More

    ಅಬ್ಬೆತುಮಕೂರಿನ ಗೋಮಂಗಲ ಪೂಜಾ ಮಹೋತ್ಸವ


    ಯಾದಗಿರಿ: ತಮ್ಮ ಸಾಧನೆಯಿಂದ ಸಿದ್ದಿಯ ಶಿಖರವನ್ನೇರಿದ ಶ್ರೀ ವಿಶ್ವಾರಾಧ್ಯರು ಲೋಕವನ್ನು ಉದ್ದರಿಸಿದ ಸಿದ್ದಿಪುರುಷರೆಂದು ಕಾಶಿ ವಾರಣಾಸಿ ಪೀಠದ ನೂತನ ಜಗದ್ಗುರು ಡಾ.ಮಲ್ಲಿಕಾಜರ್ುನ ಶಿವಾಚಾರ್ಯ ಭಗತ್ಪಾದರು ನುಡಿದರು.

    ಶುಕ್ರವಾರದಂದು ಸಂಜೆ ತಾಲೂಕಿನ ಅಬ್ಬೆತುಮಕೂರಿನ ಶ್ರೀಮಠದಲ್ಲಿ ಹಮ್ಮಿಕೊಂಡಿದ್ದ ವಿಶ್ವಾರಾದ್ಯರ ತೊಟ್ಟಿಲೋತ್ಸವ ಸಮಾರಂಭದ ದಿವ್ಯ ಸಾನ್ನಿಧ್ಯವಹಿಸಿ ಹಿತೋಪದೇಶ ನೀಡಿ, ಗಂವ್ಹಾರದ ಗಭರ್ಾಂಬುಯಲ್ಲಿ ಅವತರಿಸಿ ಬಾಲ್ಯದಲ್ಲಿಯೇ ಅನಂತ ಲೀಲಾ ವಿನೋದಗಳನ್ನು ತೋರಿಸಿದ ವಿಶ್ವಾರಾಧ್ಯರು ಕಾಶೀಯಲ್ಲಿ ವಿದ್ಯೆಯನ್ನು ಪಡೆದು ಪಾರಂಗತರಾಗಿ ಘನ ಪಂಡಿತರೆಂದು ಜನಜನಿತವಾದ ಮಹಿಮಾ ಪುರಷರು ಎಂದು ಬಣ್ಣಿಸಿದರು.

    ತಾವು ಸಂಪಾದಿಸಿದ ಜ್ಞಾನಸುಧೆಯನ್ನು ನಾಡಿನ ಜನತೆಗೆ ಉಣಬಡಿಸಲು ಲೋಕಸಂಚಾರವನ್ನು ಕೈಗೊಳ್ಳುತ್ತಾರೆ. ಜಗದ ಜನರನ್ನು ಉದ್ದರಿಸುತ್ತಾ ನಾಡ ಸಂಚಾರ ಮಾಡಿ ಜಗದೊಡೆಯ ಆಗಿದ್ದಾರೆ. ಪಿಠಾಪತಿ ಡಾ.ಗಂಗಾಧರ ಸ್ವಾಮಿಗಳು, ವಿಶ್ವಾರಾಧ್ಯರ ಪರಂಪರೆಯನ್ನು ಪುನರುತ್ಥಾನ ಮಾಡುವಲ್ಲಿ ಬದ್ದಕಂಕಣರಾಗಿ ಜನೋಪಯೋಗಿ ಮತ್ತು
    ಲೋಕಕಲ್ಯಾಣದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು.

    ಪೀಠಾಪತಿ ಡಾ.ಗಂಗಾಧರ ಮಹಾಸ್ವಾಮಿಗಳು ಮಾತನಾಡಿ, ಕುಳಿತುಕೊಳ್ಳಲು ಖುಚರ್ಿುಲ್ಲದ ಮಠಕ್ಕೆ ವಾರಸುದಾರನಾಗಿ ಬಂದ ನಾನು ವಿಶ್ವಾರಾಧ್ಯರ ಕೃಪಾಶೀವರ್ಾದದ ಬೆಳಕಿನಲ್ಲಿ ಮಠವನ್ನು ಮುನ್ನಡೆಸಿಕೊಂಡು ಬಂದು ಇಷ್ಟೊಂದು ಪ್ರಮಾಣದ ಅಭಿವೃದ್ಧಿ ಪಡಿಸಲಾಗಿದೆ. ಇದಕ್ಕೆ ಶ್ರೀಮಠದ ಸಮಸ್ತ ಭಕ್ತರ ಸಹಕಾರವೇ ಕಾರಣವೆಂದು ಸ್ಮರಿಸಿದರು.

    ಇದಕ್ಕೂ ಮುನ್ನ 108 ಗೋವುಗಳಿಗೆ ಭೀಮಾನದಿಯಲ್ಲಿ ಗಂಗಾಸ್ನಾನ ಮಾಡಿಸಿ ಮಂಗಲವಾಧ್ಯಗಳ ಮೂಲಕ ಭವ್ಯವಾದ ಮೆರವಣಿಗೆಯಲ್ಲಿ ಮಠಕ್ಕೆ ಕರೆತರಲಾುತು. ಅಲ್ಲಿ ನಿಮರ್ಿಸಲಾದ 108 ಮಂಟಪಗಳಲ್ಲಿ 108 ಗೋವುಗಳನ್ನು ನಿಲ್ಲಿಸಿ, ದಂಪತಿಗಳಿಂದ ವಿಶೇಷ ಗೋಮಂಗಲ ಪೂಜೆಯನ್ನು ನೆರವೇರಿಸಲಾುತು.
    ನಂತರ ವಿಶ್ವಾರಾಧ್ಯರ ತೊಟ್ಟಿಲೋತ್ಸವ ಜರುಗಿತು. ತರುವಾಯ ಬಾಲ ಮುತ್ತೈದೆಯರಿಗೆ ಉಡಿತುಂಬುವ ಕಾರ್ಯವನ್ನು ನೆರವೇರಿಸಲಾುತು. ಆಗಮಿಸಿದ ಎಲ್ಲ ಭಕ್ತರಿಗೆ ವಿಶೇಷ ಪ್ರಸಾದ ವ್ಯವಸ್ಥೆ ಜರುಗಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts