More

    ಅಂಧತ್ವ ಮುಕ್ತ ಕ್ಷೇತ್ರ ಮಾಡುವ ಗುರಿ

    ಬೀದರ್: ಬೀದರ್ ದಕ್ಷಿಣ ವಿಧಾನಸಭೆ ಕ್ಷೇತ್ರವನ್ನು ಅಂಧತ್ವ ಮುಕ್ತವನ್ನಾಗಿಸುವ ಗುರಿ ಹೊಂದಲಾಗಿದೆ ಎಂದು ಶಾಸಕ ಬಂಡೆಪ್ಪ ಖಾಶೆಂಪುರ ಹೇಳಿದರು.
    ನಯೋನಿಕ್ ಎಸ್ಸಿಲಾರ್ ನೇತ್ರ ಅನುಸೇವಾ ಸಂಸ್ಥೆಯು ಸಾತೋಳಿ ಗ್ರಾಮದಲ್ಲಿ ಶುಕ್ರವಾರ ಏರ್ಪಡಿಸಿದ್ದ ನಮ್ಮ ಮನೆ ಅನಗತ್ಯ ಅಂಧತ್ವ ಮುಕ್ತ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಕ್ಷೇತ್ರದ 96 ಹಳ್ಳಿಗಳಲ್ಲಿ ಪ್ರಾಯೋಗಿಕವಾಗಿ ಈ ಯೋಜನೆ ಜಾರಿಗೊಳಿಸಲಾಗಿದೆ. ದೇಶದಲ್ಲೇ ಮೊದಲ ಬಾರಿ ಇಂಥ ಉತ್ತಮ ಕಾರ್ಯ ಕ್ಷೇತ್ರದಲ್ಲಿ ಕೈಗೆತ್ತಿಕೊಳ್ಳಲಾಗಿದೆ ಎಂದರು.
    ಕಳೆದ ವರ್ಷ ಕಮಠಾಣದಲ್ಲಿ ಈ ಕಾರ್ಯಕ್ರಮ ಆರಂಭವಾಗಿ ಶಾಲೆ ಮಕ್ಕಳಿಗೆ ಉಚಿತ ಕನ್ನಡಕ ವಿತರಿಸಲಾಗಿದೆ. 2.50 ಲಕ್ಷ ಫಲಾನುಭವಿಗಳ ಪೈಕಿ ಈವರೆಗೆ 1.4 ಲಕ್ಷ ಜನರ ನೇತ್ರ ತಪಾಸಣೆ ಮಾಡಲಾಗಿದೆ. ಮುಂದಿನ ಎರಡು ವರ್ಷಗಳಲ್ಲಿ 8 ಸಾವಿರ ದೃಷ್ಟಿಹೀನರಿಗೆ ಶಸ್ತ್ರಚಿಕಿತ್ಸೆ ಮಾಡಲಾಗುವುದು. 60 ಸಾವಿರ ಜನರಿಗೆ ಕನ್ನಡಕ ವಿತರಿಸುವ ಗುರಿ ಹೊಂದಲಾಗಿದೆ ಎಂದು ಹೇಳಿದರು.
    ಅನುಸೇವಾ ಸಂಸ್ಥೆ ನಿರ್ದೇಶಕ ಪ್ರಶಾಂತ ಮಾತನಾಡಿ, ದೇಶದಲ್ಲೇ ಬೀದರ್ ದಕ್ಷಿಣ ಮಾದರಿ ಕ್ಷೇತ್ರವಾಗಿ ತೆಗೆದುಕೊಂಡು ಉಚಿತ ನೇತ್ರ ತಪಾಸಣೆ, ಶಸ್ತ್ರಚಿಕಿತ್ಸೆ ಹಾಗೂ ಕನ್ನಡಕ ವಿತರಿಸುವ ಗುರಿ ನಮ್ಮದಾಗಿದೆ. ಶೇ.19 ದೃಷ್ಟಿಹೀನರು ಕನ್ನಡಕ ಬಳಸದೆ ಅಂಧತ್ವಕ್ಕೆ ಒಳಗಾಗಿದ್ದಾರೆ. ಇಂಥ ಸಮಸ್ಯೆ ನಿವಾರಣೆಗೆ ಇಡೀ ಜಿಲ್ಲೆಯನ್ನು ಅಂಧತ್ವ ಮುಕ್ತ ಮಾಡುವ ಉದ್ದೇಶವಿದೆ ಎಂದರು.
    ಜಿಪಂ ಸದಸ್ಯ ಬಾಬುರಾವ ಮಲ್ಕಾಪುರೆ, ನಿವೃತ್ತ ಡಿಎಚ್ಒ ಮಾರ್ಥಂಡರಾವ ಖಾಶೆಂಪುರಕರ್ ಮಾತನಾಡಿದರು. ಗ್ರಾಪಂ ಅಧ್ಯಕ್ಷ ರಾಜಕುಮಾರ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಕುಷ್ಠರೋಗ ಅಧಿಕಾರಿ ಡಾ.ರಾಜಶೇಖರ ಪಾಟೀಲ್, ಡಾ.ನಿವೇದಿತಾ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts