More

    ಆದರ್ಶ ಗ್ರಾಮ ಪ್ರಗತಿ ಪರಿಶೀಲನೆ ಸಭೆ ವಿಫಲ: ಮತ್ತೊಮ್ಮೆ ನಡೆಸಲು ಸಂಸದ ಮುನಿಸ್ವಾಮಿ ನಿರ್ಧಾರ

    ಬೇತಮಂಗಲ: ಸಂಸದರ ಆದರ್ಶ ಗ್ರಾಮವನ್ನಾಗಿ ಕ್ಯಾಸಂಬಳ್ಳಿ ಪಂಚಾಯಿತಿಯನ್ನು ಆಯ್ಕೆ ಮಾಡಿಕೊಂಡಿದ್ದ ಎಸ್​.ಮುನಿಸ್ವಾಮಿ 1 ವರ್ಷದ ಅವಧಿ ಮುಗಿದಿದ್ದ ಹಿನ್ನೆಲೆಯಲ್ಲಿ ಸಂಬಂಧಪಟ್ಟ ಇಲಾಖೆಗಳ ಮುಖ್ಯಸ್ಥರ ಸಮ್ಮುಖದಲ್ಲಿ ನಡೆಯಬೇಕಾಗಿದ್ದ ಪ್ರಗತಿ ಪರಿಶೀಲನಾ ಸಭೆ ಹಲವು ಕಾರಣಗಳಿಗಾಗಿ ಸಂರ್ಪೂಣ ವಿಫಲವಾಗಿದೆ ಎಂದು ಮುನಿಸ್ವಾಮಿಯವರೇ ಒಪ್ಪಿಕೊಂಡರಲ್ಲದೆ ಇದೇ ತಿಂಗಳು 23ರ ಶನಿವಾರ ಮತ್ತೊಮ್ಮೆ ಸಭೆ ನಡೆಸುವುದಾಗಿ ಪ್ರಕಟಿಸಿದರು.


    ಕ್ಯಾಸಂಬಳ್ಳಿಯ ಮಾಜಿ ಶಾಸಕ ಎಂ.ನಾರಾಯಣಸ್ವಾಮಿಯವರ ಕಲ್ಯಾಣ ಮಂಟಪದಲ್ಲಿ ಸಭೆ ಆಯೋಜಿಸಲಾಗಿತ್ತು. 11 ಗಂಟೆಗೆ ಹಾಜರಾಗುವಂತೆ 34 ಇಲಾಖೆಗಳ ಅಧಿಕಾರಿಗಳಿಗೂ ಸೂಚನೆ ನೀಡಲಾಗಿತ್ತು. ಅದರಂತೆ ಬಹುತೇಕ ಇಲಾಖೆ ಅಧಿಕಾರಿಗಳು 12 ಗಂಟೆಯ ಒಳಗೆ ದಾಖಲೆಗಳೊಂದಿಗೆ ಹಾಜರಾಗಿದ್ದರು.


    ಆದರೆ ಸಂಸದರು ಸಭೆಗೆ ಬಂದಾಗ ಬರೋಬ್ಬರಿ 3&40 ಆಗಿತ್ತು. ಇದರಿಂದಾಗಿ ಸುಮಾರು 4ರಿಂದ 5 ಗಂಟೆಗಳ ಕಾಲ ಊಟ ತಿಂಡಿ ಇಲ್ಲದೆ ಬಹುತೇಕ ಅಧಿಕಾರಿಗಳು ಸುಸ್ತಾದರು. ಸಭೆ ಪ್ರಾರಂಭವಾಗುವಷ್ಟರಲ್ಲಿ 4 ಗಂಟೆಯಾಗಿತ್ತು.


    ಮೊದಲಿಗೆ ಕೃಷಿ ಇಲಾಖೆ ಅಧಿಕಾರಿ ಅಕ್ಷಯ್​ ತಮ್ಮ ಇಲಾಖೆಯ ಪ್ರಗತಿ ವರದಿ ಒಪ್ಪಿಸಲು ಪ್ರಾರಂಭಿಸಿದರು, ನಾಲ್ಕೆದು ಇಲಾಖೆ ಅಧಿಕಾರಿಗಳು ಮಾಹಿತಿ ನೀಡುತ್ತಿದ್ದರಾದರೂ ಸಂಸದರೂ ಸೇರಿದಂತೆ ಯಾರಿಗೂ ಏನೂ ಅರ್ಥವಾಗದೆ ಗೊಂದಲದ ವಾತಾವರಣ ಉಂಟಾಯಿತು.

    ಫೀಲ್ಡಿಗಿಳಿದ ಮುನಿಸ್ವಾಮಿ: ಸಭೆ ಪ್ರಾರಂಭವಾಗಿ ಅರ್ಧ ಗಂಟೆ ಕಳೆದರೂ ಮೈಕಾಸುರನಿಂದ ಕಿರಿಕಿರಿ ತಪ್ಪದ ಕಾರಣ ವೇದಿಕೆಯಿಂದ ಕೆಳಗಿಳಿದ ಮುನಿಸ್ವಾಮಿ ಬೆಂಬಲಿಗರೊಂದಿಗೆ ಸೌಂಡ್​ ಬಾಕ್ಸ್​ಗಳನ್ನು ಬದಲಾಯಿಸಿದ್ದೂ ಸೇರಿದಂತೆ ಸರಿ ಮಾಡುವ ಪ್ರಯತ್ನ ನಡೆಸಿದರು. ಆದರೂ ಪ್ರಯೋಜನವಾಗದ ಕಾರಣ ವ್ಯವಸ್ಥೆಗೆ ಒಪ್ಪಿಸಿದ್ದ ಕ್ಯಾಸಂಬಳ್ಳಿ ಗ್ರಾಪಂ ಪಿಡಿಒ ಮಹೇಶ್​, ಮುಖಂಡ ಜಯಪ್ರಕಾಶ್​ ನಾಯ್ಡು ಅವರ ಮೇಲೆ ಅಸಮಾಧಾನ ವ್ಯಕ್ತಪಡಿಸಿದರು. ಪ್ರಾರಂಭದಲ್ಲೇ ಅಧಿಕಾರಿಗಳ ವಿರುದ್ಧ ಧ್ವನಿ ಎತ್ತಿದ ಮುನಿಸ್ವಾಮಿ ಸರಿಯಾಗಿ ಮಾಹಿತಿ ನೀಡಲು ಬರಲ್ಲ, ನೀವು ಸರಿಯಾಗಿ ಕೆಲಸ ಮಾಡಿದ್ದರೆ ತಾನೇ ಮಾತನಾಡಲು ಸಾಧ್ಯ ಎಂದೆಲ್ಲಾ ರೇಗಾಡಿದರಲ್ಲದೆ ಈ ಸಭೆ ಸಂರ್ಪೂಣ ವಿಫಲವಾಗಿದೆ ಎಂದು ೂಷಿಸಿಬಿಟ್ಟರು.

    ಪಕ್ಕಾ ಸಿದ್ಧತೆ, ಬದ್ಧತೆಯೊಂದಿಗೆ ಬರಬೇಕು: ಯಾವ ಯಾವ ಇಲಾಖೆ ಅಧಿಕಾರಿಗಳು ಭಾಗವಹಿಸಿದ್ದಾರೆ ಎಂದು ತಿಳಿದುಕೊಂಡ ನಂತರ ಮಾತನಾಡಿದ ಮುನಿಸ್ವಾಮಿ ನಾನು ಕಾರ್ಪೊರೇಟರ್​, ನನಗೇನು ಗೊತ್ತಾಗುವುದಿಲ್ಲ ಎಂದು ತಪ್ಪು ಮಾಹಿತಿಯೊಂದಿಗೆ ಬಂದಂತಿದೆ. ಆದರೆ 8 ದಿನಗಳ ನಂತರ ನಡೆಯುವ ಪ್ರಗತಿ ಪರಿಶೀಲನೆ ಸಭೆಗೆ ನಿಮ್ಮ ಇಲಾಖೆಗಳಿಂದ ಮಾಡಿರುವ ಅಭಿವೃದ್ಧಿ, ಸಾಧನೆ, ಫಲಾನುಭವಿಗಳ ಪಟ್ಟಿ ಮತ್ತು ಸಾ ಆಧಾರಗಳ ಸಮೇತ ಬರಬೇಕು ಎಂದು ಸೂಚಿಸಿದರು. ಕಾಮಗಾರಿ ನಡೆಸಿರುವ ಸ್ಥಳದಲ್ಲಿ ಸಂಸದರ ಆದರ್ಶ ಗ್ರಾಮ ಯೋಜನೆ ಅಡಿಯಲ್ಲಿ ಅಭಿವೃದ್ಧಿ ನಾಮಲಕ ಅಳವಡಿಸಿರಬೇಕು ಎಂದು ಪರ್ಮಾನು ಹೊರಡಿಸಿದರು.

    ಪೊಲೀಸ್​ ಜೀಪ್​ ಧ್ವನಿವರ್ಧಕ ಅಳವಡಿಸಿದ ಅಧಿಕಾರಿಗಳು: ಸಂಸದರು ಮೈಕ್​ ಇಲ್ಲದೆ ಮಾತನಾಡುತ್ತಿರುವುದನ್ನು ಗಮನಿಸಿದ ಸರ್ಕಲ್​ ಇನ್​ಸ್ಪೆಕ್ಟರ್​ ವೆಂಕಟೇಶ್​ ಮತ್ತು ಸಿಬ್ಬಂದಿ ಪೊಲೀಸ್​ ವಾಹನಕ್ಕೆ ಅಳವಡಿಸುವ ಧ್ವನಿವರ್ಧಕ ತಂದು ಸಂಸದರಿಗೆ ಮಾತನಾಡಲು ಸಹಕರಿಸಿದ ಪ್ರಸಂಗವೂ ನಡೆಯಿತು. ಕೋಲಾರದಿಂದ ಕ್ಯಾಸಂಬಳ್ಳಿಗೆ ಬರುತ್ತಿದ್ದಂತೆ ಮುನಿಸ್ವಾಮಿ ನೇರವಾಗಿ ಕೆ.ಸಿ.ರೆಡ್ಡಿ ಸಮಾಧಿ ಬಳಿ ತೆರಳಿ ಪುಷ್ಪಮಾಲೆ ಅಪಿರ್ಸಿದರಲ್ಲದೆ ಆ ಪ್ರದೇಶವನ್ನು ಸುಂದರವಾಗಿಸಲು ಕ್ರಮಕೈಗೊಳ್ಳಬೇಕೆಂದು ಪಿಡಿಓ ಮಹೇಶ್​ಗೆ ಸೂಚಿಸಿದರು. ಅಲ್ಲಿಂದ ನೇರವಾಗಿ ಸರ್ಕಾರಿ ಶಾಲಾ ಆವರಣಕ್ಕೆ ತೆರಳಿ 30 ನಿಮಿಷ ಶಿಕ್ಷಕರು ಮತ್ತು ವಿದ್ಯಾಥಿರ್ಗಳ ಜೊತೆ ಸಮಾಲೋಚಿಸಿ ಸೂಕ್ತ ಕೊಠಡಿಗಳು ಮತ್ತು ಆಟದ ಮೈದಾನ ನಿಮಿರ್ಸುವ ಭರವಸೆ ನೀಡಿದರು.

    ಅಧಿಕಾರಿಗಳು, ಕಾರ್ಯಕರ್ತರಿಗೆ ಉಪವಾಸ: 11 ಗಂಟೆಯಿಂದ ಕಾದು ಕುಳಿರು, ಉಪವಾಸದಲ್ಲಿದ್ದ ಅಧಿಕಾರಿಗಳು ಮತ್ತು ಬಿಜೆಪಿ ಕಾರ್ಯಕರ್ತರು ಮುನಿಸ್ವಾಮಿ ಬರುವಿಕೆಯನ್ನೇ ನೋಡುತ್ತಿದ್ದರು. ಆದರೆ ಶಾಲಾ ಭೇಟಿ ನಂತರ ನೇರವಾಗಿ ಅಲ್ಲಿಯೇ ಇದ್ದ ಮಾಜಿ ಶಾಸಕ ಎಂ.ನಾರಾಯಣಸ್ವಾಮಿ ಅವರ ಮನೆಗೆ ಸಂಸದರು ಊಟಕ್ಕೆ ತೆರಳಿದರು. ಆಗಲೇ ಬರೋಬ್ಬರಿ 3 ಗಂಟೆಯಾಗಿತ್ತು. ಅಲ್ಲಿ ಸುಮಾರು 1 ಗಂಟೆ ಕಳೆದು ಸಭೆೆಗೆ ಬಂದಾಗ 4 ಗಂಟೆಯಾಗಿತ್ತು. ಅಷ್ಟರಲ್ಲಿ ಪ್ರಾರ್ಥನೆ ಮಾಡಲು ಬಂದಿದ್ದ ಪುಟಾಣಿ ಮಕ್ಕಳು ಸೇರಿದಂತೆ ಎಲ್ಲರೂ ಸುಸ್ತಾಗಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts