More

    ಅಂತಾರಾಜ್ಯ ಪ್ರಯಾಣಕ್ಕೆ ಹೊಸ ಮಾರ್ಗದರ್ಶಿ ಸೂತ್ರ

    ಧಾರವಾಡ: ಭಾರತ ಸರ್ಕಾರ ವಲಸೆ ಕಾರ್ವಿುಕರು, ಪ್ರವಾಸಿಗರು, ಯಾತ್ರಿಕರು, ವಿದ್ಯಾರ್ಥಿಗಳು, ಇತರ ಜನರಿಗೆ ಅಂತಾರಾಜ್ಯ ಪ್ರವಾಸಕ್ಕೆ ಅವಕಾಶ ಕಲ್ಪಿಸಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಹೊಸ ಮಾರ್ಗದರ್ಶಿ ಸೂತ್ರಗಳನ್ನು ಪ್ರಕಟಿಸಿದೆ. ಜಿಲ್ಲೆಯಿಂದ ಹೊರ ರಾಜ್ಯಗಳಿಗೆ ತೆರಳುವವರು ಈ ಅವಕಾಶ ಬಳಸಿಕೊಂಡು ಇ-ಪಾಸ್ ಪಡೆದು ವಾಹನಗಳ ವ್ಯವಸ್ಥೆ ಮಾಡಿಕೊಂಡು ತೆರಳಬಹುದು ಎಂದು ಜಿಲ್ಲಾಧಿಕಾರಿ ದೀಪಾ ಚೋಳನ್ ತಿಳಿಸಿದ್ದಾರೆ.

    ಕರ್ನಾಟಕದಲ್ಲಿ ಸ್ಥಗಿತವಾಗಿರುವ ಹೊರರಾಜ್ಯಗಳ ಜನರು http://sevasindhu.karnataka.gov.in ವೆಬ್​ಸೈಟ್ ಮೂಲಕ ಟ್ರಾವೆಲ್ ಟು ಅದರ್ ಇಂಡಿಯನ್ ಸ್ಟೇಟ್ಸ್ ಫ್ರಾಮ್ ಕರ್ನಾಟಕ ಎಂದು ಆಯ್ಕೆ ಮಾಡಿ ನೋಂದಣಿ ಮಾಡಿಕೊಳ್ಳಬೇಕು. ಅರ್ಜಿದಾರರು ನೀಡಿದ ಮೊಬೈಲ್ ಸಂಖ್ಯೆಗೆ ಸ್ವೀಕೃತಿ ಬರುತ್ತದೆ. ಅರ್ಜಿಯನ್ನು ಸಂಬಂಧಿಸಿದ ರಾಜ್ಯದ ನೋಡಲ್ ಅಧಿಕಾರಿಗಳು ಮತ್ತು ಕರ್ನಾಟಕದ ನೋಡಲ್ ಅಧಿಕಾರಿಗಳು ಪರಿಶೀಲಿಸಿ ಅನುಮೋದಿಸುತ್ತಾರೆ. ನಂತರ ಅರ್ಜಿದಾರರಿಗೆ ಎಸ್​ಎಂಎಸ್ ಸಂದೇಶದ ಮೂಲಕ ಇ-ಪಾಸ್ ಪಡೆಯುವ ಲಿಂಕ್ ಕಳುಹಿಸಲಾಗುತ್ತದೆ. ಇ-ಪಾಸ್ ದೊರಕಿದ ನಂತರ ಪ್ರಯಾಣಿಸಲು ಒಂದು ವಾರದ ಕಾಲಾವಕಾಶ ಇರುತ್ತದೆ.

    ಇ-ಪಾಸ್ ಹೊಂದಿರುವವರು ತಮ್ಮ ಸಂತ ಅಥವಾ ಬಾಡಿಗೆ ಅಥವಾ ಕರಾರು ಒಪ್ಪಂದದ ಬಸ್​ಗಳ ಮೂಲಕ ಪ್ರಯಾಣ ಕೈಗೊಳ್ಳಬಹುದು. ಒಂದು ಕಾರ್​ನಲ್ಲಿ 3, ದೊಡ್ಡ ಕಾರ್​ಗಳಲ್ಲಿ (ಎಸ್​ಯುುವಿ) 5, ವ್ಯಾನ್​ಗಳಲ್ಲಿ 10 ಹಾಗೂ ಬಸ್​ಗಳಲ್ಲಿ 25 ಜನ ಪ್ರಯಾಣಿಸಲು ಅವಕಾಶವಿದೆ. ಈ ನಿಯಮಗಳು ರಾಜ್ಯದ ಗಡಿಭಾಗದವರೆಗೆ ಅನ್ವಯಿಸುತ್ತವೆ. ನಂತರ ಅಂತಾರಾಜ್ಯಗಳಲ್ಲಿ ಅಲ್ಲಿನ ನಿಯಮಗಳನ್ನು ಪಾಲಿಸುವುದು ಪ್ರಯಾಣಿಕರ ಕರ್ತವ್ಯ. ವೈದ್ಯಕೀಯ ತಪಾಸಣೆ ಹಾಗೂ ಅಧಿಕೃತ ಗುರುತಿನ ಚೀಟಿಗಳೊಂದಿಗೆ ಪ್ರಯಾಣಿಸಬೇಕು. ಮಾಹಿತಿಗೆ ಮತ್ತು ತುರ್ತು ಸಂದರ್ಭಗಳಿಗೆ ದೂ: 080 22636800 ಸಂರ್ಪಸಬಹುದು.

    ಹೊರರಾಜ್ಯಗಳಲ್ಲಿ ಸ್ಥಗಿತವಾಗಿರುವ ಕರ್ನಾಟಕ ರಾಜ್ಯದ ಜನರು http:// http://sevasindhu.karnataka.gov.in ವೆಬ್​ಸೈಟ್ ಮೂಲಕ ಟ್ರಾವೆಲ್ ಟು ಕರ್ನಾಟಕ ಫ್ರಾಮ್ ಅದರ್ ಇಂಡಿಯನ್ ಸ್ಟೇಟ್ಸ್ ಆಯ್ಕೆ ಮಾಡಿ ನೋಂದಣಿ ಮಾಡಿಕೊಳ್ಳಬೇಕು. ಇ-ಪಾಸ್ ಪಡೆಯಲು ಹಾಗೂ ಪ್ರಯಾಣಕ್ಕೆ ಮೇಲಿನ ಪ್ರಕ್ರಿಯೆ ಅನುಸರಿಸಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts