More

    ಅಧಿಕಾರಿಗಳ ನಿರ್ಲಕ್ಷೃದಿಂದ ಅಭಿವೃದ್ಧಿ ಹಿನ್ನೆಡೆ: ಅಶೋಕ್ ನಾಯ್ಕ ಆರೋಪ

    ಹೊಳೆಹೊನ್ನೂರು: ಪಪಂ ಚಿತ್ರಣ ಸಂಪೂರ್ಣವಾಗಿ ಬದಲಾಗುತ್ತಿದೆ ಎಂದು ಗ್ರಾಮಾಂತರ ಶಾಸಕ ಕೆ.ಬಿ.ಅಶೋಕ್ ನಾಯ್ಕ ಹೇಳಿದರು.
    ಶನಿವಾರ 3.5 ಕೋಟಿ ರೂ. ವೆಚ್ಚದ ಸಮುದಾಯ ಆರೋಗ್ಯ ಕೇಂದ್ರದ ಕಾಂಪೌಂಡ್ ಹಾಗೂ ಶವಾಗಾರ ನಿರ್ಮಾಣ, ಆಕ್ಸಿಜನ್ ಪೈಪ್‌ಗಳ ಅಳವಡಿಕೆ ಕಾಮಗಾರಿಗಳಿಗೆ ಗುದ್ದಲಿಪೂಜೆ ನೆರವೇರಿಸಿ ಮಾತನಾಡಿದರು.
    ನೂತನ ಆರೋಗ್ಯ ಕೇಂದ್ರದಲ್ಲಿ ಉತ್ತಮ ವಾತಾವರಣ ನಿರ್ಮಾಣವಾಗಿರುವುದು ಆಶಾದಾಯಕ ಬೆಳವಣಿಗೆ. ಹೊಳೆಹೊನ್ನೂರು ಪಪಂ ಚಿತ್ರಣ ಬದಲಾಗುತ್ತಿದೆ. ನಮ್ಮ ವೇಗಕ್ಕೆ ತಕ್ಕಂತೆ ಕಾಮಗಾರಿಗಳನ್ನು ಅನುಷ್ಠಾನಗೊಳಿಸಲು ಅಧಿಕಾರಿಗಳು ವಿಫಲವಾಗುತ್ತಿರುವುದರಿಂದ ಜನಸ್ನೇಹಿ ಕಾಮಗಾರಿಗಳು ನೆನೆಗುದಿಗೆ ಬೀಳುತ್ತಿವೆ ಎಂದರು.
    ಪಪಂ ವ್ಯಾಪ್ತಿಯಲ್ಲಿ ಸ್ವಚ್ಛತೆಯ ಕಡೆ ಮತ್ತಷ್ಟು ಕಾಳಜಿ ವಹಿಸಬೇಕು. ಆರೋಗ್ಯ ಜಾಗೃತಿ ಕಾರ್ಯಾಗಾರಗಳನ್ನು ಹಮ್ಮಿಕೊಂಡು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಬೇಕು. ಹೊಳೆಹೊನ್ನೂರಿನಲ್ಲಿ ಸರ್ಕಾರದ ನಮ್ಮ ಕ್ಲಿನಿಕ್ ತೆರೆಯಲು ಅನುಮೋದನೆ ದೊರೆತಿದೆ. ಕ್ಲಿನಿಕ್‌ಗೆ ಬೇಕಾದ ತಜ್ಞ ವೈದ್ಯರು, ದಾದಿಯರು ಶೀಘ್ರದಲ್ಲಿ ಬರಲಿದ್ದಾರೆ. 10 ಕೋಟಿ ರೂ. ಅನುದಾನ ಮಂಜೂರಾಗಿದೆ. ಅರಬಿಳಚಿಯಲ್ಲಿ ನೂತನ ಆರೋಗ್ಯ ಕೇಂದ್ರ ನಿರ್ಮಾಣಕ್ಕೆ ಸದ್ಯದಲ್ಲೇ ಚಾಲನೆ ಸಿಗಲಿದೆ ಎಂದು ವಿವರಿಸಿದರು.
    ಪಪಂಗೆ ಇಂಜಿನಿಯರ್ ಸೇರಿದಂತೆ ಹೊರ ಗುತ್ತಿಗೆ ಸಿಬ್ಬಂದಿ ಸಂಖ್ಯೆ ಕಡಿಮೆ ಇರುವುದರಿಂದ ಪಟ್ಟಣ ಅಭಿವೃದ್ಧಿಯಲ್ಲಿ ಹಿಂದೆ ಬೀಳುತ್ತಿದೆ. ಪಪಂಗೆ ಶಕ್ತಿ ತುಂಬುವ ಕೆಲಸ ವಾಗಬೇಕಿದೆ. ಹೊಳೆಹೊನ್ನೂರಿನ ಆಸ್ಪತ್ರೆಯನ್ನು 50 ಹಾಸಿಗೆಗಳಿಗೆ ಹೆಚ್ಚಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು. ಆರೋಗ್ಯ ರಕ್ಷಾ ಸಮಿತಿಗಳು ಜಾಗೃತವಾಗಿ ಕೆಲಸ ಮಾಡಬೇಕು. ನೆನೆಗುದಿಗೆ ಬಿದ್ದಿರುವ ಬಸ್ ನಿಲ್ದಾಣದ ಕಾಮಗಾರಿಯನ್ನು ಕೂಡಲೆ ಆರಂಭಿಸಲಾಗುವುದು ಎಂದರು.
    ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ದೇವಾನಂದ್ ಮಾತನಾಡಿ, ನೂತನ ಆಸ್ಪತ್ರೆ ಉದ್ಘಾಟನೆ ನಂತರ ಹೊರ ರೋಗಿಗಳ ಸಂಖ್ಯೆ ಹೆಚ್ಚಾಗಿದೆ. ಹೆರಿಗೆಗಳ ಸಂಖ್ಯೆಯು ದುಪ್ಪಟಾಗಿದೆ. ಕೆಲ ದಿನಗಳಲ್ಲೆ ಸಿ-ಸೆಕ್ಷನ್ ಹೆರಿಗೆ ಸೇರಿದಂತೆ ಉದರ ಶಸ್ತ್ರಚಿಕಿತ್ಸೆಗಳನ್ನು ಆರಂಭಿಸಲಾಗುತ್ತದೆ. ಆಸ್ಪತ್ರೆ ಸುಸಜ್ಜಿತವಾಗಿರುವುದರಿಂದ ಮುಂದಿನ ದಿನಗಳಲ್ಲಿ ರಾಜ್ಯ ಮಟ್ಟದ ಪ್ರಶಸ್ತಿಗೆ ಭಾಜನವಾಗುವ ನಿರೀಕ್ಷೆ ಇದೆ ಎಂದರು.

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts