More

    ಆರೋಗ್ಯ ಸುರಕ್ಷತೆಗೆ ಆದ್ಯತೆ

    ಹಳಿಯಾಳ: ಪಟ್ಟಣದ ಈಐಡಿ ಪ್ಯಾರಿ ಸಕ್ಕರೆ ಕಾರ್ಖಾನೆಯು ಪ್ರಸಕ್ತ ವರ್ಷದ ಕಬ್ಬು ನುರಿಸುವಿಕೆಯ ಕಾರ್ಯಾರಂಭಕ್ಕೆ ಸಿದ್ಧತೆ ಆರಂಭಿಸಿದೆ. ಕಬ್ಬು ಕಟಾವು ಮಾಡಲು ಆಗಮಿಸುವ ಲಗಾಣಿ ತಾಂಡಾಗಳ ಆರೋಗ್ಯ ಸುರಕ್ಷತೆ ಹೆಚ್ಚಿನ ಕಾಳಜಿ ವಹಿಸಲು ತೀರ್ವನಿಸಿದೆ.

    ಕಾರ್ಖಾನೆಯ ವ್ಯಾಪ್ತಿಗೆ ಹಳಿಯಾಳ, ಧಾರವಾಡ, ಕಲಘಟಗಿ, ಅಳ್ನಾವರ, ಮುಂಡಗೋಡ, ಯಲ್ಲಾಪುರ, ಖಾನಾಪುರ, ಕಿತ್ತೂರ ತಾಲೂಕಗಳು ಸೇರಿವೆ. ಇಲ್ಲಿ ಬೆಳೆಯುವ ಕಬ್ಬನ್ನು ಕಟಾವು ಮಾಡಲು ಹೊರ ರಾಜ್ಯ ಹಾಗೂ ಜಿಲ್ಲೆಗಳಿಂದ ಲಗಾಣಿ ತಾಂಡಾಗಳನ್ನು ತರುತ್ತಾರೆ. ಈ ಮಧ್ಯೆ ಸ್ಥಳೀಯ ಕಬ್ಬು ಬೆಳೆಗಾರರ ಬೇಡಿಕೆಯಂತೆ ಸ್ಥಳೀಯ ಲಗಾಣಿ ತಾಂಡಾಗಳಿಗೂ ಅವಕಾಶವನ್ನು ನೀಡಲಾಗುತ್ತಿದೆ. ಈ ತಿಂಗಳಿನಲ್ಲಿ ಕಬ್ಬು ನುರಿಸುವ ಹಂಗಾಮು ಆರಂಭಗೊಳ್ಳಲಿರುವುದರಿಂದ ಮಹಾರಾಷ್ಟ್ರದಿಂದ ಲಗಾಣಿ ತಾಂಡಾಗಳ ಆಗಮನ ಈಗ ಆರಂಭಗೊಂಡಿದೆ.

    ಸಾರ್ವಜನಿಕರ ಆತಂಕ: ಪ್ರತಿ ತಾಂಡಾದಲ್ಲಿ ಇಪ್ಪತ್ತರಿಂದ ಇಪ್ಪತ್ತೈದು ಕೂಲಿಯಾಳುಗಳು ಇರುತ್ತಾರೆ. ಇವರು ತಮ್ಮ ದೈನಂದಿನ ವಹಿವಾಟುಗಳಿಗಾಗಿ ಪಟ್ಟಣದಲ್ಲಿ ಸುತ್ತಾಡುತ್ತಿದ್ದು, ಕೋವಿಡ್ ಆತಂಕದ ವಾತಾವರಣದಲ್ಲಿ ಲಗಾಣಿ ತಾಂಡಾಗಳ ಓಡಾಟದ ಬಗ್ಗೆ ಸಾರ್ವಜನಿಕ ವಲಯದಲ್ಲಿ ಆಕ್ಷೇಪ ವ್ಯಕ್ತವಾಗುತ್ತಿದೆ. ಈ ಕುರಿತು ಪ್ರತಿಕ್ರಿಯಿಸಿರುವ ತಾಲೂಕು ವೈದ್ಯಾಧಿಕಾರಿ ಡಾ.ರಮೇಶ ಕದಂ, ಹೊರ ರಾಜ್ಯ ಹಾಗೂ ಹೊರ ಜಿಲ್ಲೆಯಿಂದ ಕಬ್ಬು ಕಟಾವು ಮಾಡಲು ಆಗಮಿಸುವ ಕೃಷಿಕೂಲಿಕಾರರಿಗೆ ಕಡ್ಡಾಯವಾಗಿ ಕೋವಿಡ್ ಪರೀಕ್ಷೆಗೊಳಪಡಿಸಲು ಯೋಜಿಸಲಾಗಿದೆ. ಈ ಕುರಿತು ತಹಸೀಲ್ದಾರ್ ಅವರೊಂದಿಗೆ ರ್ಚಚಿಸಲಾಗಿದೆ ಎಂದು ತಿಳಿಸಿದ್ದಾರೆ.

    ಲಗಾಣಿ ತಾಂಡಾಗಳ ಹಿತರಕ್ಷಣೆಯನ್ನು ಕಾಪಾಡುವ ಜವಾಬ್ದಾರಿ ನಮ್ಮ ಮೇಲಿದೆ. ಈಗಾಗಲೇ ನಾವು ಕಾರ್ಖಾನೆಯಿಂದ ಕರೆದು ತರುವ ಲಗಾಣಿ ತಾಂಡಾಗಳ ಆರೋಗ್ಯ ವಿಮೆಯನ್ನು ಕಡ್ಡಾಯವಾಗಿ ಮಾಡುತ್ತಿದ್ದೇವೆ. ಮೇಲಾಗಿ ಸರ್ಕಾರ ಹಾಗೂ ಆರೋಗ್ಯ ಇಲಾಖೆಯವರು ಸೂಚಿಸಿರುವ ಎಲ್ಲಾ ಕೋವಿಡ್ ಸುರಕ್ಷಿತ ಕ್ರಮಗಳನ್ನು ಪಾಲಿಸಲು ತೀರ್ವನಿಸಿದ್ದೇವೆ. ತಾಲೂಕಾಡಳಿತ ಸೂಚಿಸಿದಂತೆ ಕ್ವಾರಂಟೈನ್​ನಲ್ಲಿಡಲು ಸಹ ಯೋಜಿಸಲಾಗಿದೆ. | ವೆಂಕಟರಾವ್ ಜೆ., ಈಐಡಿ ಪ್ಯಾರಿ ಸಕ್ಕರೆ ಕಾರ್ಖಾನೆ ಮುಖ್ಯಸ್ಥರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts