More

    ಅವಧಿ ಮುಗಿದ ಪಾಮ್ ಎಣ್ಣೆ ವಿತರಣೆ

    ಕಾರವಾರ: ತಾಲೂಕಿನ ವಿವಿಧ ಭಾಗಗಳ ನೆರೆ ಸಂತ್ರಸ್ತರಿಗೆ ಶಾಸಕಿ ರೂಪಾಲಿ ನಾಯ್ಕ ತಮ್ಮ ಖರ್ಚಿನಿಂದ ವಿತರಿಸಿರುವ ಪರಿಹಾರ ಈಗ ವಿವಾದಕ್ಕೆ ಕಾರಣವಾಗಿದೆ.

    ಅವಧಿ ಮುಗಿದ ಪಾಮ್ ಎಣ್ಣೆಯ ಪ್ಯಾಕೆಟ್​ನ್ನು ಶಾಸಕಿ ವಿತರಿಸಿದ್ದಾರೆ ಎಂದು ಸಂತ್ರಸ್ತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ನಡುವೆ ಕಾಂಗ್ರೆಸ್ ಇದನ್ನು ಕಟುವಾಗಿ ಟೀಕಿಸಿದೆ.

    ಆಗಿದ್ದೇನು..?: ನೆರೆಯಿಂದ ಹಾನಿಯಾದ ಕಾರವಾರ ಅಂಕೋಲಾ ಭಾಗದ ಸಂತ್ರಸ್ತರ ಪ್ರದೇಶಗಳಿಗೆ ಕಳೆದ ಮೂರ್ನಾಲ್ಕು ತಿಂಗಳಿಂದ ತಮ್ಮ ಕಾರ್ಯಕರ್ತರ ಜತೆ ಶಾಸಕಿ ರೂಪಾಲಿ ನಾಯ್ಕ ತೆರಳುತ್ತಿದ್ದಾರೆ. ಅವರಿಗೆ ಅಕ್ಕಿ,ಬೇಳೆ, ಟವೆಲ್, ಎಣ್ಣೆ ಪ್ಯಾಕೆಟ್ ಮುಂತಾದ ಸಾಮಗ್ರಿಗಳುಳ್ಳ ಕಿಟ್ ವಿತರಿಸುತ್ತಿದ್ದಾರೆ. ಶುಕ್ರವಾರ ಮಲ್ಲಾಪುರ, ಕದ್ರಾ, ಕೆರವಡಿ, ದೇವಳಮಕ್ಕಿ ಗ್ರಾಪಂಗಳ ವ್ಯಾಪ್ತಿಯ ಹಲವು ಗ್ರಾಮಗಳ 30 ಕ್ಕೂ ಹೆಚ್ಚು ನೆರೆ ಸಂತ್ರಸ್ತರಿಗೆ ಇಂಥ ಕಿಟ್​ಗಳನ್ನು ವಿತರಿಸಿದ್ದರು. ಅದರಲ್ಲಿ ಸಾಮ್ರಾಟ್ ಹೆಸರಿನ 1 ಲೀಟರ್​ನ ಪಾಮ್ ಎಣ್ಣೆ ಪ್ಯಾಕೆಟ್ ಕೂಡ ಸೇರಿದೆ. ಜುಲೈ 2019 ರಲ್ಲಿ ಸೀಲ್ ಮಾಡಲಾದ ಆ ಪ್ಯಾಕೆಟ್​ನ ಮೇಲೆ 6 ತಿಂಗಳ ಒಳಗೆ ಬಳಸಲು ಯೋಗ್ಯ ಎಂದು ಬರೆದಿದೆ. ಇದನ್ನು ನೋಡಿದ ಸಂತ್ರಸ್ತರು ಬೇಸರಗೊಂಡಿದ್ದಾರೆ.

    ಶಾಸಕಿ ರೂಪಾಲಿ ನಾಯ್ಕ ಬಡ ಜನರ ಜೀವದ ಜತೆ ಆಟವಾಡುತ್ತಿದ್ದಾರೆ. ಬಳಕೆಯ ಅವಧಿ ಮುಗಿದ ಪಾಮ್ ಎಣ್ಣೆಯ ಪ್ಯಾಕೆಟ್​ಗಳನ್ನು ನೀಡಿ ಫೋಟೋ ಹೊಡೆಸಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟು ಪ್ರಚಾರ ಪಡೆಯುತ್ತಿದ್ದಾರೆ. ಇದು ಖಂಡನೀಯ. – ಸಮೀರ ನಾಯ್ಕ, ಕಾರವಾರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts