More

    ಅಂಗವಿಕಲರಿಗೆ ‘ಎಲೆಕ್ಟ್ರಿಕ್ ಕ್ವಾಡ್ ಬೈಕ್’

    ಶಿವಮೊಗ್ಗ: ನಗರದ ಜೆಎನ್​ಎನ್ ಇಂಜಿನಿಯರಿಂಗ್ ಕಾಲೇಜಿನ ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗದ ವಿದ್ಯಾರ್ಥಿಗಳು ಅಂಗವಿಕಲರಿಗೆ ಅನುಕೂಲವಾಗುವ ವಿದ್ಯುತ್ ಚಾಲಿತ ರಿವರ್ಸ್ ಗೇರ್ ಹೊಂದಿರುವ ಬೈಕ್ ವಿನ್ಯಾಸಗೊಳಿಸಿದ್ದಾರೆ.

    ಅಂಗವಿಕಲರು ವಾಹನ ಚಾಲನೆ ಮಾಡುವ ಸಂದರ್ಭದಲ್ಲಿ ವಾಹನವನ್ನು ಹಿಂದಕ್ಕೆ ತೆಗೆದುಕೊಳ್ಳುವುದು, ತಿರುಗಿಸುವುದು ಬಹಳ ಸಮಸ್ಯೆ. ಅದನ್ನು ಗಮನದಲ್ಲಿರಿಸಿಕೊಂಡು ಎಲೆಕ್ಟ್ರಿಕ್ ಕ್ವಾಡ್ ಬೈಕ್ ರೂಪಿಸಲಾಗಿದೆ. 4 ಚಕ್ರ ಹೊಂದಿರುವ ಈ ವಾಹನದಲ್ಲಿ 2 ಬಟನ್​ಗಳಿವೆ. ಇದನ್ನು ಬಳಸಿ ವಾಹನವನ್ನು ಮುಂದಕ್ಕೆ ಇಲ್ಲವೇ ಹಿಂದಕ್ಕೆ ಚಾಲನೆ ಮಾಡಬಹುದಾಗಿದೆ.

    ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ಎಸ್.ಜೆ.ಅಮಿತ್ ಕುಮಾರ್ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳಾದ ಎ.ಶಬರೀಶ್, ಎಂ.ಶ್ರೇಯಸ್, ನಿರಂಜನ್ ತಡಸದ, ಚಂದನ್ ಕುಮಾರ್ ಅವರನ್ನೊಳಗೊಂಡ ತಂಡ ಈ ವಿನೂತನ ವಾಹನ ರೂಪಿಸಿದೆ. ರಾಜ್ಯ ಸರ್ಕಾರ ಜೆಎನ್​ಎನ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಸ್ಥಾಪಿಸಿರುವ ನ್ಯೂ ಏಜ್ ಇನ್ನೋವೇಷನ್ ನೆಟ್​ವರ್ಕ್ ಸೆಂಟರ್ ಮೂಲಕ ಈ ವಾಹನ ನಿರ್ವಣಕ್ಕೆ ಆರ್ಥಿಕ ಸಹಕಾರ ನೀಡಲಾಗಿದೆ.

    ವಾಹನದ ವಿಶೇಷತೆಗಳಿವು: ಸವಾರರಿಗೆ ಅದ್ಭುತ ಮತ್ತು ಆರಾಮದಾಯಕ ಅನುಭವ ನೀಡುವುದರ ಜತೆಗೆ ಪರಿಸರ ಕಾಳಜಿ ಗಮನದಲ್ಲಿಟ್ಟುಕೊಂಡು ವಾಹನ ಅಭಿವೃದ್ದಿಪಡಿಸಲಾಗಿದೆ. ಬ್ಯಾಟರಿಯನ್ನು 7-8 ತಾಸು ಚಾರ್ಜ್ ಮಾಡಿದರೆ ಸುಮಾರು 90 ಕಿ.ಮೀ. ಚಲಿಸಲಿದೆ. ಈ ನೂತನ ವಿನ್ಯಾಸದಿಂದ ವಾಹನ ಕೈಗಾರಿಕೆಗಳ ಕ್ಷೇತ್ರದ ಪ್ರಸ್ತುತ ಮತ್ತು ಭವಿಷ್ಯದಲ್ಲಿನ ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗದ ಸಾಮರ್ಥ್ಯವನ್ನು ಸಾಬೀತುಪಡಿಸಿದೆ.

    ಮುಂದಿನ ದಿನಗಳಲ್ಲಿ ವಾಹನ ಉದ್ಯಮ ಸಂಸ್ಥೆಗಳೊಂದಿಗೆ ಸಹಭಾಗಿತ್ವ ಸಾಧಿಸುವ ಮೂಲಕ 2021ರ ವೇಳೆಗೆ ಎಲೆಕ್ಟ್ರಿಕ್ ಮೊಬಿಲಿಟಿ ಸೇವೆಗೆ ಚಾಲನೆ ನೀಡುವ ಇಂಗಿತ ಈ ತಂಡದ ಸದಸ್ಯರದ್ದಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts