ ಸೋಮನಮನೆ, ತಬಲಾದಲ್ಲಿ ರಾಜು ಹೆಬ್ಬಾರ ಹೊನ್ನಾವರ, ತಾನ್ಪುರ ಹಾಗೂ ಸಹಗಾನದಲ್ಲಿ ಶ್ರೀಧರ ಹೆಗಡೆ ಸಾಥ್ ನೀಡಿದರು. ಸಿತಾರ ವಾದನದಲ್ಲಿ ಭಾರ್ಗವ ಹೆಗಡೆ ಶೀಗೆಹಳ್ಳಿ ಪ್ರಥಮ ಬಾರಿಗೆ ಸಾಥ್ ನೀಡಿದರು.

    ವೇದಿಕೆಯಲ್ಲಿ ಶಿರಸಿ ಎ.ಪಿ.ಎಂ.ಸಿ ಅಧ್ಯಕ್ಷ ವಿಶ್ವನಾಥ ಹೆಗಡೆ ಶೀಗೆಹಳ್ಳಿ, ಆರ್.ಟಿ.ಹೆಗಡೆ ಶೀಗೆಹಳ್ಳಿಯವರ ಪತ್ನಿ ಯಮುನಾ ಹೆಗಡೆ, ಪ್ರಮುಖರಾದ ರಾಧಾ ಪಡಿಗೆರೆ, ಗಿರಿಧರ ಕಬ್ನಳ್ಳಿ ಮತ್ತಿತರರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts