More

    ಆಟೋಮೊಬೈಲ್ ತಂತ್ರಜ್ಞಾನದ ಅರಿವು ಮೂಡಿಸಲು 10 ಕಾಲೇಜ್​ಗಳ ಆಯ್ಕೆ

    ಹಳಿಯಾಳ: ವೊಲ್ವೋ ಕಂಪನಿಯು ಆಟೋ ಮೊಬೈಲ್ ತಂತ್ರಜ್ಞಾನದ ಕುರಿತು ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಲು 10 ಮಹಾವಿದ್ಯಾಲಯಗಳನ್ನು ಆಯ್ದುಕೊಂಡಿದೆ ಎಂದು ವೊಲ್ವೋ ಗ್ರುಪ್ ಇಂಡಿಯಾ ಪ್ರೈ. ಲಿಮಿಟಿಡ್​ನ ನಿರ್ದೇಶಕ ಜಿ.ವಿ. ರಾವ್ ಹೇಳಿದರು.

    ಗುರುವಾರ ಪಟ್ಟಣದ ಕರ್ನಾಟಕ ಲಾ ಸೊಸೈಟಿಯ ವಿಶ್ವನಾಥರಾವ್ ದೇಶಪಾಂಡೆ ತಾಂತ್ರಿಕ ಮಹಾವಿದ್ಯಾಲಯಕ್ಕೆ ಭೇಟಿ ನೀಡಿ ವೊಲ್ವೋ ಕಂಪನಿಯು ಮಹಾ ವಿದ್ಯಾಲಯಕ್ಕೆ ದೇಣಿಗೆಯಾಗಿ ನೀಡಿದ ಟ್ರಕ್ ಇಂಜಿನ್​ಅನ್ನು ಅನಾವರಣಗೊಳಿಸಿ ಮೆಕಾನಿಕಲ್ ಇಂಜಿನಿಯರಿಂಗ್ ವಿಭಾಗದ ಪ್ರಾಧ್ಯಾಪಕರ ಜತೆ ಸಂವಾದ ನಡೆಸಿದರು.

    ವೊಲ್ವೋ ಸಂಸ್ಥೆಯ ಆಡಳಿತಾಧಿಕಾರಿ ಮುರುಳಿಕೃಷ್ಣ ಅವರು ಮಾತನಾಡಿ ಆಟೋಮೊಬೈಲ್ ಕ್ಷೇತ್ರದಲ್ಲಿ ಇರುವ ಉದ್ಯೋಗಾವಕಾಶಗಳ ಕುರಿತು ವಿವರಿಸಿದರು. ಪ್ರಾಂಶುಪಾಲ ಡಾ. ವಿ.ಎ.ಕುಲಕರ್ಣಿ, ಆಡಳಿತ ಮುಖ್ಯಸ್ಥ ಪೊ›.ಮಂಜುನಾಥ ಡಿ, ಶಿಕ್ಷಣ ಸಂಯೋಜಕ ಡಾ. ಆರ್​ಎಸ್ ಮುನ್ನೊಳ್ಳಿ, ಮೆಕಾನಿಕಲ್ ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ಡಾ. ಕೆ. ಎಸ್. ಪೂಜಾರ, ವಿ.ಆರ್.ಡಿ ಟ್ರಸ್ಟ್ ಆಡಳಿತಾಧಿಕಾರಿ ಪ್ರಕಾಶ ಪ್ರಭು ಉಪಸ್ಥಿತರಿದ್ದರು.

    ಪೊ›. ರಶ್ಮಿ ಮೇಲಿನಮನಿ ಹಾಗೂ ಪೊ›.ಆರ್​ಎನ್ ಪಾಟೀಲ್ ಕಾರ್ಯಕ್ರಮ ನಿರ್ವಹಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts