More

    ಅರಣ್ಯಾಧಿಕಾರಿ, ಸಿಬ್ಬಂದಿ ಸಸ್ಪೆಂಡ್

    ಯಾದಗಿರಿ: ಕಳ್ಳರಿಂದ ವಶ ಪಡಿಸಿಕೊಂಡು ಕಚೇರಿಯಲ್ಲಿಟ್ಟಿದ್ದ ಶ್ರೀಗಂಧ ಮರದ ಕಟ್ಟಿಗೆಗಳು ಇದ್ದಕ್ಕಿದ್ದ ಹಾಗೆ ಕಣ್ಮರೆಯಾದ ಘಟನೆಗೆ ಸಂಬಂಧಿಸಿದಂತೆ ಇಲ್ಲಿನ ಉಪ ಅರಣ್ಯ ವಲಯಾಧಿಕಾರಿ ಚಂದ್ರಶಾ ನೀರಕಟ್ಟಿ ಹಾಗೂ ವನಪಾಲಕ ರಿಜ್ವಾನ್ನನ್ನು ಅಮಾನತುಗೊಳಿಸಿ ಕಲಬುರಗಿ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಸುನಿಲ್ ಪನ್ವಾರ್ ಶನಿವಾರ ಆದೇಶಿಸಿದ್ದಾರೆ.

    ಏನಿದು ಘಟನೆ:? ಸೆ.14ರಂದು ತಾಲೂಕಿನ ಹತ್ತಿಕುಣಿ ಗ್ರಾಮ ಸಮೀಪದ ಬಗ್ಗಲಮಡು-ಸೇಡಂ ಹೆದ್ದಾರಿಯಲ್ಲಿ ಶ್ರೀಗಂಧ ಕಟ್ಟಿಗೆ ಸಾಗಿಸುತ್ತಿದ್ದ ಮಾಹಿತಿ ಮೆರೆಗೆ ಅಧಿಕಾರಿಗಳ ದಾಳಿ ನಡೆಸಿ, 15 ಲಕ್ಷ ಮೌಲ್ಯದ 150 ಕೆಜಿ ಗಂಧದ ಕಟ್ಟಿಗೆ ವಶ ಪಡಿಸಿಕೊಂಡಿದ್ದರು. ಮಹಾರಾಷ್ಟ್ರ ರಾಜ್ಯದ ನೋಂದಣಿ ಇರುವ 4678 ಬಿಳಿ ಬಣ್ಣದ ಕಾರಿನಲ್ಲಿ ಗಂಧದ ಕಟ್ಟಿಗೆಗಳನ್ನು ವ್ಯವಸ್ಥಿತವಾಗಿ ಪೇರಿಸಿಡಲಾಗಿತ್ತು. ಅಲ್ಲದೆ ಸಾಗಾಟಕ್ಕೆ ಬಳಸುತ್ತಿದ್ದ ಬೈಕ್ ಹಾಗೂ ಎರಡು ಕೊಡಲಿಗಳು ಜಪ್ತಿ ಮಾಡಿಕೊಳ್ಳಲಾಗಿತ್ತು.

    ಮಹಾರಾಷ್ಟ್ರದ ಸತಾರ ಜಿಲ್ಲೆಯ ಮೂಲದ ಸಚಿನ್ ಎಂಬಾತನನ್ನು ವಶಕ್ಕೆ ಪಡೆಯಲಾಗಿದ್ದು, ನ್ಯಾಯಾಂಗ ಬಂಧನಕ್ಕೂ ಒಪ್ಪಿಸಲಾಗಿದೆ. ಆದರೆ, ಕಳೆದ ಮೂರ್ನಾಲ್ಕು ದಿನಗಳ ಹಿಂದೆ ಅರಣ್ಯ ಇಲಾಖೆ ಕಚೇರಿಯಲ್ಲಿದ್ದ ಶ್ರೀಗಂಧದ ಕಟ್ಟಿಗೆಗಳು ಕಳ್ಳತನವಾಗಿದ್ದವು. ಅಧಿಕಾರಿಗಳು ಇದನ್ನು ಮರೆಮಾಚಲು ಹೊಸ ಮರವನ್ನು ಕಡಿದು, ಕಚೇರಿಯಲ್ಲಿ ತುಂಡುಗಳನ್ನು ತಂದಿಟ್ಟಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು.

    ಈ ಬಗ್ಗೆ ಅರಣ್ಯ ಸಚಿವ ಈಶ್ವರ ಖಂಡ್ರೆಗೆ ಗುರುಮಠಕಲ್ ಶಾಸಕ ಶರಣಗೌಡ ಕಂದಕೂರ ಪತ್ರ ಬರೆದು ಈ ಘಟನೆಯ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ಒತ್ತಾಯಿಸಿದ್ದರು. ಕಚೇರಿಯಲಿಟ್ಟಿದ್ದ ಮರದ ಕಟ್ಟಿಗೆಗಳು ಹೇಗೆ ಮಾಯವಾಗಿವೆ ಎಂಬುದು ನಿಗೂಢವಾಗಿತ್ತು. ಶನಿವಾರ ಇಲಾಖೆಗೆ ಭೇಟಿ ನೀಡಿದ ಸುನಿಲ್ ಪನ್ವಾರ್ ಇಬ್ಬರನ್ನು ಅಮಾನತುಗೊಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts