More

    ಅಣ್ಣಿಗೇರಿ ತಾಪಂ ಜೆಡಿಎಸ್ ಪಾಲು

    ಅಣ್ಣಿಗೇರಿ: ನೂತನ ತಾಲೂಕು ಪಂಚಾಯಿತಿಯ ಮೊದಲ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳು ಜೆಡಿಎಸ್ ಪಾಲಾಗಿವೆ.

    ಅಧ್ಯಕ್ಷರಾಗಿ ಇಬ್ರಾಹಿಂಪುರ ಕ್ಷೇತ್ರದ ಮಲ್ಲರಡ್ಡಿ ಹನುಮರೆಡ್ಡಿ ಕುರಹಟ್ಟಿ ಮತ್ತು ಉಪಾಧ್ಯಕ್ಷೆಯಾಗಿ ಭದ್ರಾಪುರ ಕ್ಷೇತ್ರದ ನಿರ್ಮಲಾ ಗಾಣಿಗೇರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಚುನಾವಣಾಧಿಕಾರಿ ಮೊಹಮ್ಮದ್ ಜುಬೇರ್ ಅವರು ಅವಿರೋಧ ಆಯ್ಕೆ ಘೊಷಿಸಿದರು.

    ಐದು ಸದಸ್ಯ ಸ್ಥಾನಗಳನ್ನು ಹೊಂದಿರುವ ತಾಪಂನಲ್ಲಿ ಮೂವರು ಜೆಡಿಎಸ್​ನವರು, ಬಿಜೆಪಿ ಮತ್ತು ಕಾಂಗ್ರೆಸ್​ನ ತಲಾ ಒಬ್ಬರು ಸದಸ್ಯರಿದ್ದಾರೆ.

    ಅಣ್ಣಿಗೇರಿ ತಹಸೀಲ್ದಾರ್ ಕೊಟ್ರೇಶ ಗಾಳಿ, ಜೆಡಿಎಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಎನ್.ಎಚ್. ಕೋನರಡ್ಡಿ ಅವರು ಅಭಿನಂದನೆ ಸಲ್ಲಿಸಿದರು.

    ವಿಜಯೋತ್ಸವ: ಜೆಡಿಎಸ್ ಕಾರ್ಯಕರ್ತರು ಪರಸ್ಪರ ಸಿಹಿ ಹಂಚಿ ವಿಜಯೋತ್ಸವ ಆಚರಿಸಿದರು. ಜಿಲ್ಲಾಧ್ಯಕ್ಷ ಬಿ.ಬಿ. ಗಂಗಾಧರಮಠ, ತಾಲೂಕು ಅಧ್ಯಕ್ಷ ಭಗವಂತಪ್ಪ ಪುಟ್ಟಣ್ಣವರ, ಜಿಲ್ಲಾ ಕಾರ್ಯದರ್ಶಿ ಫಯೀಮ ಅಳ್ನಾವರ, ತಾಪಂ ಸದಸ್ಯ ದೇವೇಂದ್ರಪ್ಪ ರೋಣದ, ಎಪಿಎಂಸಿ ಸದಸ್ಯ ನಾರಾಯಣ ಮಾಡೊಳ್ಳಿ, ಶಿವಶಂಕರ ಕಲ್ಲೂರ, ಸಿದ್ದಣ್ಣ ತೇಜಿ, ಡಿ.ಎಂ. ಶಲವಡಿ, ಶಂಕರು ಗಾಣಿಗೇರ, ಪ್ರದೀಪ ಲೆಂಕನಗೌಡ್ರ, ಸಿದ್ದಲಿಂಗಪ್ಪ ಮದ್ನೂರ, ಮೊದೀನಸಾಬ ನವಲಗುಂದ, ದಾವಲಸಾಬ ದರವಾನಿ, ಶ್ರೀಕಾಂತ ಕೋಳಿವಾಡ, ಖಾದರಸಾಬ ಮುಳಗುಂದ, ಅಶೋಕ ಕಿರೆಸೂರ, ಶೇಷರಡ್ಡಿ ಚಾಕಲಬ್ಬಿ, ಬಸು ತಳವಾರ ಇತರರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts