More

    ಅಂತಾರಾಷ್ಟ್ರೀಯ ಸಮಾವೇಶ

    ಬೆಳಗಾವಿ: ಕೆಎಲ್‌ಇ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ರಿಸರ್ಚ್ ಕೌನ್ಸ್‌ಲಿಂಗ್ ಸೆಲ್ ಮತ್ತು ಮನೋವಿಜ್ಞಾನ ವಿಭಾಗ ಜೆಎನ್‌ಎಂಸಿ ಕಾಹೇರ್ ವತಿಯಿಂದ ವಿಭಾಗದಲ್ಲಿ ಶುಕ್ರವಾರ ಮಾನಸಿಕ ಆರೋಗ್ಯ ಕುರಿತು ಒಂದು ದಿನದ ಅಂತಾರಾಷ್ಟ್ರೀಯ ಸಮಾವೇಶ ಜರುಗಿತು.

    ಮನೋವಿಜ್ಞಾನಿ ಡಾ.ಆನೇಟ್, ಕೆಎಲ್‌ಇ ಡಾ. ಪ್ರಭಾಕರ ಕೋರೆ ಚಾರಿಟೇಬಲ್ ಆಸ್ಪತ್ರೆ ನಿರ್ದೇಶಕ ಡಾ.ದಯಾನಂದ ಸಮಾವೇಶ ಉದ್ಘಾಟಿಸಿದರು. ಮಾನಸಿಕ ಆರೋಗ್ಯದ ಮಹತ್ವವನ್ನು ಆನೇಟ್ ವಿವರಿಸಿದರು. ಮಾನಸಿಕ ಆರೋಗ್ಯ ನಿರ್ವಹಣೆಯಲ್ಲಿ ಕುಟುಂಬದ, ಸಮಾಜ ಹಾಗೂ ಶಿಕ್ಷಕರ ಪಾತ್ರ ವಿವರಿಸಿದರು. ಡಾ.ದಯಾನಂದ ಅವರು, ಮಾನಸಿಕ ಆರೋಗ್ಯದಲ್ಲಿ ಮನೋವಿಜ್ಞಾನಿಗಳ ಹಾಗೂ ಆಪ್ತ ಸಮಾಲೋಚಕರ ಪ್ರಮುಖ ಪಾತ್ರ ವಿವರಿಸಿದರು. ಕಾಹೆರ್ ಉಪ ಕುಲಸಚಿವ ಡಾ. ಗಣಾಚಾರಿ ಸ್ವಾಗತಿಸಿದರು. ಕಾಹೆರ್ ಕೌನ್ಸೆಲಿಂಗ್ ಸೆಲ್ ಮತ್ತು ಮನೋವಿಜ್ಞಾನ ವಿಭಾಗದ ಮುಖ್ಯಸ್ಥೆ ಡಾ.ಯಾಸ್ಮಿನ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಕ್ಯಾರಲ್ ಡಿಸೋಜಾ, ರೋಸಿ ಶಹರ್ ಸೇರಿ ಉಪಸ್ಥಿತರಿದ್ದರು. ಡಾ. ಅಶ್ವಿನಿ ವಂದಿಸಿದರು. ಸಮಾವೇಶದಲ್ಲಿ 300 ಜನ ಭಾಗವಹಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts