More

    ಆರೋಗ್ಯದ ಕಡೆ ಕಾಳಜಿ ವಹಿಸಿ

    ಯಳಂದೂರು: ಕೂಲಿ ಕಾರ್ಮಿಕರು ತಮ್ಮ ದುಡಿಮೆಯ ಜತೆಗೆ ಆರೋಗ್ಯದ ಕಡೆಗೆ ಹೆಚ್ಚಿನ ಕಾಳಜಿ ವಹಿಸಬೇಕು ಎಂದು ಯರಗಂಬಳ್ಳಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರಾಜೇಶ್ ತಿಳಿಸಿದರು.

    ತಾಲೂಕಿನ ಯರಗಂಬಳ್ಳಿ ಗ್ರಾಮದಲ್ಲಿ ಗುರುವಾರ ಲಕ್ಷ್ಮೀಕಾಂತ್ ಕಟ್ಟೆಯಲ್ಲಿ ಆರೋಗ್ಯ ಅಮೃತ ಅಭಿಯಾನ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು. ಕೂಲಿ ಕಾರ್ಮಿಕರಿಗೆ ಕಾಣಿಸಿಕೊಳ್ಳುವ ಸಾಮಾನ್ಯ ಕಾಯಿಲೆಗಳಾದ ಬಿಪಿ, ಶುಗರ್ ಸೇರಿ ಇತರ ಕಾಯಿಲೆಗಳ ಕುರಿತು ಸ್ಥಳದಲ್ಲಿಯೇ ತಪಾಸಣೆ ನಡೆಸಿ ಗುಣಲಕ್ಷಣಗಳನ್ನು ಪತ್ತೆ ಹಚ್ಚಿ ಸೂಕ್ತ ಸಮಾಲೋಚನೆ ನಡೆಸಲಾಗುವುದು. ಇಲ್ಲಿ ಸಾಮಾನ್ಯ ಕಾಯಿಲೆಗೆ ಔಷಧೋಪಚಾರ ನೀಡಲಾಗುತ್ತಿದ್ದು, ಗಂಭೀರ ಸಮಸ್ಯೆಗಳು ಇದ್ದಲ್ಲಿ ಇಂತಹವರಿಗೆ ಹೆಚ್ಚಿನ ಚಿಕಿತ್ಸೆಗೆ ಸಂಬಂಧಪಟ್ಟ ಆರೋಗ್ಯ ಆಸ್ಪತ್ರೆಗೆ ಕಳುಹಿಸಿ ಸೂಕ್ತ ಚಿಕಿತ್ಸೆ ನೀಡುವ ನಿಟ್ಟಿನಲ್ಲಿ ಕ್ರಮವಹಿಸಲಾಗುವುದು ಎಂದರು.

    ನರೇಗಾ ಯೋಜನೆಯಲ್ಲಿ 100ಕ್ಕೂ ಹೆಚ್ಚು ಕೂಲಿ ಕಾರ್ಮಿಕರಿಗೆ ಆರೋಗ್ಯ ತಪಾಸಣೆ ನಡೆಸಲಾಯಿತು. ಗ್ರಾಪಂ ಅಧ್ಯಕ್ಷೆ ಶೀಲಾ ಸೋಮಣ್ಣ, ಸದಸ್ಯರಾದ ಸಿದ್ದರಾಜು, ಮಹೇಶ್, ಆರೋಗ್ಯ ಅಮೃತ ಅಭಿಯಾನದ ಜಿಲ್ಲಾ ಸಂಯೋಜಕ ಚಂದ್ರಶೇಖರ್ ಎಚ್. ಪಾಟೀಲ್, ತಾಲೂಕು ಸಂಯೋಜಕ ಸಿದ್ದರಾಜು, ನರೇಗಾ ಜೆಇ ಚಂದ್ರಶೇಖರ್, ಮುಖಂಡರಾದ ಮಲ್ಲಪ್ಪ, ಸೋಮಣ್ಣ, ಮಾಹಿತಿ ಶಿಕ್ಷಣ ಸಂಯೋಜಕ ಹರೀಶ್, ಸಮುದಾಯ ಆರೋಗ್ಯ ಅಧಿಕಾರಿ ರೂಪಿಣಿ, ಪ್ರಾಥಮಿಕ ಆರೋಗ್ಯ ಸುರಕ್ಷಣಾಧಿಕಾರಿ ಭಾಗ್ಯಾ, ರವಿಕುಮಾರ್, ಚಂದ್ರಶೇಖರ್, ಆಶಾ ಕಾರ್ಯಕರ್ತೆಯರಾದ ಪಲ್ಲವಿ, ಸಣ್ಣಮ್ಮ ಸೇರಿದಂತೆ ಇತರರು ಹಾಜರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts