More

    ಆದರ್ಶ ಮರೆತ ಸಮಾಜಕ್ಕಿಲ್ಲ ಭವಿಷ್ಯ: ಸಂತೋಷ್ ಹೆಗಡೆ

    ದಾವಣಗೆರೆ: ಆದರ್ಶ ಹಾಗೂ ಮೌಲ್ಯಗಳನ್ನು ಕಸದ ಬುಟ್ಟಿಗೆ ಎಸೆಯುವ ಯಾವುದೇ ಸಮಾಜದಲ್ಲಿ ಶಾಂತಿ-ಸೌಹಾರ್ದತೆ ಸಾಧ್ಯವಿಲ್ಲ. ಅಂತಹ ಸಮಾಜದ ಮುಂದಿನ ಪೀಳಿಗೆಗೆ ಭವಿಷ್ಯವೂ ಇಲ್ಲ ಎಂದು ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎನ್.ಸಂತೋಷ್ ಹೆಗಡೆ ಎಚ್ಚರಿಸಿದರು.
    ನಗರದ ಸರ್.ಎಂ.ವಿ. ಪಿಯು ಕಾಲೇಜಿನಲ್ಲಿ ಗುರುವಾರ ಹಮ್ಮಿಕೊಂಡಿದ್ದ ಸರ್.ಎಂ. ವಿಶ್ವೇಶ್ವರಯ್ಯ ಜಯಂತ್ಯುತ್ಸವ ಉದ್ಘಾಟಿಸಿ ಮಾತನಾಡಿದರು.
    ಭ್ರಷ್ಟಾಚಾರಕ್ಕೆ ಸಮಾಜ ಕಾರಣವೇ ಹೊರತು ವ್ಯಕ್ತಿಗಳಲ್ಲ. ಶ್ರೀಮಂತಿಕೆ ಹಾಗೂ ಅಧಿಕಾರಗಳನ್ನು ಪೂಜಿಸುವ ಮತ್ತು ಜೈಲಿಗೆ ಹೋಗಿ ಜಾಮೀನಿನ ಮೇಲೆ ಹೊರಬಂದವರಿಗೆ ಸಲಾಂ ಹಾಕುವ ಸಮಾಜದಲ್ಲಿ ನಾವಿದ್ದೇವೆ ಎಂದು ವಿಷಾದಿಸಿದರು.
    ನಮ್ಮ ಕಾಲದಲ್ಲಿ ಶೇ.10 ಪರ್ಸೆಂಟ್ ಇತ್ತು, ನಿಮ್ಮ ಅಧಿಕಾರವಧಿಯಲ್ಲಿ ಶೇ.40 ಪರ್ಸೆಂಟೇಜ್ ಇದೆ ಎಂದು ಆಡಳಿತ ಹಾಗೂ ಪ್ರತಿಪಕ್ಷಗಳ ನಡುವೆ ಆರೋಪ ಪ್ರತ್ಯಾರೋಪ ಕೇಳಿ ಬರುತ್ತಿದೆ. ಎಲ್ಲ ಪಕ್ಷಗಳಲ್ಲೂ ಭ್ರಷ್ಟಾಚಾರವಿರುವುದನ್ನು ಒಪ್ಪಿಕೊಂಡಂತಾಗಿದೆ ಎಂದರು.
    ಕಾಯ್ದೆಗಳಿಂದ ಯಾವುದೇ ದೇಶದಲ್ಲಿ ಭ್ರಷ್ಟಾಚಾರ ನಿವಾರಣೆ ಸಾಧ್ಯವಾಗಿಲ್ಲ. ಚೀನಾದಲ್ಲಿ ಭಾರತಕ್ಕಿಂತಲೂ ಕಠಿಣ ಕಾಯ್ದೆಗಳಿದ್ದಾಗ್ಯೂ ಭ್ರಷ್ಟಾಚಾರ ನಿಂತಿಲ್ಲ. ಜನರು ತೃಪ್ತಿ ಹಾಗೂ ಮಾನವೀಯತೆ ಬೆಳೆಸಿಕೊಂಡಾಗ ಮಾತ್ರ ಇದನ್ನು ನಿಯಂತ್ರಿಸಬಹುದು ಎಂದು ಹೇಳಿದರು. ಕಾಲೇಜಿನ ಕಾರ್ಯದರ್ಶಿ ಎಸ್.ಜೆ ಶ್ರೀಧರ್ ಮಾತನಾಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts