More

    ಅಸಹಾಯಕರಿಗೆ ಬೆಳಕಾದ ಅನ್ನದಾನ ಶ್ರೀ

    ಗಜೇಂದ್ರಗಡ: ಉತ್ತರ ಕರ್ನಾಟಕದಲ್ಲಿ ಶಿಕ್ಷಣ, ದಾಸೋಹ, ಸಂಸ್ಕೃತಿ ಮತ್ತು ಪರಂಪರೆ ಜತೆಗೆ ಅಸಹಾಯಕರ ಬಾಳಿನ ಬೆಳಕಾಗಿ ಕಾರ್ಯ ನಿರ್ವಹಿಸುತ್ತಿರುವ ಡಾ. ಅಭಿನವ ಅನ್ನದಾನ ಸ್ವಾಮಿಗಳ ಕೊಡುಗೆ ಅಪಾರವಾದದ್ದು ಎಂದು ನಿಡಗುಂದಿಕೊಪ್ಪ ಶಾಖಾ ಶಿವಯೋಗ ಮಂದಿರದ ನಿಯೋಜಿತ ಉತ್ತರಾಧಿಕಾರಿ ಸಿದ್ಧರಾಮ ದೇವರು ಹೇಳಿದರು.

    ಪಟ್ಟಣದ ಅನ್ನದಾನೇಶ್ವರ ಕಾಲೇಜಿನಲ್ಲಿ ಅನ್ನದಾನ ವಿಜಯ ವಿದ್ಯಾ ಪ್ರಸಾರಕ ಸಮಿತಿ ಹಾಗೂ ಅನ್ನದಾನೇಶ್ವರ ಯುವಕ ಮಂಡಳ ಆಶ್ರಯದಲ್ಲಿ ಡಾ. ಅಭಿನವ ಅನ್ನದಾನ ಸ್ವಾಮೀಜಿಯವರ 84ನೇ ಜನ್ಮ ದಿನದ ಪ್ರಯುಕ್ತ ಶನಿವಾರ ಹಮ್ಮಿಕೊಳ್ಳಲಾಗಿದ್ದ ಕರೊನಾ ಸೇನಾನಿಗಳಿಗೆ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಅವರು ಆಶೀರ್ವಚನ ನೀಡಿದರು.

    ನಿವೃತ್ತ ಕೆಇಬಿ ಅಧಿಕಾರಿ ಟಿ.ಎಸ್. ರಾಜೂರ ಮಾತನಾಡಿ, ಶಿಕ್ಷಣ ಕ್ಷೇತ್ರ ತೆರೆಯುವ ಮೂಲಕ ಅಸಂಖ್ಯಾತ ಮಕ್ಕಳ ಅಕ್ಷರ ನಿಧಿಯಾಗಿರುವ ಶ್ರೀಗಳು, ಸದಾ ರೈತಪರ ವಿಚಾರಧಾರೆ ಹೊಂದಿ ಸಾವಯವ ಕೃಷಿಗೆ ಉತ್ತೇಜನ ನೀಡಿ, ಮಣ್ಣಿನ ಸಂರಕ್ಷಣೆ ಕುರಿತು ಕಾರ್ಯಕ್ರಮ ಹಮ್ಮಿಕೊಂಡು ರೈತರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ ಎಂದರು.

    ಪ್ರಾಚಾರ್ಯ ವಸಂತ ಗಾರಗಿ ಮಾತನಾಡಿದರು. ಈ ವೇಳೆ ಕರೊನಾ ಸೇನಾನಿಗಳಾದ ಡಾ. ಚಿದಾನಂದ ಮುಂಡಾಸದ, ರಾಘವೇಂದ್ರ ಮಂತಾ, ಎಸ್.ಎಂ. ಇಂಗಳಗಿ, ಎಸ್.ಎಂ. ಸೈಯದ್ ಹಾಗೂ ಅಂಜನಾ ಅವರನ್ನು ಸನ್ಮಾನಿಸಲಾಯಿತು. ಸುಹಾಸಕುಮಾರ ಪಟ್ಟೇದ, ಶರಣಪ್ಪ ರೇವಡಿ, ವೀರಯ್ಯ ವಸ್ತ್ರದ, ಶಿವಯ್ಯ ಚಕ್ಕಡಿಮಠ, ಪ್ರಭು ಚವಡಿ, ಪ್ರಾಚಾರ್ಯರಾದ ಎ.ಪಿ. ಗಾಣಗೇರ, ಬಸಯ್ಯ ಹಿರೇಮಠ, ಎಸ್.ಎಂ. ಕಾಡದ, ಉಪನ್ಯಾಸಕರಾದ ಸಂಗಮೇಶ ಬಾಗೂರು, ರಾಘವೇಂದ್ರ ಹೊಳಗಿ, ಗೋಪಾಲ ರಾಯಬಾಗಿ, ಚಂದ್ರು ರಾಠೋಡ, ಮಲ್ಲಿಕಾರ್ಜುನ ಇಂಡಿ, ಬಾಳು ಕುಂಬಾರ, ಬಾಳಪ್ಪ ಸೂಡಿ, ಸುಧಾ ಪೂಜಾರ, ಕವಿತಾ ಕವಲೂರ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts