More

    ಅದ್ವೈತ ತತ್ವ ಅನಾದಿಕಾಲದ ಮೌಲ್ಯ

    ಶೃಂಗೇರಿ: ಅದ್ವೈತ ತತ್ವವನ್ನು ಶ್ರೀ ಶಂಕಾರಾಚಾರ್ಯರು ಸೃಷ್ಟಿ ಮಾಡಿದ ಸಿದ್ಧಾಂತವಲ್ಲ. ಅದು ಅನಾದಿಕಾಲದಿಂದ ಬಂದ ಮೌಲ್ಯಗಳು. ಭಗವಂತ ಬ್ರಹ್ಮನನ್ನು ಸೃಷ್ಟಿಸಿ ವೇದಗಳನ್ನು ಉಪದೇಶ ಮಾಡಿದ ಬಳಿಕ ಬ್ರಹ್ಮ ಮಹರ್ಷಿಗಳಿಗೆ ಹಾಗೂ ಜಗತ್ತಿನ ಜೀವಿಗಳಿಗೆ ಅರಿವು ಮೂಡಿಸಿದ ಸಿದ್ಧಾಂತ ಅದ್ವೈತ ತತ್ವ ಎಂದು ಶ್ರೀ ಶಾರದಾ ಮಠದ ಜಗದ್ಗುರು ಶ್ರೀ ವಿಧುಶೇಖರಭಾರತೀ ಸ್ವಾಮೀಜಿ ತಿಳಿಸಿದರು.

    ವೇದಾಂತ ಪ್ರಶ್ನೋತರ ಮಾಲಿಕಾ ಎಂಬ ಸರಣಿ ಕಾರ್ಯಕ್ರಮದಲ್ಲಿ ಅದ್ವೈತ ತತ್ವ ಸೃಷ್ಟಿಸಿದವರು ಯಾರು? ಎಂಬ ವಿಷಯದ ಕುರಿತು ಸಾಮಾಜಿಕ ಜಾಲತಾಣದಲ್ಲಿ ಉಪನ್ಯಾಸ ನೀಡಿದರು.

    ವೇದಗಳ ಕೊನೆಯ ಭಾಗವಾದ ಉಪನಿಷತ್​ನಲ್ಲಿ ಪ್ರತಿಪಾದಿತವಾದ ಅದ್ವೈತ ತತ್ವ. ವೇದಮಹರ್ಷಿಗಳ ಬ್ರಹ್ಮಸೂತ್ರ ಹಾಗೂ ಶ್ರೀಕೃಷ್ಣ ಪರಮಾತ್ಮ ಅರ್ಜುನನಿಗೆ ಭಗವದ್ಗೀತೆ ಉಪದೇಶ ಮಾಡಿದ್ದು, ಅಲ್ಲಿ ಅದ್ವೈತ ತತ್ವದ ಸಾರವಿದೆ. ವೇದಗಳಲ್ಲಿ ಒಂದು ವಾಕ್ಯದ ಅರ್ಥವನ್ನು ನಾವು ತೀರ್ಮಾನ ಮಾಡಬೇಕಾದರೆ ವೇದಗಳನ್ನು ಪ್ರತಿ ಹಂತದಲ್ಲೂ ಪರಿಶೀಲನೆ ಮಾಡಬೇಕು. ಹಾಗಾಗಿ ಈ ತತ್ವವನ್ನು ಶ್ರೀ ಶಂಕರಭಗವತ್ಪದಾರು ತಮ್ಮ ಪ್ರಕರಣ ಗ್ರಂಥಗಳಾದ ವಿವೇಕಚೂಡಾಮಣಿ ಹಾಗೂ ಸ್ತೋತ್ರಗಳಲ್ಲಿ ವಿಶೇಷವಾಗಿ ಪ್ರಚುರ ಪಡಿಸಿದ್ದಾರೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts