More

    ಅಳ್ನಾವರದಲ್ಲಿ ಪರಸ್ಪರ ಅಂತರ ಮಾಯ

    ಅಳ್ನಾವರ: ಕರೊನಾ ಸೋಂಕು ಹರಡುವಿಕೆ ತಡೆಯಲು ಪಟ್ಟಣದಲ್ಲಿ ನಡೆಯುತ್ತಿದ್ದ ಮಂಗಳವಾರ ಸಂತೆಯನ್ನು ಪಪಂನವರು ಮೂರು ತಿಂಗಳ ಹಿಂದೆ ಎಪಿಎಂಸಿ ಆವರಣಕ್ಕೆ ಸ್ಥಳಾಂತರಿಸಿದರು. ಆದರೆ, ಪ್ರತಿ ವಾರ ಸಂತೆಯಲ್ಲಿ ಜನದಟ್ಟಣೆ ಹೆಚ್ಚುತ್ತಲೇ ಇದೆ. ತರಕಾರಿ ಮತ್ತಿತರ ಅಂಗಡಿಗಳಲ್ಲಿ ಗ್ರಾಹಕರು-ವ್ಯಾಪಾರಸ್ಥರ ಮಧ್ಯೆ ಪರಸ್ಪರ ಅಂತರ ಮಾಯವಾಗಿದೆ.

    ಎಪಿಎಂಸಿ ಆವರಣದಲ್ಲಿ ನಡೆಯುವ ಮಂಗಳವಾರ ಸಂತೆ ಪ್ರದೇಶದಲ್ಲಿ ಎರಡೇ ರಸ್ತೆಗಳಿದ್ದು, ಜಾಗ ಇಕ್ಕಟ್ಟಾಗಿದೆ. ಹೀಗಾಗಿ ಅಕ್ಕ-ಪಕ್ಕದ ಅಂಗಡಿಗಳು ಕಾಯಿಪಲ್ಲೆ, ದಿನಸಿ ವಸ್ತುಗಳ ಖರೀದಿಗೆ ಆಗಮಿಸುವ ಜನರಿಂದ ಗಿಜುಗುಡುತ್ತಿವೆ. ಸಂತೆಗೆ ಬರುವ ಬಹುತೇಕ ಜನರು ಮಾಸ್ಕ್ ಧರಿಸಿರುವುದಿಲ್ಲ. ಪರಸ್ಪರ ಅಂತರ ಕಾಯ್ದುಕೊಳ್ಳುತ್ತಿಲ್ಲ.

    ಎಪಿಎಂಸಿಗೆ ಮಂಗಳವಾರ ಸಂತೆ ಸ್ಥಳಾಂತರಗೊಂಡಿರುವುದು ಪಟ್ಟಣದ ಜನರಿಗೆ ದೂರವಾಗಿದೆ. ಇದರಿಂದಾಗಿ ಜನರು ಮಾರುಕಟ್ಟೆಗೆ ಬರುವುದು ಕಡಿಮೆಯಾಗಿದೆ. ವ್ಯಾಪಾರ ಕುಂಠಿತವಾಗಿದೆ. ಇಲ್ಲಿ ಸೊಳ್ಳೆಗಳು, ಕ್ರಿಮಿಕೀಟಗಳ ಕಾಟ ಹೆಚ್ಚಾಗಿದೆ. ಕುಡಿಯಲು, ತರಕಾರಿ ತೊಳೆಯಲು ನೀರಿನ ವ್ಯವಸ್ಥೆ ಇಲ್ಲ ಎಂದು ವ್ಯಾಪಾರಿಗಳು ಹೇಳುತ್ತಾರೆ.ಎಪಿಎಂಸಿಗೆ ಈಗ ಸ್ಥಳಾಂತರಿಸಿದ ಮಂಗಳವಾರ ಸಂತೆಯನ್ನು ಪಟ್ಟಣದ ಮೊದಲಿನ ಸ್ಥಳದಲ್ಲೇ ನಡೆಸಬೇಕು. ಅಲ್ಲಿನ ಬೀದಿಗಳಲ್ಲಿ ಪರಸ್ಪರ ಅಂತರ ಕಾಪಾಡಿಕೊಳ್ಳುವ ಮೂಲಕ ವ್ಯಾಪಾರ-ವಹಿವಾಟು ನಡೆಸಬಹುದಾಗಿದೆ ಎಂದು ಜನರು ಹೇಳುತ್ತಾರೆ.

    ಕೋವಿಡ್-19 ನಿಯಮಾನುಸಾರ ಪಟ್ಟಣದ ಮಧ್ಯಭಾಗದಲ್ಲಿ ತರಕಾರಿ ವ್ಯಾಪಾರ ನಡೆಸಲು ಸಂಬಂಧಿಸಿದ ಅಧಿಕಾರಿಗಳು ಅವಕಾಶ ನೀಡಲು ಗಮನ ಹರಿಸಬೇಕು.

    | ಯಲ್ಲಾರಿ ಹುಬ್ಳಿಕರ, ಅಳ್ನಾವರ ಪಪಂ ಸದಸ್ಯ

    ಜಿಲ್ಲಾಡಳಿತ ನಿರ್ದೇಶನದಂತೆ ಕರೊನಾ ನಿಯಂತ್ರಣಕ್ಕಾಗಿ ಪಟ್ಟಣದಲ್ಲಿ ನಡೆಯುತ್ತಿದ್ದ ಮಂಗಳವಾರ ಸಂತೆಯನ್ನು ಎಪಿಎಂಸಿಗೆ ಸ್ಥಳಾಂತರಿಸಲಾಗಿದೆ. ಕರೊನಾ ಹತೋಟಿಗೆ ಬರುವವರೆಗೆ ಅಲ್ಲಿ ಸಂತೆ ನಡೆಸಲು ಜನರು ಸಹಕಾರ ನೀಡಬೇಕು.

    | ವೈ.ಜಿ. ಗದ್ದಿಗೌಡರ, ಅಳ್ನಾವರ ಪಪಂ ಮುಖ್ಯಾಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts