More

    ಅನ್ಯಾಯ, ಅಕ್ರಮ ತಡೆಯುವ ಇಚ್ಛಾಶಕ್ತಿ ಜನಪ್ರತಿನಿಧಿಗಳಿಗೆ ಇಲ್ಲ

    ಚಿತ್ರದುರ್ಗ: ರಾಜ್ಯದ ಜನರಿಗೆ ಶಾಪವಾಗಿರುವ ಜೆಡಿಎಸ್, ಕಾಂಗ್ರೆಸ್ ಹಾಗೂ ಬಿಜೆಪಿಗಳನ್ನು ಜನರು ತಿರಸ್ಕರಿಸಬೇಕಿದೆ ಎಂದು ಕರ್ನಾಟಕ ರಾಷ್ಟ್ರ ಸಮಿತಿ ಅಧ್ಯಕ್ಷ ರವಿಕೃಷ್ಣಾರೆಡ್ಡಿ ಹೇಳಿದರು.
    ಕೆಆರ್‌ಎಸ್ ಫೆಬ್ರವರಿ 19 ರಿಂದ ಆರಂಭಿಸಿರುವ ‘ಕರ್ನಾಟಕಕ್ಕಾಗಿ ನಾವು’ ಬೈಕ್ ಜಾಥಾ ಗುರುವಾರ ಚಿತ್ರದುರ್ಗಕ್ಕೆ ಆಗಮಿಸಿದ ವೇಳೆ, ನಗರದ ಒನಕೆ ಓಬವ್ವ ವೃತ್ತದಲ್ಲಿ ಅವರು ಮಾತನಾಡಿ, ಹಣ,ಹೆಂಡ ಹಂಚಿ ಮತ ಖರೀದಿಸುವ ಈ ಪಕ್ಷಗಳು ಮತದಾರರನ್ನು ಅವಮಾನಗೊಳಿಸುತ್ತಿವೆ ಎಂದು ಆರೋಪಿಸಿದರು.
    ರಾಜಕಾರಣ ಪವಿತ್ರವಾದದ್ದು. ಪ್ರಾಮಾಣಿಕತೆಗೆ ಹೆಸರಾಗಿದ್ದ ಎಸ್.ನಿಜಲಿಂಗಪ್ಪ ಪ್ರತಿನಿಧಿಸಿದ ಜಿಲ್ಲೆ ಚಿತ್ರದುರ್ಗ. ಅವರಿದ್ದ ಕಾಂಗ್ರೆಸ್ಸಿ ನಲ್ಲೂ ಭ್ರಷ್ಟರಿದ್ದಾರೆ. ಕಡುಭ್ರಷ್ಟ ರಾಜಕಾರಣಿಗಳಿಂದ ರಾಜ್ಯ ಹಾಳಾಗಿದೆ. ಅನ್ಯಾಯ, ಅಕ್ರಮ ತಡೆಯುವ ಇಚ್ಛಾಶಕ್ತಿ ಜನಪ್ರತಿನಿಧಿಗಳಿಗೆ ಇಲ್ಲವಾಗಿದೆ. ಸರ್ಕಾರಿ ಕಚೇರಿಗಳ ಬಳಿ ದಲ್ಲಾಳಿಗಳಿಗೆ ನಮ್ಮ ಪಕ್ಷ ತಕ್ಕ ಪಾಠ ಕಲಿಸಿದೆ. ಆದರೆ ಅಧಿಕಾರದಲ್ಲಿರುವ ಪಕ್ಷಗಳು ಈ ಕೆಲಸ ಮಾಡಿಲ್ಲ ಎಂದರು.
    ತುಮಕೂರು-ದಾವಣಗೆರೆ ನೇರ ರೈಲು ಮಾರ್ಗ ಯೋಜನೆ ಅನುಷ್ಠಾನವಾಗಿಲ್ಲ. ಎ.ನಾರಾಯಣಸ್ವಾಮಿ ಅವರು ಕೇಂದ್ರ ಸಚಿವ ರಾದ ಬಳಿಕ ಜಿಲ್ಲೆ ಅನೇಕ ರೈತರ ಜಮೀನು ಆನೇಕಲ್‌ನ ಹಲವರ ಪಾಲಾಗಿದೆ ಎಂದು ಆರೋಪಿಸಿದರು.
    ಕೆಆರ್‌ಎಸ್ ಉಪಾಧ್ಯಕ್ಷ ಎಸ್.ಎಚ್.ಲಿಂಗೇಗೌಡ, ರಾಜ್ಯ ಪ್ರಧಾನ ಕಾರ್ಯದರ್ಶಿ ಸಿ.ಎನ್.ದೀಪಕ್, ರಘು ಜಾಣಗೆರೆ, ಎಲ್.ಜೀವ ನ್, ಕೃಷ್ಣ ಮಹೇಶ್ ನಗರಂಗೆರೆ, ಮಲ್ಲಿಕಾರ್ಜುನಯ್ಯ, ಬಿ.ಎಸ್,ನರಸಿಂಹಮೂರ್ತಿ, ರಘುಪತಿಭಟ್, ಜಿಲ್ಲಾ ಘಟಕದ ಅಧ್ಯಕ್ಷ ನಾಗಿರೆಡ್ಡಿ, ಹೇಮಗಿರಿ ಮತ್ತಿತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts