More

    ಅಧಿಕಾರಿಗಳಿಂದ ಜಾಣ ಕುರುಡುತನ!

    ನರೇಗಲ್ಲ: ಕರೊನಾ ಹೆಮ್ಮಾರಿಯನ್ನು ತಡೆಗಟ್ಟಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹತ್ತು-ಹಲವು ಸಲಹೆ-ಸೂಚನೆಗಳನ್ನು ನೀಡುತ್ತಿದ್ದರೂ, ಅಧಿಕಾರಿಗಳು, ಸಾರ್ವಜನಿಕರು ಮಾತ್ರ ತಮಗೂ ಇದಕ್ಕೂ ಸಂಬಂಧವಿಲ್ಲದಂತೆ ವರ್ತಿಸುತ್ತಿರುವುದು ಅಘಾತಕಾರಿ ಸಂಗತಿಯಾಗಿದೆ.

    ಪಟ್ಟಣ, ಸುತ್ತಲಿನ ಗ್ರಾಮಗಳಿಗೆ ಪರರಾಜ್ಯ ಹಾಗೂ ಇತರೆ ದೇಶಗಳಿಂದಲೂ ಜನರು ಆಗಮಿಸುತ್ತಿದ್ದು, ಅವರ ಆರೋಗ್ಯ ತಪಾಸಣೆ ಸೇರಿ ಇತರೆ ಕ್ರಮಗಳನ್ನು ಕೈಗೊಳ್ಳಬೇಕಾದ ಅಧಿಕಾರಿಗಳು ಜಾಣ ಕುರುಡುತನ ಪ್ರದರ್ಶಿಸುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಯುಗಾದಿಯ ಬೆಳಗ್ಗೆ ಪಟ್ಟಣ ಸೇರಿ ಸುತ್ತಲಿನ ಗ್ರಾಮಗಳಲ್ಲಿ ಹೋಟೆಲ್, ಕ್ಷೌರದ ಅಂಗಡಿ, ಕಿರಾಣಿ ಅಂಗಡಿ, ಸೇರಿ ಇತರೆ ವ್ಯಾಪಾರ ವಹಿವಾಟು ಪ್ರಾರಂಭವಾಗಿತ್ತು. 8 ಗಂಟೆಗೆ ಪೊಲೀಸರು ಅಂಗಡಿಗಳನ್ನು ಬಂದ್ ಮಾಡಿ, ಗುಂಪು ಗುಂಪಾಗಿ ಕುಳಿತಿದ್ದವರನ್ನು ಚದುರಿಸಿದರು.

    ಸಸಿ ಹುಡುಕಿದ ಜನರು!

    ಅಬ್ಬಿಗೇರಿಯ ಕಂಟಿ ಬಸವೇಶ್ವರ ದೇವಸ್ಥಾನದ ಸುತ್ತಮುತ್ತ ಯುಗಾದಿಯ ನಂತರ ಗಿಡಗಂಟಿಗಳಲ್ಲಿ ಸಸಿಗಳು ಕಾಣುತ್ತವೆ. ಯಾವ ಬೆಳೆಯ ಸಸಿಗಳು ಹೆಚ್ಚಾಗಿ ಕಾಣುತ್ತವೆಯೋ ಆ ಬೆಳೆಯೇ ಹೆಚ್ಚು ಬೆಳೆಯುತ್ತದೆ ಎಂಬ ನಂಬಿಕೆ ಈ ಭಾಗದ ರೈತರಲ್ಲಿದೆ. ಆದ್ದರಿಂದ ಯುಗಾದಿ ಹಬ್ಬದಂದು ಜಿಲ್ಲೆ ಸೇರಿ ಸುತ್ತಮುತ್ತಲಿನ ಅನೇಕ ಜಿಲ್ಲೆಗಳ ರೈತರು ಯುಗಾದಿಯ ದಿನ ನಸುಕಿನಲ್ಲಿ ಅಬ್ಬಿಗೇರಿಯ ಕಂಟಿ ಬಸವೇಶ್ವರ ದೇವಸ್ಥಾನಕ್ಕೆ ಬರುತ್ತಿದ್ದರು. ಕರೊನಾ ಭೀತಿ ಹಿನ್ನ್ನೆಲೆಯಲ್ಲಿ ಪ್ರಸಕ್ತ ವರ್ಷ ಭಕ್ತರ ಸಂಖ್ಯೆ ಕಡಿಮೆಯಾಗಿತ್ತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts