More

    ಆರ್ಥಿಕ ಸದೃಢತೆಗೆ ಸ್ವಉದ್ಯೋಗ ಅನುಕೂಲ

    ಗಜೇಂದ್ರಗಡ: ರಾಷ್ಟ್ರಾದ್ಯಂತ ಕೈಮಗ್ಗ ಉತ್ಪನ್ನಗಳಿಗೆ ಭಾರಿ ಬೇಡಿಕೆ ಇದೆ. ಯುವಕರು ಕೈಮಗ್ಗ ಉದ್ಯಮದಲ್ಲಿ ತೊಡಗಿಕೊಂಡು ಆರ್ಥಿಕವಾಗಿ ಸದೃಢರಾಗಬೇಕು ಎಂದು ಕೈಮಗ್ಗ ಮತ್ತು ಜವಳಿ ಇಲಾಖೆ ಉಪನಿರ್ದೇಶಕ ಶಿವರಾಜ ಕುಲಕರ್ಣಿ ಹೇಳಿದರು.

    ಪಟ್ಟಣದ ಕೈಮಗ್ಗ ನೇಕಾರರ ಸಂಘದ ಕಚೇರಿಯಲ್ಲಿ ಆದಿಶಕ್ತಿ ಕೈಮಗ್ಗ ನೇಕಾರರ ಸಂಘ, ಬನಶಂಕರಿ ಕೈಮಗ್ಗ ನೇಕಾರರ ಸಂಘದ ಆಶ್ರಯದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ 6ನೇ ರಾಷ್ಟ್ರೀಯ ಕೈಮಗ್ಗ ದಿನಾಚರಣೆಯಲ್ಲಿ ಅವರು ಮಾತನಾಡಿದರು. ಕೇಂದ್ರ ಸರ್ಕಾರವು ಕೈಮಗ್ಗ ಕ್ಷೇತ್ರ ಗುರುತಿಸಿ ಆ. 7 ಅನ್ನು ಕೈಮಗ್ಗ ದಿನವೆಂದು ಘೊಷಿಸಿದೆ. ಕೈಮಗ್ಗದ ಬಟ್ಟೆಗಳಿಗೆ ಈಗಲೂ ಬೇಡಿಕೆ ಇದೆ. ಹೊಸ ತಂತ್ರಜ್ಞಾನ ಬಳಸಿಕೊಂಡು ಬಟ್ಟೆ ತಯಾರಿಸಿದರೆ ಉತ್ತಮ ಬೆಲೆ ಸಿಗುತ್ತದೆ. ಕೇಂದ್ರ ಸರ್ಕಾರದ ಜತೆಗೆ ರಾಜ್ಯ ಸರ್ಕಾರವು ಕೈಮಗ್ಗ ನಡೆಸುವವರಿಗೆ ಹಲವು ಸೌಲಭ್ಯ ನೀಡುತ್ತಿದೆ ಎಂದರು.

    ಸಂಘಗಳಲ್ಲಿ ಹಲವಾರು ವರ್ಷಗಳಿಂದ ದುಡಿಯುತ್ತಿರುವ 8 ನೇಕಾರರನ್ನು ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಗಜೇಂದ್ರಗಡ ನೇಕಾರರ ಹಿತರಕ್ಷಣಾ ವೇದಿಕೆ ಅಧ್ಯಕ್ಷ ಕೋಟ್ರೇಶ ಚಿಲಕಾ ಮಾತನಾಡಿದರು. ಬಾಬಣಸಾ ರಾಯಬಾಗಿ, ಮಂಜುನಾಥ ಮ್ಯಾಕಲ್, ಬಸವರಾಜ ಸೂಡಿ, ತೇಜಪ್ಪ ಚಿನ್ನೂರ, ದಾವಲಸಾಬ್ ಕಳಕಾಪೂರ, ಗುರುನಾಥ ಕೆಂಚಿ, ಯಲ್ಲಪ್ಪ ಪುಲಗಟ್ಟಿ, ಕನಕಪ್ಪ ಹರಿಜನ, ಹನಮಂತಪ್ಪ ಮೇದಾರ, ಜ್ಯೋತಿ ಜೂಚನಿ, ಕಸ್ತೂರೆಮ್ಮ ಅರಗಂಜಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts