More

    ಆಂಧ್ರ ಸಾಹುಕಾರನಿಗೆ ಕರ್ನಾಟಕದ ವಂಶವೃಕ್ಷ

    ಬೇತಮಂಗಲ: ಆಂಧ್ರ-ಕರ್ನಾಟಕ ಗಡಿ ಭಾಗವಾಗಿರುವ ಕೆಜಿಎ್ ತಾಲೂಕಿನಲ್ಲಿ ಅಂಧ್ರ ಪ್ರದೇಶದ ನಿವಾಸಿಗಳಿಗೆ ಕರ್ನಾಟಕದಲ್ಲಿ ಹಲವು ರೀತಿಯ ಸೌಲಭ್ಯಗಳು ಲಭಿಸುತ್ತಿದ್ದು, ಇದಕ್ಕೆ ರಾಜ್ಯ ಸರ್ಕಾರದ ಹಲವು ಇಲಾಖೆ ಅಧಿಕಾರಿಗಳು ಸಾಥ್ ನೀಡಿದ್ದಾರೆ.

    ಕೆಜಿಎ್ ತಾಲೂಕಿನ ಕ್ಯಾಸಂಬಳ್ಳಿಯ ಕಂದಾಯ ಇಲಾಖೆ ಅಧಿಕಾರಿಯೊಬ್ಬರು ಚಿತ್ತೂರು ಜಿಲ್ಲೆ ಕುಪ್ಪಂ ತಾಲೂಕಿನ ಬಿ ಕೊತ್ತಕೋಟಾ ಗ್ರಾಮದ ಅಶೋಕರೆಡ್ಡಿ ಬಿನ್ನಿ ಮುನಿರೆಡ್ಡಿ ಎಂಬಾತನಿಗೆ ಕ್ಯಾಸಂಬಳ್ಳಿ ಹೋಬಳಿಯ ನೀಲಾಗಿರಿಪಳ್ಳಿಯಲ್ಲಿ ವಾಸವಾಗಿರುವಂತೆ ಕ್ಯಾಸಂಬಳ್ಳಿ ಹೋಬಳಿ ಕಂದಾಯ ರಾಜಸ್ವ ನಿರೀಕ್ಷಕ ನಾರಾಯಣಸ್ವಾಮಿ, ವಂಶವೃಕ್ಷಪತ್ರ ನೀಡಿದ್ದಾರೆ. ಈ ಬಗ್ಗೆ ಗ್ರಾಮಸ್ಥರು ತಿಂಗಳ ಹಿಂದೆ ಕೆಜಿಎ್ ಚಲೋ ಕಾಲ್ನಡಿಗೆ ಜಾಥಾ ನಡೆಸಿ, ಅಶೋಕರೆಡ್ಡಿ ಆಂಧ್ರ ಪ್ರದೇಶದವರು ಎಂದು ಖಚಿತಪಡಿಸಲು ಆತ ಆಂಧ್ರದಲ್ಲಿ ಪಡೆದಿದ್ದ ಆಧಾರ್‌ಕಾರ್ಡ್, ಪಡಿತರ ಚೀಟಿ, ಮತದಾರರ ಚೀಟಿ, ಅವರ ತಂದೆಯ ಮರಣ ಪ್ರಮಾಣ ಪತ್ರ ಹಾಗೂ ಸರ್ಕಾರದಿಂದ ಪಡೆದಿರುವ ಸವಲತ್ತುಗಳ ದಾಖಲೆಗಳನ್ನು ತಹಸೀಲ್ದಾರ್‌ಗೆ ನೀಡಿದ್ದರೂ ಕ್ರಮ ಕೈಗೊಳ್ಳದಿರುವುದು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ.

    ನೂರಾರು ಎಕರೆ ಕಬಳಿಕೆ: ಕೆಜಿಎ್ ತಾಲೂಕಿನ ನೀಲಾಗಿರಿಹಳ್ಳಿಯ ಸರ್ವೇ ನಂ.45ರಲ್ಲಿ 41.28 ಎಕರೆ, ಅದೇ ಗ್ರಾಮದ ಆಂಜನೇಯ ದೇವಾಲಯದ ಸರ್ವೇ ನಂ.36ರಲ್ಲಿ 4.10 ಎಕರೆ, ಪೀಲವರದಲ್ಲಿ ಆತನ ತಾಯಿ ಪಾಪಮ್ಮ ಹೆಸರಿನ ಸರ್ವೇ ನಂ. 98ರಲ್ಲಿ 4.20 ಎಕರೆ ಸೇರಿ ನೂರಾರು ಎಕರೆ ಕರ್ನಾಟಕದ ಸರ್ಕಾರಿ ಭೂಮಿಯನ್ನು ಅಧಿಕಾರಿಗಳಿಗೆ ಆಮಿಷ ಒಡ್ಡಿ ನಕಲಿ ದಾಖಲೆ ಸೃಷ್ಟಿಸಿ ಆಕ್ರಮಿಸಿಕೊಂಡಿದ್ದಾರೆೆ ಎಂದು ದಾಖಲೆಗಳ ಸಮೇತ ತಹಸೀಲ್ದಾರ್‌ಗೆ ಗ್ರಾಮಸ್ಥರು ನೀಡಿದ್ದಾರೆ.

    ದೂರು ಸ್ವೀಕರಿಸಿದ ತಹಸೀಲ್ದಾರ್ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವುದಾಗಿ, ಅಶೋಕರೆಡ್ಡಿಯ ಅಕ್ರಮ ಆಸ್ತಿ ಮುಟ್ಟುಗೊಲು ಹಾಕಿಕೊಂಡು ಬಡವರಿಗೆ ಸೂರು ಕಲ್ಪಿಸುವುದಾಗಿ ಭರವಸೆ ನೀಡಿದ್ದರು. ಆದರೆ ಕ್ಯಾಸಂಬಳ್ಳಿ ಹೋಬಳಿ ಕಂದಾಯ ರಾಜಸ್ವ ನಿರೀಕ್ಷಕ ನಾರಾಯಣಸ್ವಾಮಿ ವಂಶವೃಕ್ಷ ನೀಡುವ ಮೂಲಕ ಅಶೋಕರೆಡ್ಡಿಗೆ ಕರ್ನಾಟಕದಲ್ಲಿ ರತ್ನಗಂಬಳಿ ಹಾಸಿದ್ದಾರೆ.

    ಕ್ರಿಮಿನಲ್ ಕೇಸ್ ದಾಖಲಿಸಿ: ರಾಜಸ್ವ ನಿರೀಕ್ಷಕ ನಾರಾಯಣಸ್ವಾಮಿ ಆಂಧ್ರ ಮೂಲದ ಮತ್ತು ಭೂ ಕಬಳಿಕೆದಾರರಿಗೆ ಕುಮ್ಮಕ್ಕು ನೀಡುತ್ತಿದ್ದು, ಕ್ಯಾಸಂಬಳ್ಳಿ ಹೋಬಳಿಯಲ್ಲಿ ಸರ್ಕಾciರಿ ಭೂಮಿ ಕಬಳಿಕೆದಾರರಿಗೆ ಆಶ್ರಯ ನೀಡುತ್ತಿದ್ದಾರೆ. ಅಕ್ರಮವಾಗಿ ದಾಖಲೆ ಸೃಷ್ಟಿಸಿ ಕೊಟ್ಟಿರುವ ನಾರಾಯಣಸ್ವಾಮಿ ವಿರುದ್ಧ ಕ್ರಮ ಕೈಗೊಳ್ಳಬೇಕು ಹಾಗೂ ಅಶೋಕರೆಡ್ಡಿ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಬೇಕೆಂದು ಅಂಬೇಡ್ಕರ್ ಸೇವಾ ಸಮಿತಿ ಕೆಜಿಎ್ ತಾಲೂಕು ಅಧ್ಯಕ್ಷ ಕರ್ಣಕುಮಾರ್ ಮತ್ತು ನೀಲಗಿರಿಹಳ್ಳಿ ಗ್ರಾಮಸ್ಥರು ಒತ್ತಾಯಿಸಿದ್ದಾರೆ.

    ಅಶೋಕರೆಡ್ಡಿ ಎರಡೂ ರಾಜ್ಯಗಳಲ್ಲಿ ಸವಲತ್ತು ಪಡೆಯಲು ದಾಖಲೆಗಳನ್ನು ಪಡೆದಿರುವ ಬಗ್ಗೆ ಮಾಹಿತಿ ಕಲೆ ಹಾಕಿದ್ದೇವೆ. ಆಂಧ್ರದಲ್ಲಿ 80 ವರ್ಷಗಳಿಂದ ವಾಸಿಸುತ್ತಿರುವ ದಾಖಲೆ ಪಡೆಯಲಾಗಿದೆ. ಅದೇ ರೀತಿ ನೀಲಗಿರಿಹಳ್ಳಿಯಲ್ಲಿ ವಾಸವಿಲ್ಲ ಎಂದು ಗ್ರಾಪಂ ಮತ್ತು ಅಂಗನವಾಡಿ ಕಾರ್ಯಕರ್ತೆಯರು ಲಿಖಿತ ಪತ್ರ ನೀಡಿದ್ದಾರೆ. ಎಲ್ಲ ವಿಷಯ ಮತ್ತು ದಾಖಲೆ ತಹಸೀಲ್ದಾರ್‌ಗೆ ವರದಿ ನೀಡಿದ್ದು, ಕ್ರಮ ಕೈಗೊಳ್ಳಲಿದ್ದಾರೆ.
    ಕೆ.ಸಿ.ಸುರೇಶ್, ಉಪತಹಸೀಲ್ದಾರ್ ಕ್ಯಾಸಂಬಳ್ಳಿ ಹೋಬಳಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts