More

    ಅಖಿಲ ಭಾರತ ಅಂತರ್ ವಿವಿ ರಾಷ್ಟಿಯ ಉತ್ಸವ ಶರಣಬಸವ ವಿವಿ ವಿದ್ಯಾರ್ಥಿಗಳ ಸಾಧನೆ


    ವಿಜಯವಾಣಿ ಸುದ್ದಿಜಾಲ ಕಲಬುರಗಿ
    ಪಂಜಾಬ್‌ನ ಲುಧಿಯಾನ ಕೃಷಿ ವಿಶ್ವವಿದ್ಯಾಲಯದಲ್ಲಿ ಇತ್ತೀಚೆಗೆ ನಡೆದ ೩೭ನೇ ಅಂತರ್ ವಿಶ್ವವಿದ್ಯಾಲಯ ರಾಷ್ಟಿಯ ಯುವ ಉತ್ಸವ ಹುನರ್ ಸ್ಪಾಟ್ ಫೋಟೋಗ್ರಾಫಿಯಲ್ಲಿ ಚಿನ್ನದ ಪದಕ ಸೇರಿ ಮೆಹಂದಿ ಮತ್ತು ರಂಗೋಲಿ ಸ್ಪರ್ಧೆಯಲ್ಲಿ ತೃತೀಯ ಬಹುಮಾನ ಪಡೆಯುವ ಮೂಲಕ ಕಲಬುರಗಿ ಶರಣಬಸವ ವಿವಿ ವಿದ್ಯಾರ್ಥಿಗಳು ಪ್ರತಿಷ್ಠಿತ ಪ್ರಶಸ್ತಿ ಪಡೆದು ಸಾಧನೆ ಮೆರೆದಿದ್ದಾರೆ.
    ವ್ಯವಹಾರ ಅಧ್ಯಯನ ನಿಕಾಯದ ಪ್ರವಾಸೋದ್ಯಮ ವಿಭಾಗದ ಅಂತಿಮ ವರ್ಷದ ವಿದ್ಯಾರ್ಥಿ ಪ್ರವೀಣ್ ಪೂಜಾರಿ ವಿಶ್ವವಿದ್ಯಾಲಯದ ರಾಷ್ಟçಮಟ್ಟದ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆಯುವುದರ ಜತೆಗೆ ಸಾರ್ಕ್ ಅಂತರ್ ವಿವಿಯಲ್ಲಿ ಭಾಗವಹಿಸಲು ಅರ್ಹತೆ ಪಡೆದಿದ್ದಾರೆ.
    ವಿವಿಯ ಆರ್ಕಿಟೆಕ್ಚರ್ ವಿಭಾಗದ ನಾಲ್ಕನೇ ವರ್ಷದ ವಿದ್ಯಾರ್ಥಿ ಪ್ರಜ್ವಲ್ ರಂಗೋಲಿ ಸ್ಪರ್ಧೆಯಲ್ಲಿ ತೃತೀಯ, ರಾಷ್ಟಿçÃಯ ಯುವಜನೋತ್ಸವದ ಮೆಹಂದಿ ಸ್ಪರ್ಧೆಯಲ್ಲಿ ಆರ್ಕಿಟೆಕ್ಚರ್ ವಿಭಾಗದ ದ್ವಿತೀಯ ವರ್ಷದ ವಿದ್ಯಾರ್ಥಿನಿ ರ‍್ಹಾ ದೀಬಾ ತೃತೀಯ ಬಹುಮಾನ ಪಡೆದಿದ್ದಾರೆ.
    ಈ ವರ್ಷ ಫೆಬ್ರವರಿಯಲ್ಲಿ ಮೈಸೂರಿನ ಜೆಎಸ್‌ಎಸ್ ವಿವಿಯಲ್ಲಿ ನಡೆದ ೩೭ನೇ ಆಗ್ನೇಯ ವಲಯ ಅಂತರ್ ವಿವಿ ಯುವಜನೋತ್ಸವದಲ್ಲಿ ಈ ವಿದ್ಯಾರ್ಥಿಗಳು ತಮ್ಮ ಗಮನಾರ್ಹ ಪ್ರದರ್ಶನದೊಂದಿಗೆ ವಿಶ್ವವಿದ್ಯಾಲಯಕ್ಕೆ ಕೀರ್ತಿ ತಂದಿದ್ದಾರೆ.
    ವಿದ್ಯಾರ್ಥಿಗಳ ಸಾಧನೆಗೆ ಅಭಿನಂದನೆ ಸಲ್ಲಿಸಿದ ವಿವಿ ಡೀನ್ ಡಾ.ಲಕ್ಷಿö್ಮà ಪಾಟೀಲ್ ಮಾಕಾ ಮಾತನಾಡಿ, ಕಳೆದ ಮೂರು ವರ್ಷಗಳಲ್ಲಿ ವಿವಿ ಆಗ್ನೇಯ ವಲಯ ಮತ್ತು ರಾಷ್ಟಿçÃಯ ಯುವಜನೋತ್ಸವದಲ್ಲಿ ಮಾತ್ರ ಭಾಗವಹಿಸಿ ಆಗ್ನೇಯ ವಲಯ ಮಟ್ಟದ ಸ್ಪರ್ಧೆಗಳಲ್ಲಿ ದ್ವಿತೀಯ ಸ್ಥಾನ ಗಳಿಸಿದೆ. ಮೊದಲ ಮತ್ತು ಎರಡು ತೃತೀಯ ಬಹುಮಾನ ಗೆದ್ದುಕೊಂಡಿದೆ ಎಂದು ಸಂತಸ ವ್ಯಕ್ತಪಡಿಸಿದರು.
    ಶರಣಬಸವ ವಿವಿಗೆ ಪ್ರಶಸ್ತಿ ಮುಡಿಗೇರಿಸಿದ ವಿದ್ಯಾರ್ಥಿ ಹಾಗೂ ಮಾರ್ಗದರ್ಶಕ ಅಧ್ಯಾಪಕರನ್ನು ಶರಣಬಸವೇಶ್ವರ ಸಂಸ್ಥಾನದ ೮ನೇ ಮಹಾದಾಸೋಹ ಪೀಠಾಧಿಪತಿ ಶ್ರೀ ಡಾ.ಶರಣಬಸವಪ್ಪ ಅಪ್ಪ, ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಚೇರ್‌ಪರ್ಸನ್ ಮಾತೋಶ್ರೀ ಡಾ.ದಾಕ್ಷಾಯಿಣಿ ಅಪ್ಪ, ಕಾರ್ಯದರ್ಶಿ ಬಸವರಾಜ ದೇಶಮುಖ, ಕುಲಸಚಿವ ಡಾ.ಅನೀಲಕುಮಾರ ಬಿಡವೆ ಅಭಿನಂದಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts