More

    ಆರಂಭದಲ್ಲೇ ಚಿಕಿತ್ಸೆ ನೀಡಿದರೆ ಕಿವುಡತನ ನಿವಾರಣೆ

    ಕೆ.ಆರ್.ಪೇಟೆ: ಅಂಗವಿಕಲರಿಗೆ ಅನುಕಂಪದ ಬದಲಿಗೆ ಅವಕಾಶಗಳನ್ನು ನೀಡಿದರೆ ಅವರು ಉನ್ನತ ಮಟ್ಟದಲ್ಲಿ ಸಾಧನೆ ತೋರುತ್ತಾರೆ ಎಂದು ಪಟ್ಟಣದ ಸಾರ್ವಜನಿಕ ಆಸ್ಪತ್ರೆ ಆಡಳಿತಾಧಿಕಾರಿ ಡಾ.ಶಿವಕುಮಾರ್ ತಿಳಿಸಿದರು.

    ತಾಲೂಕಿನ ಮಾಕವಳ್ಳಿ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಅಂಗವಿಕಲರಿಗೆ ಆಯೋಜಿಸಿದ್ದ ಸಾಮಾಜಿ ಜಾಗೃತಿ, ಕಿವುಡುತನ ತಪಾಸಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

    ಕಿವುಡುತನ ಶಾಪವಲ್ಲ. ಕಿವುಡುತನ ತಡೆಗಟ್ಟಲು ಆರಂಭದಲ್ಲೇ ಗುರುತಿಸುವುದು ಮುಖ್ಯ. ಇದಕ್ಕೆ ಚಿಕಿತ್ಸೆ ನೀಡಲು ಇಎನ್‌ಟಿ ಹಾಗೂ ಆಡಿಯೋಲಾಜಿ ತಜ್ಞರು ಲಭ್ಯವಿದ್ದಾರೆ. ಸರ್ಕಾರಿ ಆಸ್ಪತ್ರೆಗಳಲ್ಲೂ ತಪಾಸಣೆ ನಡೆಸಿ ಶ್ರವಣ ಸಾಧನ ವಿತರಿಸಲಾಗುತ್ತದೆ. ಈ ಬಗ್ಗೆ ಅರಿವು ಮೂಡಿಸುವುದು ಸಮುದಾಯದ ಕರ್ತವ್ಯ ಎಂದರು.

    ಕಿವಿಯಲ್ಲೇ ಏನೇ ಸಮಸ್ಯೆ ಕಾಣಿಸಿಕೊಂಡರೂ ಶೀಘ್ರವೇ ಚಿಕಿತ್ಸೆ ಪಡೆದು ದೋಷ ನಿವಾರಿಸಿಕೊಳ್ಳಬೇಕು. ಇತ್ತೀಚಿನ ದಿನಗಳಲ್ಲಿ ಪ್ರತಿ 10 ಜನರಲ್ಲಿ ಒಬ್ಬರು ಶ್ರವಣ ದೋಷದಿಂದ ಬಳಲುತ್ತಿದ್ದಾರೆ. ಕಿವಿ ನೋವು ಕಾಣಿಸಿಕೊಂಡಾಗ ಗ್ರಾಮೀಣ ಭಾಗದ ಜನರು ಸೂಕ್ಷ್ಮ ವಸ್ತುಗಳಿಂದ ಕಿವಿ ಸ್ವಚ್ಛಗೊಳಿಸುವ ಕೆಲಸ ಮಾಡುತ್ತಾರೆ. ಇದರಿಂದ ಸಮಸ್ಯೆ ಪರಿಹಾರವಾಗುವ ಬದಲು ಗಂಭೀರವಾಗುತ್ತದೆ. ವಯಸ್ಸು ಹೆಚ್ಚಾದಂತೆ ದೃಷ್ಟಿ ದೋಷ, ಶ್ರವಣ ದೋಷ ಬರುತ್ತದೆ. ಇದಕ್ಕೆ ಚಿಕಿತ್ಸೆಯೇ ಪರಿಹಾರ ಎಂದು ಸಲಹೆ ನೀಡಿದರು.

    ಮಂಡ್ಯ ವೈದ್ಯಕೀಯ ಶಿಕ್ಷಣ ಸಂಸ್ಥೆಯ ಆಡಿಯೋಲಜಿಸ್ಟ್ ಡಾ.ನೇಹಾ, ತೇಜಸ್, ಮಾಕವಳ್ಳಿ ಗ್ರಾಪಂ ವಿಆರ್‌ಡಬ್ಲುೃ ದೇವರಸೇಗೌಡ, ಆಶಾಕಾರ್ಯಕರ್ತೆ ವಿಶಾಲಕ್ಷ್ಮಮ್ಮ, ಆಸ್ಪತ್ರೆ ಸಿಬ್ಬಂದಿ ಇದ್ದರು.

     

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts