More

    ಅಂಗನವಾಡಿ ಕೇಂದ್ರಕ್ಕೆ ತಿಂಗಳಿಂದ ಬೀಗ!

    ಲಕ್ಷೆ್ಮೕಶ್ವರ: ಗಂಡ-ಹೆಂಡತಿ ಜಗಳದಲ್ಲಿ ಕೂಸು ಬಡವಾಯಿತು ಎನ್ನುವಂತೆ ಗ್ರಾಮಸ್ಥರ ಜಗಳದಲ್ಲಿ ಅಂಗನವಾಡಿ ಕೇಂದ್ರಕ್ಕೆ ಒಂದು ತಿಂಗಳಿಂದ ಬೀಗ ಜಡಿದ ಘಟನೆ ತಾಲೂಕಿನ ಸೂರಣಗಿ ಗ್ರಾಮದಲ್ಲಿ ನಡೆದಿದೆ. ಇದರಿಂದ ಮಕ್ಕಳು, ಬಾಣಂತಿಯರು ಪೌಷ್ಟಿಕ ಆಹಾರದಿಂದ ವಂಚಿತರಾಗಿದ್ದಾರೆ.

    ಗ್ರಾಮದ ಅಂಗನವಾಡಿ ಕೇಂದ್ರ ಸಂಖ್ಯೆ 89ರಲ್ಲಿ ಸುಜಾತಾ ದನಕಟ್ಟವರ ಹಾಗೂ ಕುಸುಮಾ ಲಮಾಣಿ ಸಹಾಯಕಿರಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಇವರಲ್ಲಿ ಸುಜಾತಾ ಅವರಿಗೆ ಅಂಗನವಾಡಿ ಕಾರ್ಯಕರ್ತೆಯ ಹುದ್ದೆಗೆ ನಿಯಮಾವಳಿಯಂತೆ ಮುಂಬಡ್ತಿ ನೀಡಲಾಗಿದೆ. ಆದರೆ, ಕುಸುಮಾ ಲಮಾಣಿ ಅವರ ಬೆಂಬಲಿಗರು ಈ ಕ್ರಮವನ್ನು ವಿರೋಧಿಸಿ ಕಳೆದೊಂದು ತಿಂಗಳಿನಿಂದ ಅಂಗನವಾಡಿಯ ಬೀಗ ತೆರೆಯಲು ಬಿಟ್ಟಿಲ್ಲ. ಇದರಿಂದ ಕೇಂದ್ರದ 98 ಮಕ್ಕಳು ಶಿಕ್ಷಣ ಮತ್ತು ಪೌಷ್ಟಿಕ ಆಹಾರದಿಂದ ವಂಚಿತರಾಗುತ್ತಿದ್ದಾರೆ. ಅಲ್ಲದೆ 7 ಜನ ಗರ್ಭಿಣಿಯರು, 5 ಜನ ಬಾಣಂತಿಯರು ಸೌಲಭ್ಯದಿಂದ ಹೊರಗುಳಿದಿದ್ದಾರೆ.

    ಈ ಕುರಿತು ಸಿಡಿಪಿಒ ಮೃತ್ಯುಂಜಯ ಗುಡ್ಡದನ್ವೇರಿ ಸಾರ್ವಜನಿಕರಿಗೆ ತಿಳುವಳಿಕೆ ನೀಡಿದರೂ ಗ್ರಾಮಸ್ಥರು ಒಪ್ಪುತ್ತಿಲ್ಲ. ಸುಜಾತಾ ಅವರಿಗೆ ನೀಡಿರುವ ಮುಂಬಡ್ತಿ ಕಾನೂನು ಬದ್ಧವಾಗಿದೆ. ವಿನಾಕಾರಣ ವಿರೋಧಿಸುವುದು ಸರಿಯಲ್ಲ ಎಂದು ಹೇಳಿ ಅಂಗನವಾಡಿ ಬೀಗ ತೆಗೆಯಲು 2 ಬಾರಿ ಪ್ರಯತ್ನ ಮಾಡಿದರೂ, ಗ್ರಾಮಸ್ಥರು ಅಡ್ಡಿಪಡಿಸಿದ್ದಾರೆ. ಒಂದು ತಿಂಗಳಿಂದ ಬೀಗ ತೆರೆಯದಿರುವುದರಿಂದ ಕೇಂದ್ರದಲ್ಲಿರುವ ಆಹಾರ ಪದಾರ್ಥಗಳು ಏನಾಗಿವೆಯೋ ಗೊತ್ತಿಲ್ಲ.

    ಇಬ್ಬರ ಜಗಳದಲ್ಲಿ ಮಕ್ಕಳಿಗೆ ಅನ್ಯಾಯವಾಗಬಾರದು. ಇದರಿಂದ ಗ್ರಾಮದಲ್ಲಿ ಗೊಂದಲದ ವಾತಾವರಣ ನಿರ್ವಣವಾಗಿದೆ. ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

    ಅಂಗನವಾಡಿ ಸಹಾಯಕಿಯ ಮುಂಬಡ್ತಿ ನಿಯಮಾವಳಿಯಂತೆ ನಡೆದಿದೆ. ಆದರೆ, ಕೆಲ ಗ್ರಾಮಸ್ಥರು ಏನೇ ಹೇಳಿದರೂ ಕೇಳುವ ಸ್ಥಿ್ಥಯಲ್ಲಿಲ್ಲ. ಅಂಗನವಾಡಿ ಕೇಂದ್ರದ ಬೀಗ ತೆಗೆಯಲು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಇದರಿಂದ ಮಕ್ಕಳು, ಬಾಣಂತಿಯರು, ಗರ್ಭಿಣಿಯರು ಸೌಲಭ್ಯದಿಂದ ವಂಚಿತರಾಗುತ್ತಿದ್ದಾರೆ. ಈ ಬಗ್ಗೆ ಇಲಾಖೆಯ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದಿದ್ದು, ಸಮಸ್ಯೆ ಬಗೆಹರಿಸುವಂತೆ ಲಕ್ಷೆ್ಮೕಶ್ವರ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದೇನೆ.
    | ಮೃತ್ಯುಂಜಯ ಗುಡ್ಡದನ್ವೇರಿ, ಸಿಡಿಪಿಒ

    Array

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts