More

    ಅಕ್ಕಿ ಪ್ಯಾಕೆಟ್​ನಲ್ಲಿ ಹುಳು, ಮಣ್ಣು

    ಹುಬ್ಬಳ್ಳಿ: ಹುಳು ಮತ್ತು ಮಣ್ಣು ಸೇರಿದ ಕಳಪೆ ಅಕ್ಕಿಯನ್ನು ವಿತರಿಸಲಾಗಿದೆ ಎಂದು ಶಿವಪುತ್ರನಗರ ಬಡ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಸುಮಾರು 15-20 ಜನರು ಭಾನುವಾರ ಬೆಳಗ್ಗೆ ತಮ್ಮ ಬಡಾವಣೆಯಲ್ಲಿ ಜಮಾಯಿಸಿ ಹುಳು ಮತ್ತು ಮಣ್ಣು ಸೇರಿದ್ದ ಅಕ್ಕಿ ಪ್ಯಾಕೆಟ್ ಪ್ರದರ್ಶಿಸಿದರು. ‘ಮಾಜಿ ಮೇಯರ್ ಪ್ರಕಾಶ ಕ್ಯಾರಕಟ್ಟಿ ಕಡೆಯವರು ತಮಗೆ ಕಳಪೆ ಅಕ್ಕಿ ವಿತರಿಸಿದ್ದಾರೆ. ಅದು ಜಾನುವಾರುಗಳಿಗೆ ಹಾಕಲು ಸಹ ಯೋಗ್ಯವಾಗಿಲ್ಲ’ ಎಂದು ಆರೋಪಿಸಿದರು.

    ಶನಿವಾರದಂದು ಇವರಿಗೆ ಅಕ್ಕಿ ಪ್ಯಾಕೆಟ್ ವಿತರಿಸಲಾಗಿತ್ತು. ಲಾಕ್​ಡೌನ್ ಹಿನ್ನೆಲೆಯಲ್ಲಿ ಪ್ರಕಾಶ ಕ್ಯಾರಕಟ್ಟಿ ಅವರು ಬಡವರಿಗೆ ತಲಾ 2 ಕೆಜಿ ಅಕ್ಕಿ ಪ್ಯಾಕೆಟ್ ವಿತರಿಸಿದ್ದಾರೆ.

    ‘ಅಂದಾಜು 1 ಸಾವಿರ ಕುಟುಂಬಗಳಿಗೆ ಒಟ್ಟು 25 ಟನ್ ಅಕ್ಕಿ ವಿತರಣೆ ಮಾಡಿದ್ದೇನೆ. ಯಾರೊಬ್ಬರೂ ದೂರು ನೀಡಿಲ್ಲ. ರಾಜಕೀಯ ದುರುದ್ದೇಶದಿಂದ ಕೇವಲ 15-20 ಜನ ಸುಳ್ಳು ಆರೋಪ ಮಾಡಿದ್ದಾರೆ. ಬಿಜೆಪಿಯ ಕೆಲವರು ನನ್ನ ವಿರುದ್ಧ ದ್ವೇಷ ಸಾಧಿಸಲು ಬಡವರನ್ನು ಬಳಸಿಕೊಂಡಿದ್ದಾರೆ. ಪ್ರತಿ ಕೆಜಿಗೆ 33 ರೂ. ನಂತೆ ಎಪಿಎಂಸಿ ಮಾರುಕಟ್ಟೆಯಲ್ಲಿ ಅಕ್ಕಿ ಖರೀದಿಸಿದ್ದೇನೆ. ಅದಕ್ಕೆ ಸಂಬಂಧಿಸಿದಂತೆ ಬಿಲ್ ಸಹ ಇದೆ. ಯಾರು ಬೇಕಾದರೂ ಬಂದು ಪರೀಕ್ಷಿಸಬಹುದು’ ಎಂದು ಪ್ರಕಾಶ ಕ್ಯಾರಕಟ್ಟಿ ಪ್ರತಿಕ್ರಿಯೆ ನೀಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts