More

    ಆತ್ಮ ನಿರ್ಭರ ಭಾರತ ಬೆಂಬಲಿಸಿ ಸ್ವಾವಲಂಬಿ ಜಿಲ್ಲೆ ಆಲೋಚನೆ ಅನುಷ್ಠಾನ ಯತ್ನ

    ಮೈಸೂರು: ಪ್ರಧಾನಿ ನರೇಂದ್ರ ಮೋದಿ ಅವರ ಆತ್ಮ ನಿರ್ಭರ ಭಾರತ ಬೆಂಬಲಿಸಿ ಆತ್ಮ ನಿರ್ಭರ ಜಿಲ್ಲೆ (ಸ್ವಾವಲಂಬಿ ಜಿಲ್ಲೆ) ಆಲೋಚನೆಯನ್ನು ರಾಜ್ಯದ ಪ್ರತಿ ಜಿಲ್ಲೆಯಲ್ಲೂ ಅನುಷ್ಠಾನಕ್ಕೆ ತರಲು ಸ್ವದೇಶಿ ಜಾಗರಣ ಮಂಚ್ ಪ್ರಯತ್ನಿಸುತ್ತಿದೆ ಎಂದು ಜಾಗರಣ ಮಂಚ್‌ನ ಕ್ಷೇತ್ರೀಯ ಸಂಯೋಜಕ ಎನ್.ಆರ್.ಮಂಜುನಾಥ್ ತಿಳಿಸಿದರು.

    ಆತ್ಮನಿರ್ಭರ ಭಾರತ ಸಾಕಾರಗೊಳ್ಳಬೇಕಾದರೆ ಆತ್ಮ ನಿರ್ಭರ ಗ್ರಾಮ, ಆತ್ಮ ನಿರ್ಭರ ತಾಲೂಕು, ಆತ್ಮ ನಿರ್ಭರ ಜಿಲ್ಲೆ, ಆತ್ಮ ನಿರ್ಭರ ರಾಜ್ಯವಾಗಬೇಕು. ಪ್ರಸ್ತುತ ಪರಿಸ್ಥಿತಿಯಲ್ಲಿ ಆತ್ಮನಿರ್ಭರ ಗ್ರಾಮ, ತಾಲೂಕು ಪ್ರಾಯೋಗಿಕವಾಗಿ ಸಾಧ್ಯವಿಲ್ಲ. ಆದ್ದರಿಂದ ಜಾಗರಣ ಮಂಚ್ ಆತ್ಮ ನಿರ್ಭರ ಜಿಲ್ಲೆ ಮಾಡುವ ಪ್ರಯತ್ನ ಮಾಡುತ್ತಿದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

    ಈ ನಿಟ್ಟಿನಲ್ಲಿ ಮೈಸೂರು ಜಿಲ್ಲೆಯಲ್ಲೇ ತಯಾರಾಗುವ ಜನರ ನಿತ್ಯ ಬಳಕೆಯ ಅವಶ್ಯಕ ವಸ್ತುಗಳ ಪಟ್ಟಿ ತಯಾರಿಸಬೇಕಿದೆ. ಈವರೆಗೆ ನಾವು ದಿನ ಬಳಕೆಯ ವಿದೇಶಿ ವಸ್ತುಗಳು, ಬ್ರಾೃಂಡ್ ಹೆಸರು ಹಾಗೂ ಅದೇ ಗುಣಮಟ್ಟದ ಸ್ವದೇಶಿ ಬ್ರಾೃಂಡ್ ವಸ್ತುಗಳ ಪಟ್ಟಿಯನ್ನು ಮನೆಮನೆಗೆ ತಲುಪಿಸಿ ಸ್ವದೇಶಿ ಬಳಕೆಯ ಮನೋಭಾವವನ್ನು ಜನರಲ್ಲಿ ಹುಟ್ಟುಹಾಕಲು ಪ್ರಯತ್ನಿಸಿ, ಯಶಸ್ಸು ಕಂಡಿದ್ದೇವೆ ಎಂದರು.

    ಮೈಸೂರು ಜಿಲ್ಲೆಯ ಉತ್ಪಾದಕರು ತಾವು ಯಾವ ರೀತಿಯ ವಸ್ತುಗಳನ್ನು ಉತ್ಪಾದಿಸುತ್ತಿದ್ದಾರೋ ಅದರ ಮಾಹಿತಿಯನ್ನು ನಮಗೆ ನೀಡಿದಲ್ಲಿ, ಇದರ ಬಗ್ಗೆ ಜನರಿಗೆ ತಿಳಿಸಲು ಸಹಕಾರಿಯಾಗಲಿದೆ. ಜಿಲ್ಲೆಯಲ್ಲಿ ತಯಾರಾಗುವ ವಸ್ತುಗಳ ಪಟ್ಟಿಯನ್ನು ಜಿಲ್ಲೆಯ ಪ್ರತಿ ಮನೆಗೂ ತಲುಪಿಸುತ್ತೇವೆ. ಇತರ ಜಿಲ್ಲೆಗಳಲ್ಲೂ ಇಂತಹ ಕೆಲಸವನ್ನು ಪ್ರಾರಂಭಿಸಲಿದ್ದೇವೆ ಎಂದರು.

    ಪ್ರತಿ ವರ್ಷ ನಾವು ನಡೆಸುತ್ತಿದ್ದ ಸ್ವದೇಶಿ ಮೇಳಗಳು ಜನಪ್ರಿಯವಾಗಿದ್ದು, ಇನ್ನು ಮುಂದೆ ಪ್ರತಿ ಜಿಲ್ಲೆಗಳಲ್ಲಿ ಆಯಾ ಜಿಲ್ಲೆಯ ತಯಾರಕರ ದೇಶಿ ಮೇಳ ಮತ್ತು ಸಮಾವೇಶಗಳನ್ನು ನಡೆಸುತ್ತೇವೆ. ಇದರಿಂದ ಹೆಚ್ಚು ಉದ್ಯೋಗ ನಿರ್ಮಾಣ ಮಾಡುವ ನಮ್ಮ ಆಲೋಚನೆ ಸಹಕಾರಿ ಆಗುತ್ತದೆ ಎಂದರು.

    ಜಿಲ್ಲೆಯ ಪ್ರತಿನಿತ್ಯ ಬಳಕೆಯ ವಸ್ತುಗಳ ಉತ್ಪಾದಕರು ತಮ್ಮ ಮಾಹಿತಿಯನ್ನು ಮೊ.9591512348, 9164001790 ಕರೆ ಮಾಡಿ ತಿಳಿಸುವಂತೆ ಕೋರಿದರು.
    ಪದಾಧಿಕಾರಿಗಳಾದ ಸತ್ಯನಾರಾಯಣ, ತಿಮ್ಮರಾಜು, ಶ್ರೀವತ್ಸ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts