More

    ಅಭ್ಯರ್ಥಿಯ ವೆಚ್ಚ 95 ಲಕ್ಷ ರೂ.ಮೀರುವಂತಿಲ್ಲ

    ಚಿತ್ರದುರ್ಗ: ಲೋಕಸಭಾ ಚುನಾವಣೆ ಅಭ್ಯರ್ಥಿಯ ಚುನಾವಣಾ ವೆಚ್ಚ ಗರಿಷ್ಠ 95 ರೂ.ಲಕ್ಷಗಳನ್ನು ಮೀರುವಂತಿಲ್ಲವೆಂದು ಜಿಲ್ಲಾ ಚುನಾವಣಾ ವೆಚ್ಚ ಉಸ್ತುವಾರಿ ಕೋಶದ ನೋಡಲ್ ಅಧಿಕಾರಿ,ಜಿ.ಪಂ ಮುಖ್ಯಲೆಕ್ಕಾಧಿಕಾರಿ ಡಿ.ಆರ್.ಮಧು ಹೇಳಿದರು.
    ಲೋಕಸಭೆ ಚುನಾವಣೆ 2024ರ ಅಂಗವಾಗಿ ಜಿಲ್ಲಾ ಚುನಾವಣಾ ವೆಚ್ಚ ಉಸ್ತುವಾರಿ ಕೋಶದಿಂದ ಚಿತ್ರದುರ್ಗ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಎಲ್ಲ ವಿಧಾ ನಸಭಾ ಕ್ಷೇತ್ರಗಳ ಸಹಾಯಕ ವೆಚ್ಚ ಅಧಿಕಾರಿಗಳು ಹಾಗೂ ಅವರ ತಂಡದವರಿಗೆ ಡಿಸಿ ಕಚೇರಿಯಲ್ಲಿ ಬುಧವಾರ ಏರ್ಪಡಿಸಿದ್ದ ಖರ್ಚು ವೆಚ್ಚದ ತರಬೇತಿ ಕಾರ‌್ಯಾಗಾರದಲ್ಲಿ ಅವರು ಮಾತನಾಡಿದರು.
    ನಾಮಪತ್ರ ಸಲ್ಲಿಕೆ ದಿನಾಂಕದಿಂದ ಮತದಾನ ಎಣಿಕೆ ಮುಗಿಯುವ ತನಕ ಆದಂತಹ ಎಲ್ಲ ವೆಚ್ಚಗಳ ವಿವರವನ್ನು ಅಭ್ಯರ್ಥಿಗಳು ಸಲ್ಲಿ ಸ ಬೇಕು. ಪ್ರತಿ ಅಭ್ಯರ್ಥಿ ವೆಚ್ಚವನ್ನು 95ಲಕ್ಷಗಳಿಗೆ ಮಿತಿಗೊಳಿಸಲಾಗಿದ್ದು,ಈ ಖರ್ಚು,ವೆಚ್ಚಗಳ ನಿರ್ವಹಣೆಗಾಗಿ ಪ್ರತ್ಯೇಕ ಬ್ಯಾಂಕ್ ಖಾತೆ ತೆರೆಯಬೇಕು.
    ಚುನಾವಣೆ ವೆಚ್ಚಗಳನ್ನು ಬ್ಯಾಂಕ್ ಮೂಲಕವೇ ಪಾವತಿಸಬೇಕು. ಚುನಾವಣೆ ಪ್ರಚಾರ,ವಾಹನ,ಭಿತ್ತಿ ಪತ್ರ, ಸಭೆ,ಸ್ಟಾರ್ ಪ್ರಚಾರಕರ ಸ ಭೆ, ಸಮಾರಂಭ,ವೇದಿಕೆ,ಊಟ,ಉಪಹಾರದ ಸೇರಿದಂತೆ ಇತರೆ ಎಲ್ಲ ವೆಚ್ಚಗಳನ್ನು ವಿಡಿಯೊ ಆಧರಿಸಿ ದಾಖಲಿ ಸಬೇಕು.ವೆಚ್ಚದ ಮಾಹಿತಿಯನ್ನು ಕಾಲ,ಕಾಲಕ್ಕೆ ಕೋಶಕ್ಕೆ ಸಲ್ಲಿಸ ಬೇಕೆಂದರು.
    ತರಬೇತಿ ಕಾರ‌್ಯಾಗಾರ ಉದ್ಘಾಟಿಸಿ ಮಾತನಾಡಿದ ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ,ಸಹಾಯಕ ವೆಚ್ಚ ಅಧಿಕಾರಿಗಳು ಅಭ್ಯ ರ್ಥಿಗಳ ಚುನಾವಣೆ ವೆಚ್ಚವನ್ನು ಕರಾರುವಕ್ಕಾಗಿ ದಾಖಲಿಸಬೇಕು. ಲೋಕಸಭಾ ಕ್ಷೇತ್ರದ ಚುನಾವಣೆಯನ್ನು ಮುಕ್ತ ನ್ಯಾಯಸಮ್ಮತ, ಶಾಂತಿಯುತ ಹಾಗೂ ಯಶಸ್ವಿಯಾಗಿ ನಡೆಸಲು ಜವಾಬ್ದಾರಿಯಿಂದ ಕರ್ತವ್ಯ ನಿರ್ವಹಿಸಬೇಕೆಂದರು. ತರಬೇತಿ ನಿರ್ವಹಣಾ ಕೋಶದ ನೋ ಡಲ್ ಅಧಿಕಾರಿ ಜಗದೀಶ್‌ಹೆಬ್ಬಳ್ಳಿ,ಚುನಾವಣೆ ಶಿರಸ್ತೇದಾರ ಮಲ್ಲಿಕಾರ್ಜುನ್ ಮತ್ತಿತರರು ಇದ್ದರು.
    (ಸಿಟಿಡಿ 10 ಎಲೆಕ್ಷನ್)
    ಚಿತ್ರದುರ್ಗ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಎಲ್ಲ ವಿಧಾನಸಭಾ ಕ್ಷೇತ್ರಗಳ ಸಹಾಯಕ ವೆಚ್ಚ ಅಧಿಕಾರಿಗಳು ಹಾಗೂ ಅವರ ತಂಡದವ ರಿಗೆ ಬುಧವಾರ ಏರ್ಪಡಿಸಿದ್ದ ತರಬೇತಿ ಕಾರ‌್ಯಾಗಾರದಲ್ಲಿ ಜಿಪಂ ಮುಖ್ಯಲೆಕ್ಕಾಧಿಕಾರಿ ಡಿ.ಆರ್.ಮಧು, ಎಡಿಸಿ ಬಿ.ಟಿ.ಕುಮಾರಸ್ವಾಮಿ, ಜಗದೀಶ್‌ಹೆಬ್ಬಳ್ಳಿ, ಮಲ್ಲಿಕಾರ್ಜುನ್ ಮತ್ತಿತರರು ಇದ್ದರು.


    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts