More

    ಆರೋಗ್ಯ ಸಮೀಕ್ಷೆಗೆ ಹೊಸ ವಿಧಾನ

    ಕಾರವಾರ: ಸರ್ಕಾರ ಕರೊನಾ ಲಾಕ್​ಡೌನ್ ನಂತರ ಅನ್​ಲಾಕ್-1 ಘೊಷಿಸಿದೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ರೋಗ ನಿಯಂತ್ರಣ ಸಂಬಂಧ ಸಮೀಕ್ಷೆಗೆ ಜಿಲ್ಲಾಡಳಿತ ಹೊಸ ವಿಧಾನಗಳೊಂದಿಗೆ ಸಜ್ಜಾಗಿದೆ.

    ಇದುವರೆಗೆ ನಾಲ್ಕೈದು ಬಾರಿ ಮನೆ, ಮನೆ ಸಮೀಕ್ಷೆಯನ್ನು ಅಂದಾಜು 5 ಸಾವಿರ ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಕೂಡಿ ನಡೆಸಿದ್ದಾರೆ. ಇನ್ನು ಮುಂದೆ ನಡೆಯುವ ಸಮೀಕ್ಷೆಗೆ ಕಾರ್ಯಕರ್ತೆಯರಿಗೆ ಥರ್ಮಲ್ ಸ್ಕ್ಯಾನರ್ ಒದಗಿಸಲು ಜಿಲ್ಲಾಡಳಿತ ಸಜ್ಜಾಗಿದೆ. ಅಲ್ಲದೆ, ರಕ್ತದಲ್ಲಿ ಆಮ್ಲಜನಕದ ಪ್ರಮಾಣ ಅರಿಯಲು ಪಲ್ಸ್ ಆಕ್ಸಿಮೀಟರ್ ಸಹ ಒದಗಿಸುತ್ತಿದೆ.

    ಹೊರಗಿನಿಂದ ಬರುವವರ ಸಂಖ್ಯೆ ಹೆಚ್ಚುವ ನಿರೀಕ್ಷೆ ಇದೆ. ಅಲ್ಲದೆ, ಮಳೆಗಾಲದಿಂದ ಶೀತ, ಜ್ವರ ಮುಂತಾದ ಲಕ್ಷಣಗಳು ಹೆಚ್ಚುವ ಸಾಧ್ಯತೆ ಇರುವುದರಿಂದ ಸಮೀಕ್ಷೆಯ ವಿಧಾನದಲ್ಲಿ ಬದಲಾವಣೆ ತರಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಹರೀಶ ಕುಮಾರ ಕೆ. ತಿಳಿಸಿದ್ದಾರೆ.

    ಹೊರ ರಾಜ್ಯ ಹಾಗೂ ದೇಶದಿಂದ ಆಗಮಿಸಿದವರ ಮಾಹಿತಿಯನ್ನು ಕಲೆ ಹಾಕಿ ಅಂಥವರ ಮೇಲೆ ಆರೋಗ್ಯ ಕಾರ್ಯಕರ್ತೆಯರು ನಿಗಾ ಇಡಬೇಕಿದೆ. ಅವರ ಆರೋಗ್ಯ ಪರೀಕ್ಷೆಯನ್ನು ಸ್ವತಃ ಮಾಡಬೇಕಿದೆ. ಸದ್ಯ ಜಿಲ್ಲೆಯಲ್ಲಿ 800ರಷ್ಟು ಥರ್ಮಲ್ ಸ್ಕ್ಯಾನರ್​ಗಳಿವೆ, ಎಸ್​ಎಸ್​ಎಲ್​ಸಿ ಪರೀಕ್ಷೆಗೆ ಸರ್ಕಾರ ಇನ್ನಷ್ಟು ಸ್ಕ್ಯಾನರ್ ಒದಗಿಸಲಿದೆ. ಅವುಗಳನ್ನು ಬಳಸಿಕೊಂಡು ಇನ್ನಷ್ಟು ಖರೀದಿಗೆ ಜಿಲ್ಲಾಡಳಿತ ಯೋಜಿಸಿದೆ ಎಂದು ಡಿಸಿ ಹರೀಶ ಕುಮಾರ್ ಮಾಹಿತಿ ನೀಡಿದ್ದಾರೆ.

    ಅಲ್ಲದೆ, ಸರ್ಕಾರ ಇದಕ್ಕಾಗಿ ಆಪ್ ಒಂದನ್ನು ಸಿದ್ಧ ಮಾಡಿದ್ದು, ಕ್ವಾರಂಟೈನ್​ನಲ್ಲಿ ಇರುವವರು ಸೆಲ್ಪಿ ತೆಗೆದು ಕಾರ್ಯಕರ್ತೆಯರಿಗೆ ಕಳಿಸಬೇಕಿದೆ. ಕಾರ್ಯಕರ್ತೆ ಅದನ್ನು ಆಪ್​ಗೆ ಅಪ್​ಲೋಡ್ ಮಾಡಬೇಕಿದೆ ಎಂದಿದ್ದಾರೆ.

    ಗುಣಮಟ್ಟದ ಕಾರ್ಯವಾಗಲಿ: ತಾಲೂಕಿನ ಆಶಾ, ಅಂಗನವಾಡಿ ಕಾರ್ಯಕರ್ತೆಯರು, ಪಿಡಿಒಗಳು, ಗ್ರಾಮ ಲೆಕ್ಕಿಗರ ಸಭೆಯನ್ನು ಜಿಲ್ಲಾ ರಂಗಮಂದಿರದಲ್ಲಿ ಜಿಲ್ಲಾಧಿಕಾರಿ ಡಾ.ಹರೀಶ ಕುಮಾರ ಕೆ. ನಡೆಸಿದರು.

    ‘ಹೊರಗಿನಿಂದ ಬರುವವರನ್ನು ತಡೆಯಲು ಸಾಧ್ಯವಿಲ್ಲ. ಇದುವರೆಗೆ ಸಾಕಷ್ಟು ಬಾರಿ ಎಲ್ಲ ಮನೆಗಳಿಗೆ ತೆರಳಿ ಮಾಹಿತಿ ಕಲೆ ಹಾಕಿದ್ದೀರಿ, ಇನ್ನು ಎಲ್ಲ ಮನೆಗಳಿಗೂ ತೆರಳುವ ಅಗತ್ಯವಿಲ್ಲ. ಆದರೆ, ನಿಮ್ಮ ಮಾಹಿತಿ ಜಾಲವನ್ನು ಬಲಪಡಿಸಿಕೊಳ್ಳಿ. ನಿಮ್ಮ ವ್ಯಾಪ್ತಿಯಲ್ಲಿ ಹೊರಗಿನ ತಾಲೂಕು, ಜಿಲ್ಲೆ, ರಾಜ್ಯ, ದೇಶದಿಂದ ಬಂದ ಎಲ್ಲರ ಮಾಹಿತಿ ಇರುವಂತೆ ನೋಡಿಕೊಳ್ಳಿ’ ಎಂದು ಸೂಚನೆ ನೀಡಿದರು.

    ಮಾಹಿತಿ ಕಲೆ ಹಾಕುವ ಜತೆಗೆ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸವಾಗಬೇಕು ಎಂದರು. ಎಸ್​ಪಿ ಶಿವಪ್ರಕಾಶ ದೇವರಾಜು, ಎಸಿ ಪ್ರಿಯಾಂಗಾ ಎಂ. ವೇದಿಕೆಯಲ್ಲಿದ್ದರು.

    9 ಜನರ ಬಿಡುಗಡೆ
    ಜಿಲ್ಲೆಯಲ್ಲಿ ಮಂಗಳವಾರ ಯಾವುದೇ ಹೊಸ ಪ್ರಕರಣವಿಲ್ಲ. ಕ್ರಿಮ್್ಸ ಆಸ್ಪತ್ರೆಯಿಂದ 9 ಜನರನ್ನು ಬಿಡುಗಡೆ ಮಾಡಲಾಗಿದೆ. ಹಳಿಯಾಳದ 4 ವರ್ಷದ ಮಗು, ಶಿರಸಿಯ ಒಬ್ಬ ಪುರುಷ, ಒಬ್ಬ ಮಹಿಳೆ, ಸಿದ್ದಾಪುರದ ಇಬ್ಬರು ಪುರುಷರು, ಕುಮಟಾದ ಮೂವರು ಪುರುಷರು, ಒಬ್ಬ ಮಹಿಳೆಯನ್ನು ಬಿಡುಗಡೆ ಮಾಡಲಾಗಿದೆ. ಜಿಲ್ಲೆಯಲ್ಲಿ ಒಟ್ಟಾರೆ ಸೋಂಕಿತರ ಸಂಖ್ಯೆ 96 ಇದ್ದು, ಸದ್ಯ 14 ಜನ ಮಾತ್ರ ಕ್ರಿಮ್ಸ್​ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬಿಡುಗಡೆ ಸಂದರ್ಭದಲ್ಲಿ ಕ್ರಿಮ್್ಸ ನಿರ್ದೇಶಕ ಡಾ.ಗಜಾನನ ನಾಯಕ, ಡಿಎಚ್​ಒ ಡಾ.ಶರದ್ ನಾಯಕ, ಕ್ರಿಮ್್ಸ ಸಿಎಒ ಮಹೇಶ ಬಾಬು, ಜಿಲ್ಲಾ ಸರ್ಜನ್ ಡಾ.ಶಿವಾನಂದ ಕುಡ್ತಲಕರ್ ಇದ್ದರು.

    ಗೋವಾ ಲೇಬರ್ ಕ್ಯಾಂಪ್ ಬಂದ್ಹೊ ರರಾಜ್ಯದ ಕಾರ್ವಿುಕರು ಬೀದಿಗೆ
    ಪಣಜಿ:
    ಗೋವಾದಲ್ಲಿ ಲೇಬರ್ ಕ್ಯಾಂಪ್​ಗಳನ್ನು ಬಹುತೇಕ ಬಂದ್ ಮಾಡಲಾಗಿದೆ. ಅಲ್ಲಿ ಆಶ್ರಯ ಪಡೆದಿದ್ದ ಹೊರ ರಾಜ್ಯಗಳ ಕೂಲಿ ಕಾರ್ವಿುಕರು ಬೀದಿಗೆ ಬೀಳುವಂತಾಗಿದೆ. ಲೇಬರ್ ಕ್ಯಾಂಪ್​ಗಳಲ್ಲಿ ಕರ್ನಾಟಕ, ಕೇರಳ, ಬಿಹಾರ, ರಾಜಸ್ಥಾನ, ಒಡಿಶಾ ಭಾಗದ ಕೂಲಿ ಕಾರ್ವಿುಕರು ಹೆಚ್ಚಾಗಿ ಆಶ್ರಯ ಪಡೆದಿದ್ದರು. ಈ ಪೈಕಿ ಈಗಾಗಲೇ ಹೆಚ್ಚಿನ ಕೂಲಿ ಕಾರ್ವಿುಕರು ತಮ್ಮ ರಾಜ್ಯಗಳಿಗೆ ವಾಪಸ್ ತೆರಳಿದ್ದಾರೆ. ಇನ್ನೂ ನೂರಾರು ಕೂಲಿ ಕಾರ್ವಿುಕರು ನಾವೇಲಿ ಮತ್ತು ಮಡಗಾಂವ ಸ್ಟೇಡಿಯಂನ ಲೇಬರ್ ಕ್ಯಾಂಪ್​ನಲ್ಲಿ ಇದ್ದರು. ಆದರೆ, ಕಳೆದ ಎರಡು ದಿನಗಳಿಂದ ಈ ಕ್ಯಾಂಪ್​ಗಳನ್ನೂ ಬಂದ್ ಮಾಡಿರುವುದರಿಂದ ಕಾರ್ವಿುಕರು ಬೀದಿಗೆ ಬಿದ್ದಿದ್ದಾರೆ. ಸದ್ಯ ಶ್ರಮಿಕ ಎಕ್ಸ್​ಪ್ರೆಸ್ ರೈಲು ಸೇವೆ ಇಲ್ಲದ ಕಾರಣ ಈ ಕಾರ್ವಿುಕರನ್ನು ಪೊಲೀಸರು ರೈಲು ನಿಲ್ದಾಣದ ಒಳಗೆ ಬಿಡುತ್ತಿಲ್ಲ ಎನ್ನಲಾಗಿದೆ. ಊರಿಗೆ ತೆರಳಲು ಸಾಧ್ಯವಾಗದ್ದರಿಂದ ಕಾರ್ವಿುಕರು ತೊಂದರೆ ಅನುಭವಿಸುವಂತಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts