More

    ಅಕ್ರಮ ಮರಳು ಅಡ್ಡೆ ಮೇಲೆ ದಾಳಿ

    ಗುತ್ತಲ: ಹರಳಹಳ್ಳಿ ಹಾಗೂ ಹಾವನೂರ ಗ್ರಾಮಗಳ ಅಕ್ರಮ ಮರಳು ಅಡ್ಡೆಗಳ ಮೇಲೆ ಉಪ ವಿಭಾಗಾಧಿಕಾರಿ ಎನ್. ತಿಪ್ಪೇಸ್ವಾಮಿ ನೇತೃತ್ವದ ಅಧಿಕಾರಿಗಳ ತಂಡ ಮಂಗಳವಾರ ದಾಳಿ ನಡೆಸಿತು.

    ಆರಂಭದಲ್ಲಿ ಹರಳಹಳ್ಳಿಯ ತುಂಗಭದ್ರಾ ನದಿ ಹಾಗೂ ಗ್ರಾಮಗಳ ಕೆಲವೆಡೆ ದಾಳಿ ನಡೆಸಿದ ಅಧಿಕಾರಿಗಳ ತಂಡವು, ಅಕ್ರಮವಾಗಿ ಸಂಗ್ರಹಿಸಿದ್ದ ಮರಳನ್ನು ವಶಪಡಿಸಿಕೊಂಡಿತು. ನಂತರ ಗಣಿಗಾರಿಕೆಗೆ ಬಳಸುತ್ತಿದ್ದ 8 ಬಿದಿರಿನ ತೆಪ್ಪಗಳನ್ನು ನಾಶಪಡಿಸಿ, 2 ಕಬ್ಬಿಣದ ತೆಪ್ಪಗಳನ್ನು ವಶಪಡಿಸಿಕೊಂಡಿತು. ನೀರಿನಲ್ಲಿ ಮುಳುಗಿಸಿದ್ದ ತೆಪ್ಪಗಳನ್ನು ಮೇಲೆತ್ತಿ ವಶಡಿಸಿಕೊಳ್ಳುವಂತೆ ಎಸಿ ತಿಪ್ಪೇಸ್ವಾಮಿ ಅವರು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

    ನಂತರ ಅಧಿಕಾರಿಗಳು ಹಾವನೂರ ಗ್ರಾಮದ ಬಳಿ ತುಂಗಭದ್ರಾ ನದಿಗೆ ತೆರಳಿ ಅಕ್ರಮವಾಗಿ ಮರಳು ಗಣಿಗಾರಿಕೆ ನಡೆಸುತ್ತಿದ್ದ ಸ್ಥಳ ಪರಿಶೀಲಿಸಿದರು. ಅಧಿಕಾರಿಗಳ ಆಗಮನ ಸುದ್ದಿ ತಿಳಿಯುತ್ತಿದ್ದಂತೆ ಅಕ್ರಮದಲ್ಲಿ ತೊಡಗಿದ್ದವರು ಪರಾರಿಯಾಗಿದ್ದರು. ಒಂದು ಟ್ರ್ಯಾಕ್ಟರ್​ನಷ್ಟು ಮರಳು ಹಾಗೂ ಗಣಿಕಾರಿಕೆಗೆ ಬಳಸುತ್ತಿದ್ದ ಸಲಕರಣೆಗಳನ್ನು ವಶಕ್ಕೆ ಪಡೆದುಕೊಂಡರು. ನದಿ ಪಕ್ಕದ ಕೆರೆಯೊಂದಲ್ಲಿ ನಿಂತಿದ್ದ ಟ್ರ್ಯಾಕ್ಟರ್, ಲಾರಿ, ಹಾಗೂ ಟಿಪ್ಪರ್​ಗಳನ್ನು ಪರಿಶೀಲಿಸಿದರು. ನಂಬರ್ ಪ್ಲೇಟ್ ಇಲ್ಲದ ಟ್ರ್ಯಾಕ್ಟರ್​ಗಳ ಮಾಲೀಕರನ್ನು ಕರೆಸಿ ದಾಖಲೆಗಳನ್ನು ಪರಿಶೀಲಿಸಿ ಎಂದು ಎ.ಸಿ. ಸೂಚಿಸಿದರು. ಅಲ್ಲದೆ, ನಂಬರ್ ಪ್ಲೇಟ್ ಇಲ್ಲದ ವಾಹನಗಳ ಬಗ್ಗೆ ಮಾಹಿತಿ ಸಂಗ್ರಹಿಸಿ ಕ್ರಮ ಕೈಗೊಳ್ಳುವಂತೆ ಸಾರಿಗೆ ಇಲಾಖೆ ಅಧಿಕಾರಿಗೆ ದೂರವಾಣಿ ಮೂಲಕ ಸೂಚಿಸಿದರು.

    ದಾಳಿ ವೇಳೆ ಕೆಲವರು ಅನುಮಾನಾಸ್ಪದವಾಗಿ ಸಂಚರಿಸುತ್ತಿದ್ದಾಗ ಅವರನ್ನು ಬೆನ್ನಟ್ಟಿದಾಗ ಅವರೆಲ್ಲರೂ ಸಿನಿಮಿಯ ರೀತಿಯಲ್ಲಿ ಪರಾರಿಯಾದರು.

    ದಾಳಿಯಲ್ಲಿ ತಹಸೀಲ್ದಾರ್ ಶಂಕರ ಜಿ.ಎಸ್, ಡಿವೈಎಸ್ಪಿ ವಿಜಯಕುಮಾರ ಎಂ. ಸಂತೋಷ, ಸಿಪಿಐ ಸಂತೋಷ ಪವಾರ, ಪಿಎಸ್​ಐ ಶಂಕರಗೌಡ ಪಾಟೀಲ, ಉಪ ತಹಸೀಲ್ದಾರ್ ಎಂ.ಡಿ. ಕಿಚಡೇರ, ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಮಧುಸೂದನ, ಕಂದಾಯ ನಿರೀಕ್ಷಕ ಆರ್.ಎನ್. ಮಲ್ಲಾಡದ, ಪ್ರಕಾಶ ಉಜ್ಜನಿ, ಪ್ರಶಾಂತ ಲೆಕ್ಕಣ್ಣನವರ, ಫಕೀರೇಶ ರ್ಬಾ, ಗ್ರಾಮ ಸಹಾಯಕರಾದ ಮಾರುತಿ, ಜಾಕೀರ, ರಾಮಚಂದ್ರ, ಇತರರಿದ್ದರು.

    ಒಬ್ಬನ ಬಂಧನ: ಅಧಿಕಾರಿಗಳ ದಾಳಿ ವೇಳೆ ಪರಾರಿಯಾಗಲು ಯತ್ನಿಸಿದ ಇಬ್ಬರಿಗೆ ಸಹಾಯ ಮಾಡಿದ ಆರೋಪದ ಮೇಲೆ ಒಬ್ಬನನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಅಧಿಕಾರಿಗಳು ಮರಳಿ ಹೋಗುವುದನ್ನೇ ಕದ್ದು ನೋಡುತ್ತಿದ್ದವರನ್ನು ಗಮನಿಸಿದ ಎಸಿ ಎನ್. ತಿಪ್ಪೇಸ್ವಾಮಿ ಅವರತ್ತ ನುಗ್ಗಿದರು. ಕಂದಾಯ ಅಧಿಕಾರಿಗಳು ಹಾಗೂ ಪೊಲೀಸರು ಬೆನ್ನಟ್ಟಿದ್ದರಿಂದ ಅನೇಕರು ಮುಳ್ಳು ಕಂಟೆಗಳನ್ನೆದೆ ಎಲ್ಲೆಂದರಲ್ಲಿ ದಿಕ್ಕಾಪಾಲಾಗಿ ಓಡಿ ಹೋದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts