More

    ಆರ್‌ಎಸ್‌ಎಸ್,ಬಜರಂಗದಳದವರಂತೆ ಸಭೆ ಮಾಡಿಲ್ಲ

    ಚಿತ್ರದುರ್ಗ: ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿದ್ದಾಗ ಆರ್‌ಎಸ್‌ಎಸ್,ಬಜರಂಗಳದ ಪದಾಧಿಕಾರಿ,ಕಾರ‌್ಯಕರ್ತರಂತೆ ಕಚೇರಿಗಳಿಗೆ ನುಗ್ಗಿ ಅಧಿಕಾರಿಗ ಳೊಂದಿಗೆ ಸಭೆ ಮಾಡಿಲ್ಲವೆಂದು ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಹೇಳಿದರು. ಸಚಿವರಾದ ಬಳಿಕ ನಗರದ ಬಯಲು ಸೀಮೆ ಪ್ರ ದೇಶಾಭಿವೃದ್ಧಿ ಮಂಡಳಿ ಕಚೇರಿಗೆ ಬುಧವಾರ ಭೇಟಿ ನೀಡಿ ಸುದ್ದಿಗಾರರ ಜತೆ ಮಾತನಾಡಿದ ಅವರು,ಕಾಂಗ್ರೆಸ್ ಕರ್ನಾಟಕ ಉಸ್ತುವಾರಿ ರಣದೀಪ್‌ಸಿಂಗ್ ಸುರ್ಜೆವಾಲ ಅವರು ಅಧಿಕಾರಿಗಳೊಂದಿಗೆ ಸಭೆ ನಡೆಸಿದರೆ ತಪ್ಪೇನು?

    ನಾಲ್ಕು ಗೋಡೆ ನಡುವೆ ಸಭೆ ನಡೆಸಿದ್ದಾರೆ. ಆರ್‌ಎಸ್‌ಎಸ್,ಬಜರಂಗದಳ ಕಾರ‌್ಯಕರ್ತರಂತೆ ವರ್ತಿಸಿಲ್ಲವೆಂದು ಸುರ್ಜೆವಾಲ ಅವರ ನಡೆ ಸಮರ್ಥಿಸಿದರು.
    ಬಿಜೆಪಿ ಹಾಗೂ ಕಾಂಗ್ರೆಸ್ ಸರ್ಕಾರಗಳು 40 ಹಾಗೂ 85 ಪರ್ಸೆಂಟ್ ಸರ್ಕಾರಗಳೆಂಬ ಮಾಜಿ ಸಿಎಂ ಎಚ್.ಡಿ.ಕುಮಾರ ಸ್ವಾಮಿ ಟೀ ಕೆಗೆ ಪ್ರತಿಕ್ರಿತಿಸಿದ ಸುಧಾಕರ್,ಕುಮಾರ ಸ್ವಾಮಿ ಅವರಿಗೆ ಕಾಂಗ್ರೆಸ್ ಅಧಿಕಾರ ನೀಡಿತ್ತು,ಆದರೆ ಅವರಿಂದ ಉತ್ತಮ ಆಡಳಿತ ಕೊಡಲು ಸಾಧ್ಯವಾಗಲಿಲ್ಲವೆಂದು ಅವರೆಡೆ ಮರುಕ ವ್ಯಕ್ತಪಡಿಸಿದರು.

    85 ಪರ್ಸೆಂಟ್ ಸರ್ಕಾರವಿದು ಎಂಬ ಬಿಜೆಪಿ ಟೀಕೆಗೆ ಅದಕ್ಕೆ ಜನರು ಸೋಲಿಸಿ ರುವುದು. ಬಿಜೆಪಿಯವರಿಗೆ ಭ್ರಮನಿರಸನವಾಗಿದೆ. 85,ಜೀರೋನೊ ಕಾಲವೇ ಉತ್ತರ ಕೊಡುತ್ತೇ.ಭ್ರಷ್ಟಾಚಾರ ರಹಿತ ಆಡಳಿತ ನಮ್ಮ ಗುರಿಯಾಗಿದೆ ಎಂದರು.

    ನನಗೂ ಸಿಎಂ ಆಗುವ ಅವಕಾಶವಿತ್ತು ಎಂಬ ಗೃಹ ಸಚಿವ ಡಾ.ಜಿ.ಪರಮೇಶ್ವರ ಅವರ ಹೇಳಿಕೆ ಗಮನಿಸಿಲ್ಲವೆಂದರು. ಚಿತ್ರದುರ್ಗಕ್ಕೆ ಮತ್ತೊಮ್ಮೆ ಭೇಟಿ ನೀಡಿ ಶಿಕ್ಷಣ ಸಂಸ್ಥೆಗಳ ಕುಂದು ಕೊರತೆ ಪರಿಶೀಲಿಸುವುದಾಗಿ ಹೇಳಿದರು.

    ಜಿಪಂ ಸಿಇಒ ಎಂ.ಎಸ್.ದಿವಾಕರ್,ಸಿಪಿಒ ಗಾಯತ್ರಿ,ಮಂಡಳಿ ಕಾರ‌್ಯದರ್ಶಿ ಶ್ರೀಧರ್ ಬಿ.ಭಜಂತ್ರಿ,ಉಪ ಕಾರ‌್ಯದರ್ಶಿ ಕೃಷ್ಣನಾಯಕ್, ರೂಪಶ್ರೀ ಮತ್ತಿತರ ಮಂಡಳಿ ಅಧಿಕಾರಿ,ಸಿಬ್ಬಂದಿ,ಡಿಸಿಸಿ ಅಧ್ಯಕ್ಷ ಎಂ.ಕೆ.ತಾಜ್‌ಫೀರ್,ಕೃಷ್ಣಮೂರ್ತಿ,ನರಸಿಂಹರಾಜು,ಕಂದಿಕೆರೆ ಸುರೇಶ್ ಬಾಬು,ಶಿವಮೂರ್ತಿ ಮತ್ತಿತರ ಪಕ್ಷದ ಮುಖಂಡರು,ಎಆರ್‌ಎಸ್ ವಿದ್ಯಾಸಂಸ್ಥೆ ಅಧ್ಯಕ್ಷ ಬಿ.ಎ.ಲಿಂಗಾರೆಡ್ಡಿ,ಶೇಖರ್ ಮತ್ತಿತರ ಪ್ರಮು ಖರು ಇದ್ದರು.


    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts