More

    ಅರಳೇಪೇಟೆಯಲ್ಲಿ ನಮ್ಮ ಕ್ಲಿನಿಕ್ ಶೀಘ್ರ ಪ್ರಾರಂಭ

    ಶಾಸಕ ಸಿ.ಎನ್.ಬಾಲಕೃಷ್ಣ ಮಾಹಿತಿ


    ಚನ್ನರಾಯಪಟ್ಟಣ: ಪಟ್ಟಣದ ಅರಳೇಪೇಟೆ ಹಾಗೂ ಡಿ.ಕಾಳೇನಹಳ್ಳಿ ರಸ್ತೆಯಲ್ಲಿ ನಮ್ಮ ಕ್ಲಿನಿಕ್‌ಅನ್ನು ಶೀಘ್ರ ಪ್ರಾರಂಭಿಸಲಾಗುವುದು ಎಂದು ಶಾಸಕ ಸಿ.ಎನ್.ಬಾಲಕೃಷ್ಣ ಹೇಳಿದರು.


    ಪಟ್ಟಣದ ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿ 1 ಕೋಟಿ ರೂ.ವೆಚ್ಚದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಮೇಲಂತಸ್ತಿನ ಕಟ್ಟಡ ಕಾಮಗಾರಿಗೆ ಶುಕ್ರವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.


    ನಮ್ಮ ಕ್ಲಿನಿಕ್‌ಗೆ ಈಗಾಗಲೇ ಕಟ್ಟಡಗಳನ್ನು ಗುರುತಿಸಲಾಗಿದ್ದು, ವೈದ್ಯರು ಮತ್ತು ಅಗತ್ಯ ಸಿಬ್ಬಂದಿ ನೇಮಿಸಲಾಗುವುದು. ನಮ್ಮ ಕ್ಲಿನಿಕ್ ಅರಂಭಿಸುವುದರಿಂದ ಸಾರ್ವಜನಿಕ ಆಸ್ಪತ್ರೆಯ ಮೇಲಿನ ಒತ್ತಡ ಕಡಿಮೆಯಾಗಲಿದೆ. ಜತೆಗೆ ಪ್ರಯೋಗಾಲಯವನ್ನು ತೆರೆಯಲಾಗುವುದು ಎಂದು ತಿಳಿಸಿದರು.


    ಸಾರ್ವಜನಿಕ ಅಸ್ಪತ್ರೆಯನ್ನು 30 ರಿಂದ 100 ಹಾಸಿಗೆಗೆ ಮೇಲ್ದರ್ಜೆಗೆ ಹೆಚ್ಚಿಸಲಾಗಿದೆ. ಶೇ.90ರಷ್ಟು ಪ್ರಮಾಣದಲ್ಲಿ ತಜ್ಞ ವೈದ್ಯರು ಹಾಗೂ ಸಿಬ್ಬಂದಿ ಇದ್ದು, ಕಟ್ಟಡ ಸೇರಿದಂತೆ ವಿವಿಧ ಅಗತ್ಯ ಸೌಲಭ್ಯ ಒದಗಿಸಬೇಕಿದೆ ಎಂದು ಸರ್ಕಾರಕ್ಕೆ ಮನವಿ ಮಾಡಿದರು.


    ಸಾರ್ವಜನಿಕ ಆಸ್ಪತ್ರೆಯನ್ನು 1.20 ಕೋಟಿ ರೂ. ಹಾಗೂ ಹಿರೀಸಾವೆ ಸಮುದಾಯ ಆರೋಗ್ಯ ಕೇಂದ್ರವನ್ನು 50 ಲಕ್ಷ ರೂ. ವೆಚ್ಚದಲ್ಲಿ ದುರಸ್ತಿ ಪಡಿಸಲಾಗುವುದು ಎಂದು ಭರವಸೆ ನೀಡಿದರು.


    ತಾಲೂಕಿನಲ್ಲಿ 100 ಕ್ಷಯ ರೋಗಿಗಳಿದ್ದಾರೆ. ಅದರಲ್ಲಿ 40 ರೋಗಿಗಳು ಬಡ ಕುಟುಂಬದವರಾಗಿದ್ದು ಅವರಿಗೆ ವೈಯಕ್ತಿಕವಾಗಿ 5 ತಿಂಗಳ ತನಕ ಪ್ರತಿ ತಿಂಗಳು ಆಹಾರ ಪದಾರ್ಥ ನೀಡಲಾಗುವುದು ಎಂದು ತಿಳಿಸಿದರು.


    ಪುರಸಭಾ ಅಧ್ಯಕ್ಷೆ ರಾಧಾ, ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಲಕ್ಷ್ಮೀನಾರಾಯಣ್, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಬಿ.ಎನ್.ಶಿವಸ್ವಾಮಿ, ತಾಲೂಕು ಆರೋಗ್ಯಾಧಿಕಾರಿ ಡಾ.ಎ.ಎನ್.ಕಿಶೋರ್ ಕುಮಾರ್, ಆರ್‌ಸಿಎಚ್ ಅಧಿಕಾರಿ ಡಾ.ಚೇತನ್, ಸಾರ್ವಜನಿಕ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ವಿ.ಮಹೇಶ್, ಡಾ.ಹರೀಶ್, ಡಾ.ಶಿವಂಶಕರ್, ಸಾರ್ವಜನಿಕ ಆಸ್ಪತ್ರೆಯ ಆರೋಗ್ಯ ರಕ್ಷಾ ಸಮಿತಿಯ ಸದಸ್ಯರಾದ ಎಂ.ಆರ್.ಅನಿಲ್‌ಕುಮಾರ್, ವೆಂಕಟೇಶ್ ಹಾಗೂ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts