More

    ಅಪಘಾತ ನಿಯಂತ್ರಿಸಲು ಸಿಬ್ಬಂದಿಗೆ ತರಬೇತಿ

    ಬೆಳಗಾವಿ: ಎಕ್ಸ್‌ಟ್ರೀಮ್ ಸೆಕ್ಯೂರಿಟಿ ಕಂಪನಿ ವ್ಯವಸ್ಥಾಪ ನಿರ್ದೇಶಕ ಇಂದ್ರಜಿತ್ ಪ್ರಧಾನ ಅವರ ಮಾರ್ಗದರ್ಶನದಲ್ಲಿ ಸಂಸ್ಥೆ ತರಬೇತಿ ವ್ಯವಸ್ಥಾಪಕ ಯಶವಂತ ಪಾಟೀಲ, ತರಬೇತಿ ಅಧಿಕಾರಿ ಮಾರುತಿ ಪಾಟೀಲ, ಎಕ್ಸ್‌ಟ್ರೀಮ್‌ನ ಶಿನೋಳಿ ಶಾಖೆಯಲ್ಲಿರುವ ಆಕ್ವಾ ಅಲಾಯ್ಸ ಘಟಕದ ಎಲ್ಲ ಉದ್ಯೋಗಿಗಳಿಗೆ ಶುಕ್ರವಾರ ತುರ್ತು ಸಂದರ್ಭಗಳಲ್ಲಿ ಅಪಘಾತ ನಿಯಂತ್ರಿಸುವ ತರಬೇತಿ ನೀಡಿದರು.

    ಅಗ್ನಿಶಾಮಕ ಸಾಧನಗಳನ್ನು ಸಮಯೋಚಿತವಾಗಿ ನಿರ್ವಹಿಸುವ, ಪ್ರಥಮ ಚಿಕಿತ್ಸೆ ಹಾಗೂ ತೀವ್ರವಾದ ಹೃದಯ ಸ್ತಂಭನದ ವೇಳೆ ಹೇಗೆ ಜೀವ ಉಳಿಸಬೇಕೆಂಬ ಬಗ್ಗೆ ಉದ್ಯೋಗಿಗಳಿಗೆ ತರಬೇತಿ ನೀಡಲಾಯಿತು. ತುರ್ತು ಸಂದರ್ಭದಲ್ಲಿ ಜೀವ ಉಳಿಸಲು ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆಗಳು, ಪ್ರಥಮ ಚಿಕಿತ್ಸೆಗಳ ವಿವರಿಸಲಾಯಿತು. ಎಕ್ಸ್‌ಟ್ರೀಮ್ ಸೆಕ್ಯೂರಿಟಿ ಕಂಪನಿಯು ಪ್ರಸ್ತುತ ಎಲ್ಲ ವಲಯಗಳಲ್ಲಿ ಯಾವುದೇ ರೀತಿಯ ತುರ್ತು ಸಂದರ್ಭಗಳನ್ನು ನಿಯಂತ್ರಿಸಲು ನಿರ್ಧರಿಸಿದೆ. ಮುಂಬರುವ ದಿನಗಳಲ್ಲಿ ಸಂಸ್ಥೆಯು ತನ್ನ ಎಲ್ಲ ಘಟಕಗಳಲ್ಲಿ ಇಂತಹ ತರಬೇತಿ ಚಟುವಟಿಕೆಗಳನ್ನು ನಡೆಸುವ ಮೂಲಕ ಉದ್ಯೋಗಿಗಳಲ್ಲಿ ಜಾಗೃತಿ ಮೂಡಿಸಲು ಹೊರಟಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts