More

    ಅಶ್ಲೀಲ ಮೆಸೇಜ್ ಕಳಿಸಿದ ಶಿಕ್ಷಕನಿಗೆ ಧರ್ಮದೇಟು

    ಚನ್ನಮ್ಮನ ಕಿತ್ತೂರು: ಸರ್ಕಾರಿ ಆರೋಗ್ಯ ಕೇಂದ್ರದ ಸಹಾಯಕಿ ಯೊಬ್ಬಳಿಗೆ ಅಶ್ಲೀಲ ಸಂದೇಶ ಹಾಗೂ ಸಂಭಾಷಣೆಯ ತುಣುಕು ರವಾನಿಸುತ್ತಿದ್ದ ದೇವಗಾಂವ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಸಿ.ಚೌಲಗಿ ಎಂಬಾತನಿಗೆ ರೊಚ್ಚಿಗೆದ್ದ ಮಹಿಳೆ ಹಾಗೂ ಆಕೆಯ ಪತಿ, ಸ್ಥಳೀಯರು ಬುಧವಾರ ಶಾಲೆಗೆ ನುಗ್ಗಿ ಥಳಿಸಿದ್ದಾರೆ.

    ಕರೊನಾ ವ್ಯಾಕ್ಸಿನ್ ಹಾಕಿಸಿಕೊಳ್ಳಲು ಹೋದ ಮುಖ್ಯ ಶಿಕ್ಷಕ ಆರೋಗ್ಯ ಸಹಾಯಕಿಯನ್ನು ಪರಿಚಯಿಸಿಕೊಂಡಿದ್ದ. ನಂತರ ‘ಎಲ್ಲ ಶಿಕ್ಷಕರಿಗೆ ವ್ಯಾಕ್ಸಿನ್ ಹಾಕಬೇಕು. ಹಾಗಾಗಿ, ಫೋನ್ ಮಾಡುತ್ತೇನೆ’ ಎಂದು ಹೇಳಿ ಸಹಾಯಕಿಯ ಮೊಬೈಲ್ ನಂಬರ್ ಪಡೆದುಕೊಂಡಿದ್ದ. ಬಳಿಕ ನಿತ್ಯ ಮೆಸೇಜ್ ಮಾಡಲು ಆರಂಭಿಸಿದ್ದ. ಮಹಿಳೆ ಬುದ್ಧಿಮಾತು ಹೇಳಿದರೂ ಕೇಳದೆ ಅಶ್ಲೀಲ ಸಂಭಾಷಣೆಯಲ್ಲಿ ತೊಡಗಿದ್ದ.

    ರೊಚ್ಚಿಗೆದ್ದ ಮಹಿಳೆ ದೇವಗಾಂವ ಗ್ರಾಮಸ್ಥರ ಮುಂದೆ ವಿಷಯ ತಿಳಿಸಿದ್ದಳು. ಗ್ರಾಮಸ್ಥರೆಲ್ಲ ಸೇರಿ ಮುಖ್ಯಾಧ್ಯಾಪಕನನ್ನು ಥಳಿಸಿ ಕೊಠಡಿಯಲ್ಲಿ ಕೂಡಿಹಾಕಿ, ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ಟಿ. ಬಳಿಗಾರ ಅವರನ್ನು ಸ್ಥಳಕ್ಕೆ ಕರೆಯಿಸಿದ್ದಾರೆ.

    ಶಿಕ್ಷಕನನ್ನು ಸಸ್ಪೆಂಡ್ ಮಾಡಬೇಕು ಎಂದು ಗ್ರಾಮದ ಮುಖ್ಯಸ್ಥರು ಹಠ ಹಿಡಿದರು. ಎಸ್‌ಡಿಎಂಸಿ ಮಹಿಳಾ ಸದಸ್ಯರು, ನಮ್ಮ ಜತೆಗೂ ಮುಖ್ಯಾಧ್ಯಾಪಕ ಏಕವಚನದಲ್ಲಿ ಅಸಭ್ಯವಾಗಿ ಮಾತನಾಡುತ್ತಾರೆ. ಕರೆ ಮಾಡಿ ಸತಾಯಿಸುತ್ತಾರೆ. ಅವರ ವರ್ತನೆ ಸರಿ ಇಲ್ಲ. ಕೂಡಲೇ ಇಲ್ಲಿಂದ ವರ್ಗಾಯಿಸಿ ಎಂದು ಬಿಇಒಗೆ ಮನವಿ ಸಲ್ಲಿಸಿದರು. ಮೇಲಧಿಕಾರಿಗಳ ಗಮನಕ್ಕೆ ತಂದು ಕ್ರಮ ಕೈಕೊಳ್ಳುವುದಾಗಿ ಬಿಇಒಬಳಿಗಾರ ಭರವಸೆ ನೀಡಿದ ಬಳಿಕ ಮುಖ್ಯ ಶಿಕ್ಷಕನನ್ನು ಕೊಠಡಿಯಿಂದ ಹೊರಗೆ ಕಳಿಸಲಾಯಿತು.

    Array

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts