More

    ಅಥಣಿ ಶ್ರೀಗಳಿಂದ ಖಾವಿಗೆ ಗೌರವ- ಶ್ರೀ ಬಸವಪ್ರಭು ಸ್ವಾಮೀಜಿ ಹೇಳಿಕೆ

    ದಾವಣಗೆರೆ: ಅಥಣಿ ಮುರುಘೇಂದ್ರ ಶಿವಯೋಗಿಯಂತಹ ಮಹಾತ್ಮರಿಂದಾಗಿ ಖಾವಿಗೆ ಮರ್ಯಾದೆ ಸಿಕ್ಕಿದೆ, ಸ್ವಾಮೀಜಿ-ವಿರಕ್ತರಿಗೆ ಗೌರವ ಬಂದಿದೆ ಎಂದು ಚಿತ್ರದುರ್ಗ ಮುರುಘಾ ಮಠದ ಉಸ್ತುವಾರಿ, ವಿರಕ್ತಮಠದ ಶ್ರೀ ಬಸವಪ್ರಭು ಸ್ವಾಮೀಜಿ ಹೇಳಿದರು.

    ದಾವಣಗೆರೆಯ ಶಿವಯೋಗಾಶ್ರಮದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಅಥಣಿ ಮುರುಘೇಂದ್ರ ಶಿವಯೋಗಿಗಳ 188ನೇ ಜಯಂತ್ಯುತ್ಸವದಲ್ಲಿ ಮಾತನಾಡಿದರು.
    ಹಣ-ಒಡವೆಗಳನ್ನು ಅವರು ‘ಚೇಳು’ ಎಂದು ಪರಿಭಾವಿಸಿ ನಿರಾಕರಿಸುತ್ತಿದ್ದರು. ಭಕ್ತರು ನೀಡುವ ಹಣ-ಕಾಣಿಕೆ ಬಗ್ಗೆ ಮೋಹ ಇರದ ಅವರೊಬ್ಬ ವೈರಾಗ್ಯಮೂರ್ತಿ ಎಂದು ಬಣ್ಣಿಸಿದರು.
    ಬಸವ ತತ್ವವನ್ನು ಜೀವನದಲ್ಲಿ ಆಚರಣೆಗೆ ತಂದ ಅಥಣಿ ಮುರುಘೇಂದ್ರ ಶಿವಯೋಗಿಗಳು ಸಾತ್ವಿಕತೆಯಿಂದ ಜಗತ್ತನ್ನು ಗೆದ್ದಿದ್ದಾರೆ. ಅಥಣಿ ಶ್ರೀಗಳು ಮೃತ ಬಾಲಕನೊಬ್ಬನಿಗೆ ವಿಭೂತಿ ಹಚ್ಚಿ ಪುನರ್ಜನ್ಮ ಕಲ್ಪಿಸಿದರು. ಆ ಬಾಲಕ ಅದೇ ಅಥಣಿ ಮಠದಲ್ಲಿ ಬೆಳೆದು ಶ್ರೀ ಮರುಳಶಂಕರ ದೇವರು ಎನಿಸಿಕೊಂಡು ಹೆಸರಾದರು ಎಂದರು.
    ಬಸವ ತತ್ವ ಪರಿಪಾಲನೆಯಿಂದ ಎಲ್ಲ ಜೀವನ ಪಾವನವಾಗಲಿದೆ. ಸಮಾಜದ ಉದ್ದಾರ ಆಗಲಿದೆ. ಇದನ್ನು ಕಾರ್ಯರೂಪಕ್ಕೆ ತಂದವರು ಅಥಣಿ ಶಿವಯೋಗಿಗಳು. ಕರ್ನಾಟಕದ ಗಾಂಧಿ ಹರ್ಡೇಕರ್ ಮಂಜಪ್ಪ ಅವರಿಗೆ ಲಿಂಗ ದೀಕ್ಷೆ ನೀಡಿದ್ದರು ಎಂದು ಸ್ಮರಿಸಿದರು.
    ಅಥಣಿ ಶ್ರೀಗಳನ್ನು ನಿತ್ಯ ಸ್ಮರಣೆ ಮಾಡುವುದರಿಂದ ನಮ್ಮ ಕಷ್ಟಗಳು ದೂರಾಗಲಿವೆ. ಅವರ ಜೀವನದ ಆದರ್ಶವನ್ನು ಪಾಲಿಸಬೇಕಿದೆ. ನಮ್ಮ ಬದುಕಿನ ಪ್ರತಿ ಪುಟದಲ್ಲಿ ಆದರ್ಶವನ್ನು ತುಂಬಿಸಿದರೆ ಜೀವನ ಸಾರ್ಥಕವಾಗಲಿದೆ ಎಂದು ಹೇಳಿದರು.
    ಬಸವ ಕಲಾಲೋಕ ತಂಡದವರು ವಚನಗೀತೆಗಳನ್ನು ಹಾಡಿದರು. ಕಾರ್ಯಕ್ರಮದಲ್ಲಿ ವಿಭೂತಿ ಬಸವಾನಂದರು, ಜಯದೇವ ಪ್ರಸಾದ ನಿಲಯದ ಕಾರ್ಯದರ್ಶಿ ಅಂದನೂರು ಮುಪ್ಪಣ್ಣ, ಕಣಕುಪ್ಪಿ ಮುರುಗೇಶಪ್ಪ, ಎಂ. ಜಯಕುಮಾರ್, ಮಹಾಲಿಂಗಪ್ಪ, ಹಾಸಬಾವಿ ಕರಿಬಸಪ್ಪ, ಲಂಬಿ ಮುರುಗೇಶ್, ಎಸ್.ಓಂಕಾರಪ್ಪ, ಮಹದೇವಮ್ಮ, ನಸೀರ್ ಅಹ್ಮದ್, ಎಚ್.ಜಿ.ಉಮೇಶ್, ಕುಂಟೋಜಿ ಚನ್ನಪ್ಪ, ಜಯದೇವಪ್ಪ, ವೀರೇಂದ್ರ ಇತರರಿದ್ದರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts