More

    11 ಸುವರ್ಣ ಪದಕ, 43ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ನಾಳೆ

    ಬೆಳಗಾವಿ: ಸೆ.14ರಂದು ಸುವರ್ಣ ವಿಧಾನಸೌಧದ ಮೊದಲ ಮಹಡಿಯಲ್ಲಿರುವ ಸಭಾಂಗಣದಲ್ಲಿ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ 10ನೇ ಟಿಕೋತ್ಸವ ಜರುಗಲಿದೆ. ಮೂವರಿಗೆ ಗೌರವ ಡಾಕ್ಟರೇಟ್​, 11 ಸುವರ್ಣ ಪದಕ ಹಾಗೂ 43ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಗುವುದು ಎಂದು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಕುಲಪತಿ ರಾಮಚಂದ್ರ ಗೌಡ ಹೇಳಿದರು.

    ನಗರದ ವಾರ್ತಾ ಇಲಾಖೆ ಕಚೇರಿಯಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಟಿಕೋತ್ಸವದ ಅಧ್ಯತೆಯನ್ನು ರಾಜ್ಯಪಾಲ ಥಾವರ್​ಚಂದ್​ ಗೆಹಲೋತ್​ ವಹಿಸಲಿದ್ದಾರೆ. ಉನ್ನತ ಶಿಣ ಸಚಿವ ಡಾ.ಸಿ.ಎನ್​.ಅಶ್ವತ್ಥ ನಾರಾಯಣ ಆಗಮಿಸಲಿದ್ದು, ಆಂಧ್ರಪ್ರದೇಶದ ವಿಜಯನಗರಂ ಕೇಂದ್ರೀಯ ಬುಡಕಟ್ಟು ವಿಶ್ವವಿದ್ಯಾಲಯದ ಕುಲಪತಿ ಪೊ.ಟಿ.ವಿ.ಕಟ್ಟಿಮನಿ ಟಿಕೋತ್ಸವದ ಭಾಷಣ ಮಾಡಲಿದ್ದಾರೆ ಎಂದರು.

    ವಿವಿಧ ೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದ ಮೂವರು ಸಾಧಕರಿಗೆ ಗೌರವ ಡಾಕ್ಟರೇಟ್​ ಪದವಿ ಪ್ರದಾನ ಮಾಡಲಾಗುವುದು. ಸಮಾಜ ಸೇವಕ ರವಿಚಂದರ್​, ಖ್ಯಾತ ಚಲನಚಿತ್ರ ರಮೇಶ ಅರವಿಂದ, ದಾಸೋಹ ಅಕ್ಕ ಅನ್ನಪೂರ್ಣಾ ತಾಯಿ ಅವರಿಗೆ ಗೌರವ ಡಾಕ್ಟರೇಟ್​ ಪದವಿ ನೀಡಲಾಗುತ್ತಿದೆ. 48 ಸಂಶೋಧಕರಿಗೆ ಪಿಎಚ್​ಡಿ ಪದವಿ ಹಾಗೂ ಒಟ್ಟು 43,607 ವಿದ್ಯಾರ್ಥಿಗಳು ಪದವಿ ಪಡೆದುಕೊಳ್ಳಲಿದ್ದು, ಅದರಲ್ಲಿ 11 ಚಿನ್ನದ ಪದಕವನ್ನು ಸ್ನಾತಕೋತ್ತರ ಹಾಗೂ ಸ್ನಾತಕ ವಿದ್ಯಾರ್ಥಿಗಳಿಗೆ ನೀಡಲಾಗುತ್ತಿದೆ ಎಂದು ತಿಳಿಸಿದರು.

    ರಾಣಿ ಚನ್ನಮ್ಮ ವಿಶ್ವವಿದ್ಯಾಲಯಕ್ಕೆ ಬೆಳಗಾವಿ, ವಿಜಯಪುರ ಹಾಗೂ ಬಾಗಲಕೋಟೆ ಜಿಲ್ಲೆಗಳ 418 ಮಹಾವಿದ್ಯಾಲಯಗಳು ಸಂಯೋಜನೆಗೊಂಡಿವೆ. ಸುಮಾರು 1.64 ಲ ವಿದ್ಯಾರ್ಥಿಗಳು ಅಧ್ಯಯನ ನಡೆಸುತ್ತಿದ್ದಾರೆ ಎಂದ ಅವರು, ಇನ್ನು ಹಿರೇಬಾಗೇವಾಡಿ ಸಮೀಪದ ಮಲ್ಲಪ್ಪನಗುಡ್ಡದಲ್ಲಿ ನಡೆಯುತ್ತಿರುವ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಕಟ್ಟದ ಕಾಮಗಾರಿ ನಿರಂತರ ಮಳೆಯಿಂದಾಗಿ ವಿಳಂಬವಾಗಿ ನಡೆಯುತ್ತಿದೆ. ಇನ್ನಾವುದೇ ಆಡಳಿತಾತ್ಮಕ ಹಾಗೂ ಇನ್ನಿತರ ಕಾರಣಗಳಿಲ್ಲ. ಮಳೆ ಬಿಡುವು ನೀಡಿದ ಕೂಡಲೇ ಕಾಮಗಾರಿಗೆ ವೇಗ ನೀಡಲಾಗುವುದು ಎಂದು ಸ್ಪಷ್ಟಪಡಿಸಿದರು.

    ಸುದ್ದಿಗೋಷ್ಠಿಯಲ್ಲಿ ಮೌಲ್ಯಮಾಪನ ಕುಲಸಚಿವ ಪ್ರೊ.ಶಿವಾನಂದ ಗೊರನಾಳೆ, ಪ್ರೊ.ಎಂ. ಹನುಮಂತಪ್ಪ, ಸಿಡಿಸಿ ನಿರ್ದೇಶಕ ಪ್ರೊ. ಗಂಗಾಧರಯ್ಯ, ಸಿ.ಎನ್​. ವಾಗ್ಮಾರೆ ಇತರರು ಇದ್ದರು.

    ರ್ಯಾಂಕ್​ ಪಡೆದವರಲ್ಲಿ ವಿದ್ಯಾರ್ಥಿನಿಯರದ್ದೇ ಮೇಲುಗೈ: ಫಸ್ಟ್​ ರ್ಯಾಂಕ್​ ಪಡೆದಿರುವ 6 ಸ್ನಾತಕ, ಸ್ನಾತಕೋತ್ತರ ವಿದ್ಯಾರ್ಥಿ/ವಿದ್ಯಾರ್ಥಿನಿಯರಿಗೆ ಹಾಗೂ ವಿಷಯವಾರು ಅತಿ ಹೆಚ್ಚು ಅಂಕ ಗಳಿಸಿದ 4 ವಿದ್ಯಾರ್ಥಿನಿಯರು ಸೇರಿ ಒಟ್ಟು 11 ಸುವರ್ಣ ಪದಕ ಪ್ರದಾನ ಮಾಡಲಾಗುತ್ತಿದೆ.

    ವಿಷಯವಾರು ಅತಿ ಹೆಚ್ಚು ಅಂಕಗಳಿಸಿದ ಸ್ನಾತಕ ವಿದ್ಯಾರ್ಥಿನಿಯರಾದ ರಸಿಕಾ ಮಲೈ (ಇಂಗ್ಲಿಷ್​), ಸಂಜಿವೀನಿ ಪಾಟೀಲ( ಕನ್ನಡ), ವರ್ಷಾ ಮರ್ಡಿ (ಸೋಷಿಯಾಲಜಿ), ಪ್ರೇರಣಾ ಪನಾಲ್ಕರ್​ (ಕಾಮರ್ಸ್​), ಬ್ಯಾಚುಲರ್​ ಆಫ್​ ಕಾಮರ್ಸ್​ ವಿದ್ಯಾರ್ಥಿನಿ ವಿದ್ಯಾವತಿ ಗುಡೋದಗಿ, ಬ್ಯಾಚುಲರ್​ ಆಫ್​ ಸೈನ್ಸ್​ ವಿದ್ಯಾರ್ಥಿನಿ ದೀಪಿಕಾ ಚವ್ಹಾಣ, ಮಾಸ್ಟರ್​ ಆಫ್​ ಆರ್ಟ್ಸ್​ ಇನ್​ ಕನ್ನಡ ವಿದ್ಯಾರ್ಥಿನಿ ದಾಾಯಿಣಿ ವಾಲ್ಮಿಕಿ, ಮಾಸ್ಟರ್​ ಆಫ್​ ಆರ್ಟ್ಸ್​ ಇನ್​ ಸೋಷಿಯಾಲಜಿ ವಿದ್ಯಾರ್ಥಿ ತಾತ್ಯಾಸಾಬ್​ ಧಾಬಡೆ, ಮಾಸ್ಟರ್​ ಆಫ್​ ಬ್ಯುಸಿನೆಸ್​ ಅಡ್ಮಿನಿಸ್ಟ್ರೆಷನ್​ ವಿದ್ಯಾರ್ಥಿನಿ ಗೌರಾ ಅಣೆಪ್ಪನವರ, ಮಾಸ್ಟರ್​ ಆಫ್​ ಸೈನ್ಸ್​ ಇನ್​ ಮ್ಯಾಥಮ್ಯಾಟಿಕ್ಸ್​ ವಿದ್ಯಾರ್ಥಿನಿ ಅನುಜಾ ಪಾಟೀಲ ಸುವರ್ಣ ಪದಕ ಪಡೆಯಲಿದ್ದಾರೆ ಎಂದು ಪ್ರೊ.ರಾಮಚಂದ್ರಪ್ಪ ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts