More

    ಅಣ್ಣಿಗೇರಿ ಅಮೃತೇಶ್ವರ ಮಹಾರಥೋತ್ಸವ

    ಅಣ್ಣಿಗೇರಿ: ಪಟ್ಟಣದ ಆರಾಧ್ಯದೈವ ಶ್ರೀ ಅಮೃತೇಶ್ವರ ದೇವಸ್ಥಾನದ ಜಾತ್ರಾ ಮಹೋತ್ಸವ ಸರ್ಕಾರದ ನಿಯಮದಂತೆ ಮಂಗಳವಾರ ಜರುಗಿತು. ರಥಕ್ಕೆ ಪೂಜೆ ಸಲ್ಲಿಸಿದ ಅರ್ಚಕರು ಉತ್ಸವ ಮೂರ್ತಿಯನ್ನು ರಥದಲ್ಲಿ ಪ್ರತಿಷ್ಠಾಪಿಸಿ ದಶಮಿ ತಿಥಿಯಲ್ಲಿ 5 ಹೆಜ್ಜೆ ಮುಂದಕ್ಕೆ ರಥ ಎಳೆದರು. ತದನಂತರ ಉತ್ಸವ ಮೂರ್ತಿಯನ್ನು ಪಲ್ಲಕ್ಕಿಯಲ್ಲಿರಿಸಿ ಶ್ರೀ ಸಿದ್ಧಲಿಂಗೇಶ್ವರ ದೇವಸ್ಥಾನದ ಪಾದಗಟ್ಟಿವರೆಗೆ ತೆರಳಿ ಪೂಜೆ ಸಲ್ಲಿಸಿದರು. ಸಂಜೆ 5 ಗಂಟೆಗೆ ರಥವನ್ನು 5 ಹೆಜ್ಜೆ ಹಿಂದೆ ಸರಿಸುವ ಮೂಲಕ ಜಾತ್ರಾ ಮಹೋತ್ಸವ ಸಂಪನ್ನಗೊಂಡಿತು.

    ಅಧಿಕಾರಿಗಳ ಕಾರ್ಯ ಶ್ಲಾಘನೀಯ: ಅಣ್ಣಿಗೇರಿ ಪೊಲೀಸರು ಭದ್ರತೆ ಒದಗಿಸುವುದರ ಜತೆಗೆ ಜಾತ್ರೆಗೆ ಬಂದ ಭಕ್ತರಿಗೆ ಪರಸ್ಪರ ಅಂತರ ಪಾಲನೆ, ಮಾಸ್ಕ್ ಧರಿಸುವುದರ ಕುರಿತು ಜಾಗೃತಿ ಮೂಡಿಸಿದರು. ಪಿಎಸ್​ಐ ಎಲ್.ಕೆ. ಜೂಲಕಟ್ಟಿ, ಸಿಪಿಐ ಸಿ.ಜಿ. ಮಠಪತಿ ಮತ್ತು ಸಿಬ್ಬಂದಿ ಭದ್ರೆತ ಒದಗಿಸಿದ್ದರು.

    ಹೂವಿನ ಮಾಲೆ ಅಲಂಕಾರ: ಸತತ 30 ವರ್ಷಗಳಿಂದ ನಿರಂತರವಾಗಿ ಕುರಬಗೇರಿ ಓಣಿ ಹಾಗೂ ಹೊಸಪೇಟೆ ಓಣಿಯ ಗುರು- ಹಿರಿಯರು 2 ದೊಡ್ಡ ಗಾತ್ರದ ಹೂವಿನ ಮಾಲೆಗಳನ್ನು ರಥಕ್ಕೆ ಅಲಂಕಾರ ಮಾಡುತ್ತ ಬಂದಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts