More

    ಆಟೋ ನಿಲ್ದಾಣದಿಂದ ಮಳಿಗೆ ಬ್ಲಾಕ್

    ವಿಜಯವಾಣಿ ಸುದ್ದಿಜಾಲ ಹಳಿಯಾಳ: ಪಟ್ಟಣದಲ್ಲಿನ ಬಸ್ ಸ್ಟಾ್ಯಂಡ್ ಆವರಣಕ್ಕೆ ತಾಗಿಯೇ ಪುರಸಭೆ ನಿರ್ವಿುಸಿರುವ ವಾಣಿಜ್ಯ ಮಳಿಗೆಯ ಬಾಡಿಗೆದಾರರ ಹಾಗೂ ಆಟೋ ಚಾಲಕರ ನಡುವೆ ಶೀತಲ ಸಮರ ಆರಂಭವಾಗಿದೆ.

    ತಮ್ಮ ಅಂಗಡಿಗಳನ್ನು ಆಟೋದವರು ಬ್ಲಾಕ್ ಮಾಡಿದ್ದಾರೆ ಎಂದು ಮಳಿಗೆಯ ಬಾಡಿಗೆದಾರರು ಆರೋಪಿಸುತ್ತಿದ್ದರೆ, ಆಟೋ ನಿಲ್ದಾಣ ಇರುವ ಸ್ಥಳದಲ್ಲಿ ಮಳಿಗೆ ನಿರ್ವಿುಸಿ ಪುರಸಭೆ ತಮ್ಮನ್ನು ಅತಂತ್ರವಾಗಿಸಿದೆ ಎಂಬುದು ಆಟೋದವರ ಹೇಳಿಕೆ.

    ನಾಲ್ಕು ವರ್ಷಗಳ ಹಿಂದೆ ಬಸ್ ಸ್ಟಾ್ಯಂಡ್ ರಸ್ತೆ ವಿಸ್ತರಣೆ ಮಾಡುವಾಗ ಬಸ್ ಡಿಪೋ ಆವರಣ ಬಳಿಯಿದ್ದ ಪುರಸಭೆಯ ಮಳಿಗೆಯನ್ನು ತೆರವುಗೊಳಿಸಲಾಗಿತ್ತು. ಆಗ ಪುರಸಭೆಯು ಹಾಗೂ ಇಲ್ಲಿನ ಜನಪ್ರತಿನಿಧಿಗಳು ಮಳಿಗೆಯಲ್ಲಿನ ಬಾಡಿಗೆದಾರರಿಗೆ ಬೇರೆಡೆ ಮಳಿಗೆಯನ್ನು ನಿರ್ವಿುಸುವುದಾಗಿ ಭರವಸೆ ನೀಡಿತ್ತು. ನೀಡಿದ ಮಾತಿನಂತೆ ಪುರಸಭೆಯವರು ಬಸ್ ಸ್ಟಾ್ಯಂಡಿನ ಆವರಣಕ್ಕೆ ತಾಗಿಕೊಂಡ ಜಾಗವನ್ನು ಸಾರಿಗೆ ಇಲಾಖೆಯಿಂದ ಖರೀದಿಸಿ 13 ಅಂಗಡಿಗಳಿರುವ ಮಳಿಗೆಯನ್ನು ನಿರ್ವಿುಸಿದರು. ಆದರೆ, ಈ ಮಳಿಗೆಯ ಮುಂದೆ ಈ ಹಿಂದಿನಿಂದಲೂ ಆಟೋ ನಿಲ್ದಾಣ ಇದ್ದಿದ್ದರಿಂದ ಅಲ್ಲಿಯೇ ಪಾರ್ಕ್ ಮಾಡಲಾರಂಭಿಸಿದ್ದರು. ಆಗ ಬಾಡಿಗೆದಾರರು, ವ್ಯಾಪಾರ ನಡೆಸುವುದು ದುಸ್ಥರವಾಗಿದ್ದು, ವ್ಯಾಪಾರ ವಹಿವಾಟು ನಡೆಸಲು ಅನುಕೂಲ ಮಾಡಿ ಕೊಡಿ ಎಂದು ಪುರಸಭೆಯ ಮೊರೆ ಹೋಗಿದ್ದಾರೆ.

    ಸಮಸ್ಯೆ ಇತ್ಯರ್ಥಗೊಳಿಸಲು ಬುಧವಾರ ಪುರಸಭೆಯ ಅಧಿಕಾರಿಗಳ ತಂಡದೊಂದಿಗೆ ಅಧ್ಯಕ್ಷ ಅಜರ್ ಬಸರಿಕಟ್ಟಿ ಸ್ಥಳಕ್ಕೆ ಭೇಟಿ ನೀಡಿದರು. ಈ ವೇಳೆ ಆಟೋ ಯೂನಿಯನ್ ಅಧ್ಯಕ್ಷ ಅಬ್ದುಲ್ ಸತ್ತಾರ ಶೇಖ್ ಮಾತನಾಡಿ, ನಲವತ್ತು ವರ್ಷಗಳಿಂದ ಬಸ್ ಸ್ಟಾ್ಯಂಡ್ ಆವರಣದ ಹೊರಗೆ ನಿಲ್ದಾಣ ಇದೆ. ಹೀಗಿರುವಾಗ ಈ ಸ್ಥಳದಲ್ಲಿ ವಾಣಿಜ್ಯ ಮಳಿಗೆ ನಿರ್ವಿುಸುವ ಮುನ್ನ ಅಟೋ ರಿಕ್ಷಾ ಚಾಲಕರ ವಾಹನ ನಿಲುಗಡೆಗೆ ಪರ್ಯಾಯ ವ್ಯವಸ್ಥೆ ಮಾಡಲು ಮೊದಲೇ ಯೋಜಿಸಬೇಕಿತ್ತು ಎಂದರು.

    ಹೊಸ ಬಸ್ ಸ್ಟಾ್ಯಂಡ್ ನಿರ್ಮಾಣ ಕಾರ್ಯ ಅಂತಿಮ ಹಂತದಲ್ಲಿದ್ದು, ಅಲ್ಲಿಯವರೆಗೆ ತಮ್ಮನ್ನು ಬೇರೆಡೆ ಸ್ಥಳಾಂತರಿಸಬಾರದೆಂದು, ಲಾಕ್​ಡೌನ್​ದಿಂದ ಸಂಕಷ್ಟಕ್ಕೊಳಗಾಗಿರುವ ಆಟೋ ಚಾಲಕರಿಗೆ ನೆರವು ನೀಡಿ ಎಂದು ಮನವಿ ಮಾಡಿದರು. ಅಹವಾಲು ಆಲಿಸಿದ ಅಧ್ಯಕ್ಷರು, ಸಮಸ್ಯೆಯನ್ನು ಇತ್ಯರ್ಥಗೊಳಿಸುವ ಭರವಸೆ ನೀಡಿ, ಈ ಕುರಿತು ಡಿ.4 ರಂದು ನಡೆಯುವ ಸಾಮಾನ್ಯ ಸಭೆಯಲ್ಲಿ ರ್ಚಚಿಸುವುದಾಗಿ ತಿಳಿಸಿದರು.

    ಬಾಡಿಗೆ ಪಡೆದು ಬೇರೆಯವರಿಗೆ ಹಸ್ತಾಂತರ: ಪುರಸಭೆಯ ವಾಣಿಜ್ಯ ಮಳಿಗೆಯ 13 ಅಂಗಡಿಗಳಲ್ಲಿ 10 ಅಂಗಡಿಯನ್ನು ಬಾಡಿಗೆ ಪಡೆದ ವ್ಯಕ್ತಿಗಳು ಮತ್ತೊಬ್ಬರಿಗೆ ನೀಡಿದ್ದಾರೆ. ಒಂದು ಅಂಗಡಿಗೆ 1, 800 ರೂ. ಗಳಿಂದ 2,000 ಸಾವಿರ ರೂ. ವರೆಗೆ ಮಾಸಿಕ ಬಾಡಿಗೆಗೆ ನೀಡಿದೆ. ಇದನ್ನು 8 ಸಾವಿರದಿಂದ 10 ಸಾವಿರ ರೂ. ಗೆ ಬೇರೆಯವರಿಗೆ ನೀಡಿದ್ದಾರೆ. ಕೋವಿಡ್ ಕಾರಣ ಹೇಳಿ 8 ತಿಂಗಳಿಂದ ಪುರಸಭೆಗೆ ಬಾಡಿಗೆಯನ್ನು ಭರಿಸದೆ ಬಾಡಿಗೆದಾರರು, ಲಾಕ್ ಡೌನ್​ನಿಂದ ವಹಿವಾಟು ಇಲ್ಲದಿರುವುದರಿಂದ ಬಾಡಿಗೆ ಮನ್ನಾ ಮಾಡಬೇಕೆಂದು ಪುರಸಭೆ ಹಾಗೂ ಶಾಸಕ ಆರ್.ವಿ.ದೇಶಪಾಂಡೆ ಅವರಿಗೆ ಮನವಿಯನ್ನು ನೀಡಿದ್ದರು. ಈ ಹಿನ್ನೆಲೆಯಲ್ಲಿ ಪುರಸಭಾ ಅಧ್ಯಕ್ಷ ಅಜರ್ ಬಸರಿಕಟ್ಟಿ ಮನವಿ ಪರಿಶೀಲನೆ ನಡೆಸಿದಾಗ ಬಾಡಿಗೆದಾರರು ಮಾಡುತ್ತಿರುವ ಈ ವ್ಯವಹಾರ ಬೆಳಕಿಗೆ ಬಂದಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಅವರು, ಕೆಲವರು ಹೆಚ್ಚಿನ ಬಾಡಿಗೆಗೆ ಈ ಅಂಗಡಿಗಳನ್ನು ಬೇರೆಯವರಿಗೆ ಎರವಲು ನೀಡಿರುವುದು ಕಂಡು ಬಂದಿದೆ. ಈ ಪ್ರಕರಣವನ್ನು ನಾವು ಗಂಭೀರವಾಗಿ ಪರಿಗಣಿಸಿದ್ದೇವೆ ಎಂದು ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts