More

    ಆತಂಕ ಸೃಷ್ಟಿಸಿರುವ ಮಣ್ಣು ಕುಸಿತ

    ಹುಬ್ಬಳ್ಳಿ: ಸ್ಮಾರ್ಟ್ ಸಿಟಿ ಯೋಜನೆ ಹಾಗೂ ಖಾಸಗಿಯವರ ಸಹಭಾಗಿತ್ವದಲ್ಲಿ ನಗರದ ಹಳೇ ಕೋರ್ಟ್ ವೃತ್ತದ ಬಳಿ ನಿರ್ಮಾಣ ಹಂತದಲ್ಲಿರುವ ಮಲ್ಟಿ ಲೆವೆಲ್ ಕಾರ್ ರ್ಪಾಂಗ್ ಕಂ ಕಾಂಪ್ಲೆಕ್ಸ್ ಕಟ್ಟಡದ ಸ್ಥಳದಲ್ಲಿ ಗುರುವಾರ ರಾತ್ರಿ ಮಣ್ಣು ಕುಸಿತ ಉಂಟಾಗಿರುವುದು ಆತಂಕಕ್ಕೆ ಕಾರಣವಾಗಿದೆ.
    ಇಲ್ಲಿ ಕಾಮಗಾರಿ ನಿಮಿತ್ತ 40ರಿಂದ 50 ಅಡಿಯಷ್ಟು ಆಳಕ್ಕೆ ಮಣ್ಣು ತೆಗೆದು ಹೊರ ಹಾಕಲಾಗಿದೆ. ಸಾಯಿ ಮಂದಿರದ ಎದುರು ರಸ್ತೆಗೆ ಹೊಂದಿಕೊಂಡಿರುವ ಭಾಗದಲ್ಲಿ ಮಣ್ಣು ಕುಸಿತಕ್ಕೆ ಒಳಗಾಗಿದೆ. ಇಲ್ಲಿ ಆಗಾಗ ಮಣ್ಣು ಕುಸಿತವಾಗಿದೆ. ಗುರುವಾರ ಬೃಹತ್ ಪ್ರಮಾಣದಲ್ಲಿ ಮಣ್ಣು ಕುಸಿತದಿರುವುದರಿಂದ ಸ್ಥಳದಲ್ಲಿ ನಿತ್ಯವೂ ಕೆಲಸ ನಿರ್ವಹಿಸುವ ಕಾರ್ವಿುಕರು ಆತಂಕಕ್ಕೆ ಒಳಗಾಗಿದ್ದಾರೆ. ರಾತ್ರಿ ವೇಳೆ ಈ ಘಟನೆ ಸಂಭವಿಸಿದ್ದರಿಂದ ದೊಡ್ಡ ಅಪಾಯ ತಪ್ಪಿದೆ. ಮಣ್ಣು ಕುಸಿತದ ಅಪಾಯವನ್ನು ಅರಿತು ತಿಂಗಳ ಹಿಂದೆಯೇ ಸಾಯಿ ಮಂದಿರ ಎದುರಿನ ರಸ್ತೆಯಲ್ಲಿ ವಾಹನ ಸಂಚಾರ ಬಂದ್ ಮಾಡಲಾಗಿದೆ.
    ಇಲ್ಲಿ 50 ಕೋಟಿ ರೂ. ವೆಚ್ಚದಲ್ಲಿ 8 ಅಂತಸ್ತಿನ ಕಟ್ಟಡ (ನೆಲಮಹಡಿಯಲ್ಲಿ 3 ಹಾಗೂ ಮೇಲ್ಮಹಡಿಯಲ್ಲಿ 5) ನಿರ್ವಣವಾಗಲಿದೆ. ನೆಲಮಹಡಿಯ ಕೆಳ ಅಂತಸ್ತಿನ ಕಾಮಗಾರಿ ಪ್ರಗತಿಯಲ್ಲಿದೆ. ಗುತ್ತಿಗೆದಾರರಾದ ಹುಬ್ಬಳ್ಳಿಯ ಎಸ್​ಇಪಿಎಲ್ ಸಂಸ್ಥೆ 40 ಕೋಟಿ ರೂ. ಹಾಗೂ ಸ್ಮಾರ್ಟ್ ಸಿಟಿ ಯೋಜನೆಯ 10 ಕೋಟಿ ರೂ. ನೆರವಿನಡಿ ಪಾಲಿಕೆ ಜಾಗದಲ್ಲಿ ಈ ನಿರ್ಮಾಣ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ‘ಮಣ್ಣು ಕುಸಿತದಿಂದ ರಸ್ತೆ ಹಾಗೂ ಫುಟ್​ಪಾತ್​ಗೆ ಹಾನಿಯಾಗಿಲ್ಲ. ಫುಟ್​ಪಾತ್​ನ ಒಳ ಭಾಗದಲ್ಲಿಯೇ ಮಣ್ಣು ಕುಸಿತವಾಗಿದೆ. ಘಟನೆಯ ಬಳಿಕ ಗುತ್ತಿಗೆದಾರರನ್ನು ಕರೆಯಿಸಿ ಚರ್ಚೆ ನಡೆಸಿದ್ದೇವೆ. ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸುವಂತೆ ನಿರ್ದೇಶನ ನೀಡಲಾಗಿದೆ’ ಎಂದು ಹು-ಧಾ ಸ್ಮಾರ್ಟ್ ಸಿಟಿ ಲಿಮಿಟೆಡ್​ನ ಮುಖ್ಯ ಇಂಜಿನಿಯರ್ ಎಂ. ನಾರಾಯಣ ‘ವಿಜಯವಾಣಿ’ಗೆ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts